ಕುಂದಾಪ್ರ ಡಾಟ್ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 123ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಜರುಗಿತು.
ವಸಂತಿ ಆರ್. ಪಂಡಿತ್ ಪ್ರಾರ್ಥಿಸಿದರು. ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ್ ಪೈ, ನಿವೃತ್ತ ಅಧ್ಯಾಪಕ ಸದಾಶಿವ ಐತಾಳ್ ಉಪ್ಪಿನಕುದ್ರು, ತಲ್ಲೂರು ನಾರಾಯಣ ವಿಕಲ ಚೇತನ ಶಾಲೆಯ ಮುಖ್ಯಸ್ಥ ತಲ್ಲೂರು ಸುರೇಶ್, ಜೋತಿಷಿ ಗಜಾನನ ಗಣಪತಿ ಭಟ್, ಕರ್ನಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ ರಾಜಾರಾಮ್ ಹೊಳ್ಳ, ಪ್ರಾಧ್ಯಾಪಿಕೆ ಮಾಲತಿ ಪೂಜಾರಿ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸದಾಶಿವ ಐತಾಳ್‌ರವರನ್ನು ಅಕಾಡೆಮಿಯ ವತಿಯಿಂದ ಸಮ್ಮಾನಿಸಲಾಯಿತು. ನಂತರ ಸದಾಶಿವ ಐತಾಳ್ ರವರಿಂದ ಸಾಹಿತ್ಯ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಅರುಣ್ ಉಪ್ಪಿನಕುದ್ರು ಅವರು ವಂದಿಸಿದರು.











