ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಟರ್ಕಿ ದೇಶದ ಇಸ್ತಾಂಬುಲ್ ನಲ್ಲಿ ಮಂಗಳವಾರ ನಡೆದ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಕರ್ನಾಟಕ ರಾಜ್ಯದಿಂದ ಸ್ಪರ್ಧಿಸಿ ಯು.84 ಓಪನ್ ವಿಭಾಗದಲ್ಲಿ ಕೀರ್ತನಾ ನಾಗೇಂದ್ರ ಅವರು ಬೆಳ್ಳಿ ಪದಕ ಪಡೆದುಕೊಂಡರು.
ಅವರು ಉಡುಪಿ ಜಿಲ್ಲೆಯ ಸಾಲಿಗ್ರಾಮದ ರಾ ಫಿಟ್ನೆಸ್ ಜಿಮ್ ನ ಸದಸ್ಯರಾಗಿದ್ದು, ಅವರು ರಾ ಫಿಟ್ನೆಸ್ ಜಿಮ್‌ನ ಮಾಲಕರು ಹಾಗೂ ಪವರ್ ಲಿಫ್ಟಿಂಗ್‌ನ ಪ್ರಮುಖ ತರಬೇತುದರಾದ ಮಹೇಶ್ ದೇವಾಡಿಗ ಹಾಗೂ ರೋಷನ್ ದೇವಾಡಿಗ ಅವರಲ್ಲಿ ತರಬೇತಿ ಪಡೆದಿಯುತ್ತಿದ್ದಾರೆ.











