Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಆರೋಗ್ಯ ಹಾಗೂ ಆತ್ಮಜ್ಞಾನ ಬೇರೆಬೇರೆಯಲ್ಲ: ಶ್ರೀ ರಾಘವೇಶ್ವರ
    ಊರ್ಮನೆ ಸಮಾಚಾರ

    ಆರೋಗ್ಯ ಹಾಗೂ ಆತ್ಮಜ್ಞಾನ ಬೇರೆಬೇರೆಯಲ್ಲ: ಶ್ರೀ ರಾಘವೇಶ್ವರ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಗೋಕರ್ಣ:
    ಪೂರ್ಣಾರೋಗ್ಯ ಹಾಗೂ ಆತ್ಮಜ್ಞಾನ ಎರಡೂ ಬೇರೆಬೇರೆಯಲ್ಲ. ಭಾರತೀಯ ಪರಂಪರೆಯಲ್ಲಿ ಆರೋಗ್ಯಕ್ಕೆ ಬೇರೆ ಹಾಗೂ ಆತ್ಮಜ್ಞಾನಕ್ಕೆ ಬೇರೆ ಎಂದು ಬೇರೆಬೇರೆಯಾಗಿ ಹೇಳಿಲ್ಲ. ಯಾವುದು ಆರೋಗ್ಯಕ್ಕೆ ಹಿತವೋ ಅದು ಆತ್ಮಜ್ಞಾನಕ್ಕೆ ಪೂರಕವೂ ಹೌದು. ತುಪ್ಪ ಆರೋಗ್ಯ ಕಾರಕವೂ ಹೌದು ಆತ್ಮಜ್ಞಾನಕ್ಕೆ ಪೂರಕವೂ ಹೌದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

    Click Here

    Call us

    Click Here

    ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಹಠಯೋಗಪ್ರದೀಪಿಕೆಯಲ್ಲಿ ಆತ್ಮಸಾಧನೆಯನ್ನು ಆರಂಭಿಸುವಾಗ ಹಾಲು ಮತ್ತು ತುಪ್ಪವನ್ನು ಸೇವಿಸಲು ಸೂಚಿಸಿದ್ದು, ಇದು ಯೋಗಸಾಧನೆಯ ಅಭ್ಯಾಸದ ಸಮಯದಲ್ಲಿ ಬೇಕಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಸತ್ವ, ರಜಸ್ಸು ಹಾಗೂ ತಮೋಗುಣಗಳು ಪೂರ್ತಿಯಾಗಿ ಒಂದಾದಾಗ ಮಾತ್ರ ಸಮಾಧಿ ಸ್ಥಿತಿಯನ್ನು ಹೊಂದಲು ಸಾಧ್ಯ. ತ್ರಿಗುಣಗಳು ಸಮಗೊಳ್ಳುವುದೇ ಆರೋಗ್ಯವಾಗಿದ್ದು, ಅದೇ ಆತ್ಮಜ್ಞಾನವೂ ಆಗಿದೆ. ತುಪ್ಪದ ಸೇವನೆಯಿಂದ ಸತ್ವ ವೃದ್ಧಿಯಾಗುತ್ತದೆ. ಸತ್ವಗುಣದ ವೃದ್ಧಿಯಿಂದ ಏಕಾಗ್ರತೆ, ಏಕಾಗ್ರತೆಯಿಂದ ಧ್ಯಾನ,ಧ್ಯಾನದಿಂದ ಮೋಕ್ಷ ಸಾಧ್ಯ ಎಂದರು.

    ತುಪ್ಪವು ಅಗ್ನಿಯದ್ದೇ ಇನ್ನೊಂದು ರೂಪವಾಗಿದ್ದು, ವೇದಗಳು ಇದನ್ನು ಉಲ್ಲೇಖಿಸಿದೆ. ಅಗ್ನಿಯ ಗುಣಗಳಿಗೂ ತುಪ್ಪದ ಗುಣಗಳಿಗೂ ಸಾಮ್ಯತೆಯಿದ್ದು, ಊರ್ಧ್ವಗತಿಯನ್ನು ಅಗ್ನಿಯಲ್ಲಿ ಕಾಣುವಂತೆ ತುಪ್ಪದಲ್ಲೂ ಕಾಣಬಹುದಾಗಿದ್ದು, ತುಪ್ಪವು ನಮ್ಮನ್ನು ಊರ್ಧ್ವಮುಖದಲ್ಲಿ ಮುಂದೆ ಮುಂದೆ ಕರೆದುಕೊಂಡು ಹೋಗಿ ಸಾಧಕನಿಗೆ ಮೋಕ್ಷವನ್ನು ಕೊಡಿಸುತ್ತದೆ.ಕೊಟ್ಟ ಕೊನೆಯಲ್ಲಿ ಎಲ್ಲಾ ರಸ್ತೆಗಳು ಹೆದ್ದಾರಿಯನ್ನೇ ಸೇರುತ್ತವೆ ಎಂಬಂತೆ ಮೋಕ್ಷದ ಎಲ್ಲಾ ಮಾರ್ಗಗಳೂ ರಾಜಯೋಗಕ್ಕೆ ಸೇರುತ್ತದೆ. ಧ್ಯಾನವೇ ರಾಜಯೋಗವಾಗಿದ್ದು, ಅದನ್ನು ಸಾಧಿಸಿದಾಗ ಸಮಾಧಿ ಸಿದ್ಧಿಸುತ್ತದೆ. ಇವೆಲ್ಲವಕ್ಕೂ ತುಪ್ಪ ಸಹಕಾರಿ ಎಂದು ತುಪ್ಪದ ಮಹತ್ವವನ್ನು ತಿಳಿಸಿದರು.

