ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ 14 ವರ್ಷ ವಯೋಮಿತಿಯ ಎಐಸಿಎಸ್ ಅಂತರ್ ಶಾಲಾಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಹಟ್ಟಿಅಂಗಡಿಯು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಉತ್ಸವ ಬಿಪಿ, ವಿಖ್ಯಾತ ಮಧ್ಯಸ್ಥ, ಆರವ್ ಎಸ್. ಶೆಟ್ಟಿ, ಶಶಿಭೂಷಣ ಶೆಟ್ಟಿ, ಸಿರಿ ಜಿ. ಕಾಮತ್ ಇವರ ತಂಡವು ಶಾಲೆಯ ಪರವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ ವಿದ್ಯಾರ್ಥಿಗಳನ್ನು ಮತ್ತು ಅವರಿಗೆ ಮಾರ್ಗದರ್ಶನಗೈದ ಶಿಕ್ಷಕರನ್ನೂ ಅಭಿನಂದಿಸಿ, ಮಾತನಾಡುತ್ತಾ ನಮ್ಮ ವಿದ್ಯಾರ್ಥಿಗಳು ಎಲ್ಲಾ ಸ್ಪರ್ಧೆಗಳಲ್ಲೂ ಸಕ್ರೀಯರಾಗಿ ಭಾಗವಹಿಸಿ, ಮಾರ್ಗದರ್ಶನದಂತೆ ಸಾಗುತ್ತಿರುವುದು ಈ ಸಾಧನೆಗಳಿಗೆ ಮೂಲ ಕಾರಣ. ಅದನ್ನು ನಾವು ಇನ್ನಷ್ಟು ವೃದ್ಧಿಸಿಕೊಳ್ಳಬೇಕು ಎಂದರು.
ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್., ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಾಲಾ ಅಧ್ಯಾಪಕವೃಂದ, ಶಿಕ್ಷಕೇತರವೃಂದದವರೂ ವಿದ್ಯಾರ್ಥಿಗಳ ಸಾಧನೆಗೆ ಹರ್ಷವ್ಯಕ್ತಪಡಿಸಿದ್ದಾರೆ.
















