Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪನ್ನೀರ್ ಇಂದಿನ ಜಗತ್ತಿಗೆ ಪ್ರಿಯ ಆಹಾರವೇ ಹೊರತು ಹಿತಾಹಾರವಲ್ಲ: ಶ್ರೀ ರಾಘವೇಶ್ವರ
    ಊರ್ಮನೆ ಸಮಾಚಾರ

    ಪನ್ನೀರ್ ಇಂದಿನ ಜಗತ್ತಿಗೆ ಪ್ರಿಯ ಆಹಾರವೇ ಹೊರತು ಹಿತಾಹಾರವಲ್ಲ: ಶ್ರೀ ರಾಘವೇಶ್ವರ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಗೋಕರ್ಣ:
    ತುಪ್ಪದ ಬೆಲೆ ಸಮಾಜಕ್ಕೆ ತಿಳಿದಿಲ್ಲ. ಪುರಾಣ ಘೃತ, ಮಹಾಘೃತಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇವುಗಳ ಮೌಲ್ಯ ಸಮಾಜಕ್ಕೆ ಗೊತ್ತಾದರೆ ಬಹುಶಃ ಇವುಗಳಿಗೆ ಬಿಗಿ ಭದ್ರತೆಯನ್ನು ಒದಗಿಸುವ ಸಂದರ್ಭ ಬರಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

    Click Here

    Call us

    Click Here

    ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಹತ್ತು ವರ್ಷ ಹಳೆಯದಾದ ತುಪ್ಪವನ್ನು ಪುರಾಣ ಘೃತ, ಹತ್ತು ವರ್ಷದ ನಂತರದ ತುಪ್ಪವನ್ನು ಪ್ರಪುರಾಣ ಘೃತ, ನೂರು ವರ್ಷದ ತುಪ್ಪವನ್ನು ಕುಂಭ ಸರ್ಪಿ, ಮಹಾಘೃತ ಎಂದು ಕರೆಯಲಾಗಿದ್ದು, ಇವುಗಳು ಮಹೌಷಧವಾಗಿ ಕಾರ್ಯ ನಿರ್ವಹಿಸುತ್ತವೆ. ಯೋಗರತ್ನಾಕರವು ಮಹಾಘೃತದ ಕುರಿತಾಗಿ ಹೇಳುತ್ತಾ ಇದಕ್ಕೆ ಭೂತೋಚ್ಚಾಟನೆ ಮಾಡುವ ದೈವೀಶಕ್ತಿಯೂ ಇದೆ ಎಂಬುದನ್ನು ಉಲ್ಲೇಖಿಸಿದೆ. ತುಪ್ಪದ ಗುಣಗಳನ್ನು ಹೇಳಿ ಮುಗಿಯುವುದಲ್ಲ ಎಂದರು.

    ಕ್ಷೀರ ಕುಟುಂಬದ ವಿವಿಧ ಪದಾರ್ಥಗಳ ಆಯಸ್ಸು ಸಂಸ್ಕಾರವಾದಂತೆ ಹೆಚ್ಚುತ್ತಾ ಹೋಗುತ್ತದೆ. ಹಾಲು, ಮೊಸರು, ಬೆಣ್ಣೆಗಳ ಆಯಸ್ಸು ಸೀಮಿತ ಅವಧಿಯಾದರೆ, ತುಪ್ಪದ ಆಯಸ್ಸು ಅದು ಮುಗಿಯದ ಆಯಸ್ಸು. ತುಪ್ಪಕ್ಕೆ ಅವಧಿ ಮುಕ್ತಾಯ (expiry) ಎಂಬುದೇ ಇಲ್ಲ. ಹಳತಾದಂತೆ ಅದರ ಗುಣ ಹೆಚ್ಚುತ್ತಾ ಹೋಗುತ್ತದೆ. ಹಾಲೇ ತುಪ್ಪದ ಮೂಲವಾದರೂ, ಹಾಲಿಗಿಂತ ಎಷ್ಟೋ ಪಾಲು ಗುಣದ ವೃದ್ಧಿಯನ್ನು ತುಪ್ಪದಲ್ಲಿ ಕಾಣಬಹುದು. ಹಾಗಾಗಿ ತುಪ್ಪ ಹಾಲಿನ ಕುಟುಂಬದ ಚಕ್ರವರ್ತಿ ಎಂದು ಅಭಿಪ್ರಾಯಪಟ್ಟರು.

