Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಂಸ್ಕೃತ ವಿಶ್ವದ ಜ್ಞಾನ ಮತ್ತು ವೈಭವದ ಭಾಷೆ: ಡಾ. ಜಯಶಂಕರ್ ಕಂಗಣ್ಣಾರು
    alvas nudisiri

    ಸಂಸ್ಕೃತ ವಿಶ್ವದ ಜ್ಞಾನ ಮತ್ತು ವೈಭವದ ಭಾಷೆ: ಡಾ. ಜಯಶಂಕರ್ ಕಂಗಣ್ಣಾರು

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ: 
    ವೇದ, ಉಪನಿಷತ್ತು, ದರ್ಶನ, ಸಾಹಿತ್ಯ ಹಾಗೂ ಭಾರತೀಯ ಜ್ಞಾನ ಪರಂಪರೆಯ ಅಪಾರ ಸಂಪತ್ತನ್ನು ತನ್ನೊಳಗೆ ಅಡಕಗೊಳಿಸಿರುವ ಸಂಸ್ಕೃತವು ಕೇವಲ ಒಂದು ಪ್ರಾಚೀನ ಭಾಷೆಯಲ್ಲ,  ಜಗತ್ತಿಗೆ ಜ್ಞಾನ ಮತ್ತು ಚಿಂತನೆಯ ಬೆಳಕು ನೀಡಿದ ಸಮೃದ್ಧ ಭಾಷೆಯಾಗಿದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಜಯಶಂಕರ್ ಕಂಗಣ್ಣಾರು ನುಡಿದರು.

    Click Here

    Call us

    Click Here

    ಆಳ್ವಾಸ್ ಕಾಲೇಜಿನ  ಸಂಸ್ಕೃತ ವಿಭಾಗದ ವತಿಯಿಂದ ಬುಧವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಂಸ್ಕೃತೋತ್ಸವ’ ಕಾರ್ಯಕ್ರಮದಲ್ಲಿ ‘ಸಂಸ್ಕೃತದ ವಿಶ್ವ ವೈಭವ’ ಕುರಿತು ಮಾತನಾಡಿದ ಅವರು, ಸಂಸ್ಕೃತದ ಮಹತ್ವವನ್ನು ಭಾರತೀಯ ಜ್ಞಾನ ಪರಂಪರೆಯ ಹಿನ್ನೆಲೆಯಲ್ಲಿ ವಿವರಿಸಿದರು.

    ಸಂಸ್ಕೃತವು ವೇದಗಳ ಮೂಲಕ ಭಾರತೀಯ ಸಾಂಸ್ಕೃತಿಕ ಜಗತ್ತಿಗೆ ಶಾಂತಿ, ಸಹಬಾಳ್ವೆ ಮತ್ತು ಲೋಕಕಲ್ಯಾಣದ ಸಂದೇಶವನ್ನು ನೀಡಿದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಆಶಯವು ಸಮಸ್ತ ಮಾನವಕುಲದ ಒಳಿತನ್ನು ಬಯಸುವ ಭಾರತೀಯ ಚಿಂತನೆಯ ಪ್ರತೀಕವಾಗಿದೆ. ಸಂಸ್ಕೃತ ಸಾಹಿತ್ಯ ಮತ್ತು ಜ್ಞಾನ ಪರಂಪರೆಯಲ್ಲಿ ವ್ಯಕ್ತಿಯ ಒಳಿತಿನೊಂದಿಗೆ ಜಗತ್ತಿನ ಕಲ್ಯಾಣಕ್ಕೂ ಮಹತ್ವ ನೀಡಲಾಗಿದೆ.

    ಸಂಸ್ಕೃತದಲ್ಲಿ ಕೇವಲ ಧಾರ್ಮಿಕ ಸಾಹಿತ್ಯ ಮಾತ್ರವಲ್ಲದೆ ಕಾವ್ಯ, ವ್ಯಾಕರಣ, ತತ್ವಶಾಸ್ತ್ರ, ಗಣಿತ, ಖಗೋಳ, ಆಯುರ್ವೇದ, ಯೋಗ, ಭಾಷಾಶಾಸ್ತ್ರ ಸೇರಿದಂತೆ ವಿವಿಧ ಜ್ಞಾನ ಕ್ಷೇತ್ರಗಳ ಅಪಾರ ಸಾಹಿತ್ಯ ಲಭ್ಯವಿದೆ. ಭಾರತೀಯ ಜ್ಞಾನ ಪರಂಪರೆಯ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಸಂಸ್ಕೃತದ ಅಧ್ಯಯನ ಮಹತ್ವದ್ದಾಗಿದೆ ಎಂದರು. ಸಂಸ್ಕೃತದಲ್ಲಿ ಏನಿಲ್ಲ ಎಂದು ಕೇಳುವುದಕ್ಕಿಂತ, ಸಂಸ್ಕೃತದಲ್ಲಿ ಏನೆಲ್ಲ ಇದೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಬೇಕು. ಸಂಸ್ಕೃತದ ಅಧ್ಯಯನವು ಭಾರತದ ಪ್ರಾಚೀನ ಜ್ಞಾನ ಪರಂಪರೆಯೊಂದಿಗೆ ಸಂಪರ್ಕ ಕಲ್ಪಿಸುತ್ತದೆ.

