ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೂಟ ಮಹಾಜಗತ್ತು ಅಂಗಸಂಸ್ಥೆ ಸಾಲಿಗ್ರಾಮ ಅಂಗ ಸಂಸ್ಥೆಯ ಮಹಿಳಾ ವೇದಿಕೆಯ ಮಹಾಸಭೆ ಇತ್ತೀಚಿಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಜರಗಿತು.
ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ. ಸಿ. ಹೊಳ್ಳ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಕಾರಂತ್ ಶುಭಾಶಂಸನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇಗುಲದ ಅಧ್ಯಕ್ಷ ಪ್ರಕಾಶ್ ಕಾರಂತ್ ಸಹ ಧರ್ಮದರ್ಶಿಗಳಾದ ಚಂದ್ರಶೇಖರ ಉಪಾಧ್ಯ ಚಿತ್ರಪಾಡಿ, ಪರಶುರಾಮ ಭಟ್ಟ ಎಡಬೆಟ್ಟು, ಎಂ. ಲಕ್ಷ್ಮೀನಾರಾಯಣ ಹೊಳ್ಳ, ಮರಿಕಾಪು, ಬಿ. ಚಂದ್ರಶೇಖರ ನಾವಡ ಬೈಂದೂರು, ಬಿ.ಜಿ .ಕೃಷ್ಣಮೂರ್ತಿ ಮಯ್ಯ ಕಾಸರವಳ್ಳಿ, ಕೆ. ತಾರಾನಾಥ ಹೊಳ್ಳ ಕಾರ್ಕಡ, ಪ್ರಸನ್ನ ತುಂಗ ಐರೋಡಿ, ಇವರನ್ನು ಗೌರವಿಸಲಾಯಿತು.
ಕೋಟತಟ್ಟು ಪಡುಕೆರೆಯ ಡಾ. ಮೇಘನಾ ನಾವಡ ಆಯುರ್ವೇದದ ಎಂ.ಡಿ. ಪದವಿಯಲ್ಲಿ (ಹ್ಯೂಮನ್ ಎನೋಟಮಿ) ಬೆಂಗಳೂರಿನ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದ ಹೆಗ್ಗಳಿಕೆಗಾಗಿ ಸನ್ಮಾನಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ,ಅಶಕ್ತರಿಗೆ ನೆರವು ನೀಡಲಾಯಿತು. ಸಭೆಗೆ ಆಗಮಿಸಿದವರಲ್ಲಿ ಅದೃಷ್ಟವಂತರನ್ನು ಆರಿಸುವ ಕಾರ್ಯಕ್ರಮದಲ್ಲಿ ವೃತ್ತಿನಿರತ ಮತ್ತು ನಿವೃತ್ತ ಶಿಕ್ಷಕರನ್ನೆ ಅದೃಷ್ಟವಂತರೆಂದು ಹತ್ತು ಜನ ಶಿಕ್ಷಕರನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು.
ದೇಣಿಗೆ ನೀಡಿದ ದಾನಿಗಳಾದ ವೇದಿಕೆಯ ಮಾಜಿ ಉಪಾಧ್ಯಕ್ಷೆ ಕಮಲಾಕ್ಷಿ ಹಂದೆ aವರನ್ನು ಸನ್ಮಾನಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಕುಂದಾಪುರ ಅಂಗ ಸಂಸ್ಥೆಯ ಮಹಿಳಾ ವೇದಿಕೆ ಅಧ್ಯಕ್ಷೆ ಜಯಶ್ರೀ ರಘುರಾಮ್, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆಯ ಅಧ್ಯಕ್ಷ ಪಿ.ಸಿ. ಹೊಳ್ಳ ಉಪಸ್ಥಿತರಿದ್ದರು.
ಜೊತೆ ಕಾರ್ಯದರ್ಶಿ ನಾಗರತ್ನ ಹೇರ್ಳೆ ವರದಿ, ಕೋಶಾಧಿಕಾರಿ ಪೂರ್ಣಿಮಾ ಅಧಿಕಾರಿ ಲೆಕ್ಕಪತ್ರ ಮಂಡಿಸಿದರು.ಮಾಜಿ ಅಧ್ಯಕ್ಷೆ ಭಾರತಿ ಹೇರ್ಳೆ, ಸದಸ್ಯರಾದ ಸುಜಾತ ಬಾಯರಿ, ದಿವ್ಯ ಹಂದೆ, ವನಿತಾ ಉಪಾದ್ಯ ರೇವತಿ ಐತಾಳ ಮತ್ತಿತರರು ಸಹಕರಿಸಿದರು. ಸುಮನಾ ರವೀಂದ್ರ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು.
















