Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ರಕ್ತದಾನವು ಕೇವಲ ಸಾಮಾಜಿಕ ಸೇವೆಯಲ್ಲ. ಜೀವವೊಂದನ್ನು ಉಳಿಸುವ ಮಹತ್ವದ ಕಾರ್ಯ: ಜಯಕ‌ರ್ ಶೆಟ್ಟಿ
    ಊರ್ಮನೆ ಸಮಾಚಾರ

    ರಕ್ತದಾನವು ಕೇವಲ ಸಾಮಾಜಿಕ ಸೇವೆಯಲ್ಲ. ಜೀವವೊಂದನ್ನು ಉಳಿಸುವ ಮಹತ್ವದ ಕಾರ್ಯ: ಜಯಕ‌ರ್ ಶೆಟ್ಟಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ರಕ್ತದಾನವು ಕೇವಲ ಸಾಮಾಜಿಕ ಸೇವೆಯಲ್ಲ. ಜೀವವೊಂದನ್ನು ಉಳಿಸುವ ಮಹತ್ವದ ಮಾನವೀಯ ಕಾರ್ಯವಾಗಿದೆ. ಯುವಜನರು ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕುಂದಾಪುರದ ಇಂಡಿಯನ್ ರೆಡ್‌ಕ್ರಾಸ್‌ ಸೊಸೈಟಿಯ ಅಧ್ಯಕ್ಷ ಜಯಕ‌ರ್ ಶೆಟ್ಟಿ ಹೇಳಿದರು.

    Click Here

    Call us

    Click Here

    ಅವರು ಇಲ್ಲಿನ ಬಿಹೈವ್ ಕನ್ವೆನ್ನನ್ ಹಾಲ್‌ನಲ್ಲಿ ಗುರುವಾರ ನಡೆದ ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಹಾಗೂ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯವು ಇಂಡಿಯನ್ ರೆಡ್ ಕ್ರಾಸ್‌ ಸೊಸೈಟಿ ಕುಂದಾಪುರದ ಸಹಯೋಗದಲ್ಲಿ ಯುವ ರೆಡ್‌ಕ್ರಾಸ್ ಘಟಕಗಳ ವತಿಯಿಂದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಯುವ ರೆಡ್‌ಕ್ರಾಸ್‌ ಘಟಕದ ಪಾತ್ರ ಮಹತ್ವದ್ದಾಗಿದೆ ಎಂದರು.

    ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಆಸೀಫ್‌ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಬಗ್ಗೆ ಮಾತ್ರ ಯೋಚಿಸದೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ನಾವು ನೀಡುವ ರಕ್ತ ಯಾರಿಗೆ ತಲುಪುತ್ತದೆ ಎಂಬುದು ತಿಳಿಯದಿದ್ದರೂ, ಅದು ಅಗತ್ಯ ವಿರುವವರ ಜೀವವನ್ನು ಉಳಿಸ ಬಹುದು. ರಕ್ತದಾನವು ದೇವರ ಕೆಲಸಕ್ಕೆ ಸಮಾನವಾದ ಅತ್ಯುತ್ತಮ ಕಾಯಕ ವಾಗಿದ್ದು, ಇಂತಹ ಸೇವಾ ಮನೋಭಾವ ಕ್ಯಾಂಪಸ್ನಲ್ಲಿ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

    ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್‌ ರೆಹಮಾನ್ ಬ್ಯಾರಿ ಮಾತನಾಡಿ, ರಕ್ತದಾನ ಮಾಡುವುದು ಎಂದರೆ ಜೀವ ಉಳಿಸುವುದು. ದೇಶ ಸೇವೆಯಲ್ಲಿ ಇದು ಅತ್ಯಂತ ಪ್ರಮುಖವಾದ ಮೊದಲ ಹೆಜ್ಜೆಯಾಗಿದೆ ಎಂದರು.