    ಸಂಸ್ಕೃತವು ಭಾರತೀಯ ಭಾಷೆಗಳ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸಿದ ಅವರು, ಭಾರತದ ಹಲವು ಭಾಷೆಗಳ ಪದಸಂಪತ್ತು ಮತ್ತು ಭಾಷಾ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಸಂಸ್ಕೃತದ ಪಾತ್ರವನ್ನು ನಿರ್ಲಕ್ಷಿಸಲಾಗದು. ಪ್ರತಿ ಭಾಷೆಯನ್ನೂ ಅದರದೇ ಆದ ವೈಶಿಷ್ಟ್ಯದಲ್ಲಿ ಗೌರವಿಸುವುದರ ಜೊತೆಗೆ, ಭಾಷೆಗಳ ನಡುವಿನ ಪರಸ್ಪರ ಸಂಬಂಧವನ್ನೂ ಅರಿಯಬೇಕು ಎಂದು ಹೇಳಿದರು.

    Click here

    Click here

    Click here

    Call us

    Call us

    ಸಂಸ್ಕೃತದ ಶ್ಲೋಕಗಳು, ಸುಭಾಷಿತಗಳು ಹಾಗೂ ಸಾಹಿತ್ಯ ಕೃತಿಗಳು ಕೇವಲ ಪಠಣಕ್ಕೆ ಸೀಮಿತವಾಗದೆ ಅವುಗಳಲ್ಲಿರುವ ಜ್ಞಾನ, ಮೌಲ್ಯ, ಜೀವನದರ್ಶನ ಮತ್ತು ವಿಶ್ವಕಲ್ಯಾಣದ ಸಂದೇಶವನ್ನು ಇಂದಿನ ಪೀಳಿಗೆ ಅರ್ಥಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
    ಸಂಸ್ಕೃತವನ್ನು ಕೇವಲ ಹಿಂದಿನ ಕಾಲದ ಭಾಷೆಯಾಗಿ ನೋಡುವ ಬದಲು, ಭಾರತೀಯ ಜ್ಞಾನ ಪರಂಪರೆಯನ್ನು ಅರ್ಥಮಾಡಿಕೊಳ್ಳುವ ಜೀವಂತ ಅಧ್ಯಯನ ಕ್ಷೇತ್ರವಾಗಿ ಪರಿಚಯಿಸುವ ಅಗತ್ಯವಿದೆ ಎಂದರು.  

    ಆಳ್ವಾಸ್ ಆಯುರ್ವೇದ ಕಾಲೇಜಿನ ಸಂಹಿತಾ ಹಾಗೂ  ಹಾಗೂ ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ ಸೌಮ್ಯ ಸರಸ್ವತಿ ತಂತ್ರಾಂಶಗಳಲ್ಲಿ ಸಂಸ್ಕೃತವನ್ನು ಬಳಸುವುದರ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ ಗಾಳಿಮನೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಮಾನ್ಯ ಸ್ವಾಗತಿಸಿ, ಚೇತನಾ  ವಂದಿಸಿ, ತೇಜಸ್ವಿ ಅತಿಥಿಗಳನ್ನು ಪರಿಚಯಿಸಿ, ಅನನ್ಯ ಹೆಗಡೆ ಪ್ರಾರ್ಥಿಸಿ, ಶಮಾ ನಿರೂಪಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ವಿಜ್ಞಾನ ಕಲಿಕೆ ಪ್ರಯೋಗ ಮತ್ತು ಸಂಶೋಧನೆಯತ್ತ ಸಾಗಲಿ: ವಿವೇಕ್ ಆಳ್ವ

    03/09/2026

    ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ನಾವುಂದ ಸ.ಪ.ಪೂ ಕಾಲೇಜಿಗೆ ಅವಳಿ ಪ್ರಶಸ್ತಿ

    03/09/2026

    ಶ್ರೀ ಕೃಷ್ಣ ಜನ್ಮಾಷ್ಟಮಿ ‘ಜನತಾ ರಸಬುಗ್ಗೆ ಮುದ್ದು ಕೃಷ್ಣ ಮುದ್ದು ರಾಧೆ’ ಸ್ಪರ್ಧೆ

    03/09/2026
    Leave A Reply Cancel Reply

    four × 2 =

    Call us

    Click Here

    Call us

    Call us

    Call us
    Highest Viewed Recently
    • ಉಡುಪಿ: ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆ
    • ನರೇಂದ್ರ ಕುಮಾರ್ ಕೋಟ ಅವರಿಗೆ ಗುರುಭ್ಯೋ ಗುರುಭ್ಯೋ ನಮಃ ಶಿಕ್ಷಕ ಪುರಸ್ಕಾರ
    • ಸಂಸ್ಕೃತ ವಿಶ್ವದ ಜ್ಞಾನ ಮತ್ತು ವೈಭವದ ಭಾಷೆ: ಡಾ. ಜಯಶಂಕರ್ ಕಂಗಣ್ಣಾರು
    • ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ
    • ಬಿಲ್ಲವ ಯುವ ಬ್ರಿಗೇಡ್‌ನ ಪೂರ್ವಭಾವಿ ಸಭೆಯಲ್ಲಿ ಕರಾವಳಿಯ ಹಾಸ್ಯ ಕಲಾವಿದ ಬಸವ ಪೂಜಾರಿಗೆ ಸನ್ಮಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.