ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಅಂಪಾರು ಗ್ರಾಮದ ಶಾನ್ಮಟ್ಟು ಉದಯ ಕುಮಾರ್ ಶೆಟ್ಟಿ (52) ಅವರು ಮನೆಯ ತೋಟದಲ್ಲಿ ಗೊಬ್ಬರದ ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಾಯಿ ಮತ್ತು ತಂಗಿಯ ಜತೆಗೆ ಅಂಪಾರಿನ ಶಾನ್ಮಟ್ಟು ಮನೆಯಲ್ಲಿ ಕೃಷಿ ಕೆಲಸವನ್ನು ಮಾಡಿಕೊಂಡು ವಾಸವಾಗಿದ್ದರು.
ಉದಯ ಕುಮಾರ್ ಶೆಟ್ಟಿ ಅವರಿಗೆ ಈವರೆಗೂ ವಿವಾಹವಾಗದೇ ಇದ್ದು ತನ್ನ ತಾಯಿಯ ನಂತರ ತನಗಾರು ಗತಿ ಎಂದು ಚಿಂತಿಸುತ್ತಿದ್ದು ಅದೇ ಚಿಂತೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿದ್ದವರನ್ನು ನೆರೆ ಕರೆಯವರ ಸಹಾಯದಿಂದ ಕೆಳಗಿಳಿಸಿ ಚಿಕಿತ್ಸೆಗೆ ಆ್ಯಂಬುಲೆನ್ಸ್ ನಲ್ಲಿ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅವರ ಸಹೋದರ ಕಿರಣ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ












