ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಇದೇ ಬರುವ ನ.22ರಂದು ಸೀತಾ ಕಲ್ಯಾಣ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀರಾಮಮಂದಿರ, ಬಾಳೆಕುದ್ರು ಹಂಗಾರಕಟ್ಟೆ ಇಲ್ಲಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷ ಅಶೋಕ ಭಟ್, ಅಧ್ಯಕ್ಷ ಎ. ರಾಮನಾಥ ಅಲ್ಸೆ, ಕಾರ್ಯದರ್ಶಿ ರಾಘವೇಂದ್ರ ಸಾಮಗ, ಕೋಶಾಧಿಕಾರಿ ಪ್ರಶಾಂತ ಅಡಿಗ, ಮಹಿಳಾ ಅಧ್ಯಕ್ಷೆ ಮಂಜುಳಾ ಅಡಿಗ, ವಿಪ್ರ ವೇದಿಕೆ ಐರೋಡಿ ಬಾಳ್ಕುದ್ರು ಅಧ್ಯಕ್ಷ ರಮೇಶ ಕಾರಂತ, ರಾಮ ಮಂದಿರದ ಅರ್ಚಕ ಸುರೇಶ ಅಡಿಗ, ವಿಶ್ವೇಶ್ವರ ಅಡಿಗ, ಗೀತಾ ಅಧಿಕಾರಿ, ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ಸುರೇಶ ಮಂಜ, ಶ್ರೀಮತಿ ಮಂಜ, ರಾಜೇಶ್ ಮಧ್ಯಸ್ಥ ,ವಿಮಲಾ ಅಡಿಗ, ಹರೀಶ್ ಮೈಯ್ಯ, ಚಂದ್ರ ಶೇಖರ ಮ್ಯೆಯ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.











