Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹೆಚ್‌ಕೆಎಸ್ ಪ.ಪೂ ಕಾಲೇಜಿನಲ್ಲಿ ಕಾವ್ಯ ಪರ್ವ ಕಾರ್ಯಕ್ರಮ
    ಊರ್ಮನೆ ಸಮಾಚಾರ

    ಹೆಚ್‌ಕೆಎಸ್ ಪ.ಪೂ ಕಾಲೇಜಿನಲ್ಲಿ ಕಾವ್ಯ ಪರ್ವ ಕಾರ್ಯಕ್ರಮ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಹೆಚ್‌ಕೆಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಕಳದ ಪುಸ್ತಕ ಮನೆ ವತಿಯಿಂದ ಕನ್ನಡದ ಪ್ರಖ್ಯಾತ ಹಾಸ್ಯ ಕವಿ ಹಾಗೂ ನಾಟಕಕಾರರಾದ ಎಚ್ ಡುಂಡಿರಾಜ್ ಅವರ 100ನೇ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ 70ನೇ ವರ್ಷದ ಅಭಿನಂದನೆ ಮತ್ತು ಖ್ಯಾತ ಸಾಹಿತಿಗಳಾದ ಬಿಆರ್ ಲಕ್ಷ್ಮಣರಾವ್ ಅವರ ಪುಸ್ತಕ ಬಿಡುಗಡೆ ಹಾಗೂ 80ನೇ ವರ್ಷದ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    Click Here

    Call us

    Click Here

    ಕಾರ್ಯಕ್ರಮದಲ್ಲಿ ಎಚ್. ಡುಂಡಿರಾಜ್ ಅವರ ‘ಕಾವ್ಯ ಡುಂಡಿಮ’ ಮತ್ತು ಬಿಆರ್ ಲಕ್ಷ್ಮಣ ರಾವ್ ಅವರ ‘ಸಾವೇ ಬೀಗಬೇಡ’ ಹಾಗೂ ‘ಓಶೋ ರಜನೀಶ್ ನಿಜರೂಪ’ ಎಂಬ ಕೃತಿಗಳು ಲೋಕಾರ್ಪಣೆಗೊಂಡವು.

    ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್. ಅವರು ನಮ್ಮ ಕ್ರಿಯೇಟಿವ್ ಪುಸ್ತಕ ಮನೆ ನಮ್ಮ ನಾಡಿನ ಖ್ಯಾತ ಬರಹಗಾರರ ಕೃತಿಗಳನ್ನು ಪ್ರಕಾಶನ ಮಾಡಲಾಗುತ್ತಿದೆ. ಹೂವಿನಲ್ಲಿ ಹೇಗೆ ದುಂಬಿಗಳಿರುತ್ತವೋ ಹಾಗೆ ಕನ್ನಡ ಸಾಹಿತ್ಯದಲ್ಲಿ ಡುಂಡಿರಾಜರು ಹಾಗೂ ಕನ್ನಡದ ಪ್ರೇಮಕವಿಯಾಗಿರುವ ಬಿಆರ್ ಲಕ್ಷ್ಮಣ ರಾಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು.

    ಸಾಹಿತಿಗಳು, ವಿಮರ್ಶಕರು, ಲೇಖಕರು ಹಾಗೂ ಅಧ್ಯಾಪಕರಾದ ಡಾ. ಎಚ್.ಎಸ್. ಸತ್ಯನಾರಾಯಣ ಅವರು ಕನ್ನಡದ ಪ್ರೇಮಕವಿ ಎಂದು ಹೆಸರುವಾಸಿಯಾದ ಕೆಎಸ್ ನರಸಿಂಹಸ್ವಾಮಿ ಅವರಂತೆ ಮುಂದುವರೆದ ಇಂದಿನ ಪ್ರೇಮ ಕವಿ ಬಿ ಆರ್ ಲಕ್ಷ್ಮಣ ರಾಯರು ಎಂದು ಅವರ ಬಿಡುಗಡೆಯಾದ ಪುಸ್ತಕಗಳನ್ನು ಪರಿಚಯಿಸಿಕೊಟ್ಟರು ಹಾಗೂ ಡುಂಡಿರಾಜರ ಹಲವಾರು ಹನಿಗವನಗಳನ್ನು ವಿದ್ಯಾರ್ಥಿಗಳಿಗೆ ಉಣಬಡಿಸಿ ಕೃತಿ ಹಾಗೂ ಕೃತಿಕಾರರ ಕುರಿತು ಮಾತನಾಡಿದರು.

