ಸಿದ್ಧಾಪುರ: ಹಿಂದೂ ಜಾಗರಣ ವೇದಿಕೆ ಸಿದ್ದಾಪುರ ವಲಯ ಹೊಸಂಗಡಿ ಘಟಕ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಲೋಕ ಕಲ್ಯಾಣರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹೊಸಂಗಡಿ ಸಾರ್ವಜನಿಕ ಗಣೇಶೋತ್ಸವ ರಂಗ ಮಂದಿರದಲ್ಲಿ ಇತ್ತಿಚಿಗೆ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಸಿದ್ದಿವಿನಾಯಕ ಸಾಂಸ್ಕ್ರತಿಕ ಕಲಾ ಕೇಂದ್ರದ ಸಂಚಾಲಕ ಮುಂಗೆಶ್ ಶೆಣೈ ಧಾರ್ಮಿಕ ಪ್ರವಚನ ನೀಡಿದರು. ಹೊಸಂಗಡಿ ಕೃಷ್ಣ ಜ್ಯುವೆಲ್ಲರಿ ಮಾಲಿಕ ಮಂಜುನಾಥ್ ಗೊಲ್ಲ ಕಂಠಗದ್ದೆ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಹಿ.ಜಾ.ವೇ. ಉಡುಪಿಯ ಅರವಿಂದ ಕೋಟೇಶ್ವರ, ಹಿ.ಜಾ.ವೇ. ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಹೆನ್ನಾಬೈಲು ಭಾಸ್ಕರ್ ಶೆಟ್ಟಿ, ಸಿದ್ದಾಪುರ ವಲಯ ಸಂಚಾಲಕರಾದ ಹರ್ಷ ಜನ್ಸಾಲೆ, ಹೊಸಂಗಡಿ ಘಟಕದ ಅಧ್ಯಕ್ಷ ರಾಘವೇಂದ್ರ ಬಾಳೆಜೆಡ್ದು ಉಪಸ್ತಿತರಿದ್ದರು. ಭುಜಂಗ ಶೆಟ್ಟಿ ಹೆನ್ನಾಬೈಲು ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ್ ಹೊಸಂಗಡಿ ಸ್ವಾಗತಿಸಿ, ನಾಗರಾಜ್ ಬಾಳೆಜೆಡ್ದು ವರದಿ ವಾಚಿಸಿದರು. ಭಾಸ್ಕರ್ ಶೆಟ್ಟಿ ವಂದಿಸಿದರು