    ಸಾಧಕನಿಗೆ ತಂಪು ಎಂಬುದು ತುಂಬಾ ಮುಖ್ಯ. ಹಾಗಾಗಿ ಹಿಮಾಲಯದ ಚಳಿಯ ಸಮಯ ಸಾಧನೆಗೆ ಶ್ರೇಷ್ಠ ಎಂಬ ಮಾತಿದೆ. ಸಾಧನೆ ನಡೆಯುವಾಗ ದೇಹದಲ್ಲಿ ಅಗ್ನಿ ಜಾಗೃತಿಯಾಗುತ್ತದೆ. ಆಗ ದೇಹವನ್ನು ತಂಪಾಗಿಸುವ ಅವಶ್ಯಕತೆಯೂ ಇದೆ. ತುಪ್ಪ ಅಗ್ನಿವರ್ಧಕವೂ ಹೌದು ಹಾಗೂ ದೇಹಕ್ಕೆ ತಂಪು ನೀಡುವ ಸಾಮರ್ಥವೂ ಇದೆ. ಪರಮಾತ್ಮನಲ್ಲಿ ಕೋಟಿಸೂರ್ಯನ ಬೆಳಕು ಹಾಗೂ ಕೋಟಿಚಂದ್ರರ ತಂಪು ಇರುವಂತೆ ತುಪ್ಪದಲ್ಲಿಯೂ ಇದೇ ಗುಣವನ್ನು ಕಾಣಬಹುದು ಎಂದು ವಿವರಿಸಿದರು.

    ಖ್ಯಾತ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ, ಮಾಜಿ ಶಾಸಕ ಸುನಿಲ್ ಬಿ. ನಾಯ್ಕ್, ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ್ ಸೋನಿ, ಉದ್ಯಮಿ ಪ್ರಭಾಕರ ಕಾರಣಗಿರಿ ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆದರು, ರಮಣ ಭಟ್ ಮುಂಬೈ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ಕೇವಶ ಭಟ್ ದಂಪತಿಗಳು ಉಪಸ್ಥಿತರಿದ್ದರು.

    Click here

    Click here

    Click here

    Call us

    Call us

    ‘ಅನ್ನಂ ಬ್ರಹ್ಮ’ ಪ್ರವಚನ ಮಾಲಿಕೆಯು ಯಾರನ್ನೋ ಮೆಚ್ಚಿಸಲು ಮಾಡುತ್ತಿರುವುದಲ್ಲ. ಇಲ್ಲಿನ ವಿಚಾರಗಳು ಸಾಧನೆಗೆ ಇರುವಂತದ್ದಾಗಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವಯಕ್ತಿಕವಾಗಿ ಸಾಧನೆಯನ್ನು ಮಾಡಬೇಕು: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕಾಲ್ತೋಡು: 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

    25/09/2026

    ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ʼಪಿ.ಸಿ.ಓ.ಡಿ ಸಮಸ್ಯೆ – ಪರಿಹಾರʼ ವಿಶೇಷ ಉಪನ್ಯಾಸ

    25/09/2026

    ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರಿಗೆ ತರಬೇತಿ ಶಿಬಿರ

    25/09/2026
    Leave A Reply Cancel Reply

    1 × four =

    Call us

    Click Here

    Call us

    Call us

    Call us
    Highest Viewed Recently
    • ಆರೋಗ್ಯ ಹಾಗೂ ಆತ್ಮಜ್ಞಾನ ಬೇರೆಬೇರೆಯಲ್ಲ: ಶ್ರೀ ರಾಘವೇಶ್ವರ
    • ಕಾಲ್ತೋಡು: 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ʼಪಿ.ಸಿ.ಓ.ಡಿ ಸಮಸ್ಯೆ – ಪರಿಹಾರʼ ವಿಶೇಷ ಉಪನ್ಯಾಸ
    • ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರಿಗೆ ತರಬೇತಿ ಶಿಬಿರ
    • ಬಸ್ರೂರು ಶ್ರೀ ಶಾರದಾ ಕಾಲೇಜು: ಗಿಳಿವಿಂಡು ಯಾನ ಮರಳಿ ಮನೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.