    ಪನ್ನೀರಿಗೆ ಆಯುರ್ವೇದದಲ್ಲಿ ಕಿಲಾಟ ಎನ್ನಲಾಗಿದೆ. ಪನ್ನೀರು ಇಂದಿನ ಜಗತ್ತಿನಲ್ಲಿ ಬಹುಜನಪ್ರಿಯವಾಗಿದ್ದು, ಇದನ್ನು ಯಥೇಚ್ಛವಾಗಿ ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಬಳಕೆಗೆ ಸೂಕ್ತವಲ್ಲ. ಇದು ಇಂದಿನ ಜಗತ್ತಿಗೆ ಪ್ರಿಯ ಆಹಾರ. ಆದರೆ ಇದು ಹಿತ ಆಹಾರವಲ್ಲ ಎಂದರು.

    ದೇಹದಲ್ಲಿನ ಹಳೆಯ ಕೊಬ್ಬನ್ನು ತೆಗೆಯುವ ಸಾಮರ್ಥ್ಯ ತುಪ್ಪಕ್ಕಿದೆ. ಆಧುನಿಕರು ತುಪ್ಪದ ಬಗ್ಗೆ ಯಾವ ಅಭಿಪ್ರಾಯವನ್ನು ಹೊಂದಿದ್ದಾರೋ ಅದಕ್ಕೆ ತದ್ವಿರುದ್ಧವಾದ ಸ್ವಭಾವವನ್ನು ನಿಜವಾದ ತುಪ್ಪ ಹೊಂದಿದೆ. ತುಪ್ಪ ಕೊಲೆಸ್ಟ್ರಾಲ್ ಆಗಿ ದೇಹಕ್ಕೆ ಬಾಧಿಸುವುದಿಲ್ಲ. ಆದರೆ ದೇಹದಲ್ಲಿರುವ ಬೇಡದ ಕೊಬ್ಬನ್ನು ತುಪ್ಪ ತೆಗೆಯುತ್ತದೆ ಎಂದು ವಿವರಿಸಿದರು.

    Click here

    Click here

    Click here

    Call us

    Call us

    ತುಪ್ಪ ಯೋಗವಾಹಿಯಾಗಿದ್ದು, ಇನ್ನೊಂದು ದ್ರವ್ಯದ ಸಂಯೋಗವಾದಾಗ ತನ್ನ ಗುಣವನ್ನು ಬಿಡದೆಯೇ ವಿಶೇಷ ಕಾರ್ಯವನ್ನು ಮಾಡುವ ಸಾಮರ್ಥ್ಯ ತುಪ್ಪಕ್ಕಿದೆ. ಕಹಿಯಾದ ಪದಾರ್ಥವನ್ನು ತುಪ್ಪದ ಜೊತೆ ಸೇರಿಸಿದಾಗಲೂ, ತನ್ನ ಸಿಹಿಯನ್ನು ಬಿಟ್ಟುಕೊಡದೇ ಆ ಕಹಿಯನ್ನು ತುಪ್ಪ ಸ್ವೀಕರಿಸುತ್ತದೆ. ಪರಸ್ಪರ ವಿರುದ್ಧ ಗುಣದ ಪದಾರ್ಥವನ್ನು ಸೇರಿಸಿದಾಗಲೂ ತನ್ನ ಗುಣವನ್ನು ಬಿಟ್ಟುಕೊಡದ ಯೋಗ್ಯತೆ ತುಪ್ಪದ್ದು ಎಂದು ತುಪ್ಪದ ಮಹತಿಯನ್ನು ಹೇಳಿದರು.