    ಈ ಸಂದರ್ಭದಲ್ಲಿ ಕುಂದಾಪುರದ ಯುವ ರೆಡ್‌ಕ್ರಾಸ್ ಸಂಯೋಜಕ ಸತ್ಯನಾರಾಯಣ ಪುರಾಣಿಕ್ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದರು.

    Click here

    Click here

    Click here

    Call us

    Call us

    ಕಾರ್ಯಕ್ರಮದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಅಶ್ವಿನಿ ಶೆಟ್ಟಿ, ಬ್ಯಾರೀಸ್ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಫಿರ್ದೋಸ್, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಬೀನಾ ಹಂಝಾ, ಉಪ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಯುವ ರೆಡ್ಯಾಸ್ ಘಟಕದ ವಿದ್ಯಾರ್ಥಿ ಏ ರೂ ವಿದ್ಯಾರ್ಥಿಗಳು ಉಪಸ್ಥಿತರಿದರು.

    ಯುವ ರೆಡ್‌ಕ್ರಾಸ್ ಘಟಕದ ಸಿಬ್ಬಂದಿ ಸಂಯೋಜಕ ಅಹಮದ್ ಖಲೀಲ್ ಹಾಗೂ ವಿದ್ಯಾರ್ಥಿ ಸಂಯೋಜಕರಾದ ವಹಾಬ್ ಮತ್ತು ಹಮ್ಹಾನ್ ಕಾರ್ಯಕ್ರಮ ಸಂಯೋಜಿಸಿದರು. ಗಣಕ ವಿಭಾಗದ ಉಪನ್ಯಾಸಕಿ ಸಹರಾ ನಿರೂಪಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಆಶಿದಾ ಭಾನು ವಂದಿಸಿದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ತಾಯಿಯಂತೆ ಪ್ರಕೃತಿಯೂ ಹಿತವಲ್ಲದ ಆಹಾರವನ್ನು ದೂರವಿಡುತ್ತದೆ: ಶ್ರೀ ರಾಘವೇಶ್ವರ

    05/09/2026

    ಕುಂದಾಪುರ: ಅಶೋಕ್‌ ತೆಕ್ಕಟ್ಟೆ ಅವರಿಗೆ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ

    05/09/2026

    ರೋಟರಿ ಕ್ಲಬ್ ಕೋಟ ಬ್ರಿಗೇಡ್: ಸದಸ್ಯತ್ವ ಅಭಿವೃದ್ಧಿ ಮತ್ತು ಪಬ್ಲಿಕ್ ಇಮೇಜ್‌ ಝೋನಲ್ ಸೆಮಿನಾರ್

    05/09/2026
    Leave A Reply Cancel Reply

    fourteen − five =

    Call us

    Click Here

    Call us

    Call us

    Call us
    Highest Viewed Recently
    • ತಾಯಿಯಂತೆ ಪ್ರಕೃತಿಯೂ ಹಿತವಲ್ಲದ ಆಹಾರವನ್ನು ದೂರವಿಡುತ್ತದೆ: ಶ್ರೀ ರಾಘವೇಶ್ವರ
    • ರಕ್ತದಾನವು ಕೇವಲ ಸಾಮಾಜಿಕ ಸೇವೆಯಲ್ಲ. ಜೀವವೊಂದನ್ನು ಉಳಿಸುವ ಮಹತ್ವದ ಕಾರ್ಯ: ಜಯಕ‌ರ್ ಶೆಟ್ಟಿ
    • ಕುಂದಾಪುರ: ಅಶೋಕ್‌ ತೆಕ್ಕಟ್ಟೆ ಅವರಿಗೆ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ
    • ರೋಟರಿ ಕ್ಲಬ್ ಕೋಟ ಬ್ರಿಗೇಡ್: ಸದಸ್ಯತ್ವ ಅಭಿವೃದ್ಧಿ ಮತ್ತು ಪಬ್ಲಿಕ್ ಇಮೇಜ್‌ ಝೋನಲ್ ಸೆಮಿನಾರ್
    • ವಂದೇ ಮಾತರಂ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ: ಕೆ. ವಿಕಾಸ್ ಹೆಗ್ಡೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.