ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಮಣೂರು ನಿವಾಸಿ ದಾಕ್ಷಾಯಿಣಿ ರಾವ್ ಅವರು ಮಣೂರು ಮಹಾಲಿಂಗೇಶ್ವರ ಸನ್ನಿಧಾನದಲ್ಲಿರುವ ಶ್ರೀ ಹೇರಂಬ ಮಹಾಗಣಪತಿಯ ಸನ್ನಿಧಿಗೆ ಸುಮಾರು ₹30,000 ಮೌಲ್ಯದ ಸ್ಫಟಿಕ ರುದ್ರಾಕ್ಷಿ ಮಾಲೆಯನ್ನು ಸಮರ್ಪಿಸಿದರು.
ಶ್ರೀ ದೇಗುಲದಲ್ಲಿ ಶ್ರೀ ವಿಘ್ನೇಶ್ವರನ ಸನ್ನಿಧಾನದಲ್ಲಿ ಅರ್ಚಕರ ಸಮ್ಮುಖದಲ್ಲಿ ಪವಿತ್ರ ಮಾಲೆಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ, ಮಣೂರು ದೇಗುಲದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಅವರಿಗೆ ಹಸ್ತಾಂತರಿಸಲಾಯಿತು.











