ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮೈಸೂರಿನ ದಸರಾ ಪ್ರಯುಕ್ತ ನಡೆಯುತ್ತಿರುವ ರಾಜ್ಯ ಮಟ್ಟದ ಪಂಜಾ ಕುಸ್ತಿ ಸ್ವರ್ಧೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಸುರೇಶ ಬಿ. ಪೂಜಾರಿ ಭಾಗವಹಿಸಿ 90ಕೆಜಿ ಬಲ ಕೈ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವುದರ ಮೂಲಕ ನಿರಂತರ 5ನೇ ವರ್ಷ ಚಿನ್ನದ ಪದಕ ಮೂಡಿಗೆರಿಸಿಕೊಂಡಿದ್ದಾರೆ.
ಅವರು ಬ್ರಹ್ಮಾವರದ ಬಾಡಿ ಜೋನ್ ಜಿಮ್ ಸಂಸ್ಥೆಯ ಸದಸ್ಯರಾಗಿದ್ದು ಅಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ ರಾಜ್ಯ ರಾಷ್ಟ್ರ ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.