    ಖ್ಯಾತ ಸಾಹಿತಿಗಳಾದ ಬಿಆರ್ ಲಕ್ಷ್ಮಣ ರಾಯರು ನಮ್ಮ ನಾಡಿನಲ್ಲಿಇಂಗ್ಲಿಷ್ ಒಂದು ಭಾಷೆಯಾಗಿ ಬಳಸದೆ ಪ್ರತಿಷ್ಠೆಯಾಗಿ ಬೆಳೆಯುತ್ತಿದೆ. ಕನ್ನಡಕ್ಕಾಗಿ ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸುವುದಕ್ಕಾಗಿ ಬೇರೆ ಬೇರೆ ಭಾಷೆಗಳನ್ನು ಕಲಿತೆ ಎಂದು ತನ್ನ ಪುಸ್ತಕಗಳನ್ನು ಪ್ರಕಟಿಸಿದ ಪುಸ್ತಕ ಮನೆಗೆ ಅಭಿನಂದಿಸಿದರು. ಕನ್ನಡದ ಪ್ರಖ್ಯಾತ ಹಾಸ್ಯಕವಿ ಹಾಗೂ ನಾಟಕಕಾರರಾದ ಎಚ್ ಡುಂಡಿರಾಜ್ ಅವರು ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಟಿಸಿದ ನೂರನೇ ಪುಸ್ತಕ ನನ್ನ ಕೃತಿ ‘ಕಾವ್ಯ ಡುಂಡಿಮ’ ವೆಂದು ಸಂತಸ ಪಡುತ್ತಾ ಪುಸ್ತಕ ಮನೆಗೆ ಅಭಿನಂದಿಸಿದರು. ತಮ್ಮದೇ ಹಲವಾರು ಹಾಸ್ಯ ಚುಟುಕುಗಳನ್ನು ವಾಚಿಸಿದರು.

    Click here

    Click here

    Click here

    Call us

    Call us

    ನನ್ನ ಕಾವ್ಯಗಳು ದೇಶ ವಿದೇಶಗಳಲ್ಲಿ ಸ್ನೇಹ ಬಾಂಧವ್ಯವನ್ನು ತಂದು ಕೊಟ್ಟಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆಗೆ ಸಾಹಿತ್ಯ ಓದುವ ಹವ್ಯಾಸ ಮೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿವೃತ್ತ ಪ್ರಾಧ್ಯಾಪಕರು, ಸಾಹಿತಿಗಳಾದ ಡಾ. ಎಚ್ಎಲ್ ಮಲ್ಲೇಶ್ ಗೌಡ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

    ಬೆಂಗಳೂರಿನ ಹೆಸರಾಂತ ಗಾಯಕರಾದ ಪಂಚಮ್ ಹಳಿ ಬಂಡಿ ಹಾಗೂ ಚಿನ್ಮಯಿ ಚಂದ್ರಶೇಖರ್ ಅವರು ಸಾಹಿತಿಗಳ ರಚನೆಯಲ್ಲಿ ಮೂಡಿ ಬಂದ ಕವನಗಳನ್ನು ಗಾಯನ ಮಾಡಿದರು. ಅವಿನಾಶ್ ಕಾಮತ್ ಅವರು ಕಾವ್ಯ ದಿಗ್ಗಜರುಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರವೀಣ್ ಎ ಹಾಗೂ ಉಪ ಪ್ರಾಂಶುಪಾಲರಾದ ಲೋಕೇಶ್ ಪೂಜಾರಿ ಅವರು ಉಪಸ್ಥಿತರಿದ್ದರು.

    ಕನ್ನಡ ಉಪನ್ಯಾಸಕರಾದ ರಮೇಶ್ ಎಂ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕರ್ನಾಟಕ ಸಂಘ ಕತಾರ್: ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಅಭಿಯಂತರ ದಿನಾಚರಣೆ

    24/09/2026

    ಕುಸ್ತಿ ಸ್ಪರ್ಧೆಯಲ್ಲಿ ವಿವೇಕ ಬಾಲಕಿಯರ ಪ್ರೌಢಶಾಲೆಯ ಮೂವರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

    24/09/2026

    ಪನ್ನೀರ್ ಇಂದಿನ ಜಗತ್ತಿಗೆ ಪ್ರಿಯ ಆಹಾರವೇ ಹೊರತು ಹಿತಾಹಾರವಲ್ಲ: ಶ್ರೀ ರಾಘವೇಶ್ವರ

    24/09/2026
    Leave A Reply Cancel Reply

    three × 1 =

    Call us

    Click Here

    Call us

    Call us

    Call us
    Highest Viewed Recently
    • ಕರ್ನಾಟಕ ಸಂಘ ಕತಾರ್: ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಅಭಿಯಂತರ ದಿನಾಚರಣೆ
    • ಕುಸ್ತಿ ಸ್ಪರ್ಧೆಯಲ್ಲಿ ವಿವೇಕ ಬಾಲಕಿಯರ ಪ್ರೌಢಶಾಲೆಯ ಮೂವರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ
    • ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜು: ಮೊಬೈಲ್ ಛಾಯಾಗ್ರಹಣದ ಮೂಲಕ ದೃಶ್ಯ ಸಂವಹನ ಕಾರ್ಯಕ್ರಮ
    • ಪನ್ನೀರ್ ಇಂದಿನ ಜಗತ್ತಿಗೆ ಪ್ರಿಯ ಆಹಾರವೇ ಹೊರತು ಹಿತಾಹಾರವಲ್ಲ: ಶ್ರೀ ರಾಘವೇಶ್ವರ
    • ಭಂಡಾರ್ಕಾರ್ಸ್ ಕಾಲೇಜಿನಲ್ಲಿ ʼಬಾರಿಸು ಕನ್ನಡ ಡಿಂಡಿಮವʼ – ಗಿಳಿವಿಂಡು ಯಾನ ಮರಳಿ ಮನೆಗೆ ಉಪನ್ಯಾಸ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.