    ಸವದತ್ತಿಯ ಶ್ರೀ ಶಿವಾನಂದ ಸ್ವಾಮೀಜಿ ಶ್ರೀಗಳನ್ನು ಸಂದರ್ಶಿಸಿ, ಆಹಾರದ ವಿಚಾರವಾಗಿ ನಡೆಯುತ್ತಿರುವ ಚಾತುರ್ಮಾಸ್ಯದ ಕುರಿತಾಗಿ ಶ್ಲಾಘನೆ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಅರವಿಂದ್ ಭಟ್, ಉದ್ಯಮಿ ಮಧುಕರ ನರಸಿಂಹ ಹೆಗಡೆ, ಹಿರಿಯ ನ್ಯಾಯವಾದಿ ಗಣಪತಿ ಹೆಗಡೆ ದುವಾ, ಸರಸ್ವತಿ ಜಯರಾಮ ಕೂರ್ಸೆ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು. ವಿಷ್ಣು ಸಭಾಹಿತ ಉಡುಪಿ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ಶಿವರಾಮ ಭಟ್ಟ ಪೊನ್ನೂರುಕಜೆ ದಂಪತಿಗಳು ಉಪಸ್ಥಿತರಿದ್ದರು.

    ಹಳ್ಳೇರು – ನಾಡವ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:
    ಹಳ್ಳೇರು ಹಾಗೂ ನಾಡವ ಸಮಾಜಗಳಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಪರಂಪರಾಗತವಾಗಿ ಶ್ರೀರಾಮಚಂದ್ರಾಪುರ ಮಠಕ್ಕೆ ನಡೆದುಕೊಳ್ಳುತ್ತಿರುವ ಈ ಸಮಾಜದ ಭಕ್ತರನ್ನು ಶ್ರೀಗಳು ಆಶೀರ್ವದಿಸಿದರು. ಸಮಾಜದ ಪ್ರಮುಖರಾದ ಪ್ರದೀಪ್ ನಾಯಕ ದೇವರಬಾವಿ, ನಾಗರಾಜ್, ವೆಂಕಣರಮಣ ಹಳ್ಳೇರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಮಹಿಳಾ ವೇದಿಕೆ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಸಮಾರಂಭ

    24/09/2026

    ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಕೀರ್ತನಾ ನಾಗೇಂದ್ರಗೆ ಬೆಳ್ಳಿ ಪದಕ

    23/09/2026

    ಡಾ. ಶಿವರಾಮ ಕಾರಂತ ಜನ್ಮದಿನಾಚರಣೆ: ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳು

    23/09/2026
    Leave A Reply Cancel Reply

    two × two =

    Call us

    Click Here

    Call us

    Call us

    Call us
    Highest Viewed Recently
    • ಪನ್ನೀರ್ ಇಂದಿನ ಜಗತ್ತಿಗೆ ಪ್ರಿಯ ಆಹಾರವೇ ಹೊರತು ಹಿತಾಹಾರವಲ್ಲ: ಶ್ರೀ ರಾಘವೇಶ್ವರ
    • ಭಂಡಾರ್ಕಾರ್ಸ್ ಕಾಲೇಜಿನಲ್ಲಿ ʼಬಾರಿಸು ಕನ್ನಡ ಡಿಂಡಿಮವʼ – ಗಿಳಿವಿಂಡು ಯಾನ ಮರಳಿ ಮನೆಗೆ ಉಪನ್ಯಾಸ ಕಾರ್ಯಕ್ರಮ
    • ಮಹಿಳಾ ವೇದಿಕೆ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಸಮಾರಂಭ
    • ವಿಟಿಯು ರ‍್ಯಾಂಕ್‌ ಪಟ್ಟಿಯಲ್ಲಿ ಆಳ್ವಾಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು 9 ರ‍್ಯಾಂಕ್‌
    • ಜನಸಾಮಾನ್ಯರ ವಾಹನಗಳ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.