ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಯಾಣಿಕರಾಗಿ ಬಂದಿದ್ದ ದಂಪತಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ವೊಂದನ್ನು ರಿಕ್ಷಾದಲ್ಲೇ ಬಿಟ್ಟು ಹೋಗಿದ್ದು ಅದನ್ನು ಗಮನಿಸಿದ ಆಟೋ ರಿಕ್ಷಾ ಚಾಲಕ ಫಝಲು ರೆಹಮಾನ್ ಎಂಬುವರು ಗಂಗೊಳ್ಳಿ ಪೊಲೀಸ್ ಠಾಣೆ ಮೂಲಕ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಅ.17 ರಂದು ಆಟೋ ಚಾಲಕರಾದ ಫಝಲು ರೆಹಮಾನ್ ಎನ್ನುವರ ಆಟೋದಲ್ಲಿ ಬಾಡಿಗೆ ಬಂದಿದ್ದ ಕೇಶವ ತೋಳಾರ್ ಹಾಗೂ ಅವರ ಪತ್ನಿಯು ಆಟೋ ರಿಕ್ಷಾದಲ್ಲೇ ಅಂದಾಜು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗನ್ನು ಬಿಟ್ಟು ಹೋಗಿದ್ದು, ಚಾಲಕ ಫಝಲು ರೆಹಮಾನ್ ಪ್ರಾಮಾಣಿಕತೆಯಿಂದ ಈ ಬ್ಯಾಗ್ನ್ನು ಗಂಗೊಳ್ಳಿ ಪೊಲೀಸ್ ಠಾಣೆಗೆ ತಂದು ನೀಡಿದ್ದು ಬ್ಯಾಗ್ ವಾರೀಸುದಾರರ ಪತಿ ಕೇಶವ ತೋಳಾರ್ ಅವರು ಠಾಣೆಗೆ ಅಗಮಿಸಿ ಬ್ಯಾಗ್, ಮೊಬೈಲ್ ಫೋನ್ ಹಾಗೂ ಇತರ ದಾಖಲಾತಿಗಳನ್ನು ಪರಿಶೀಲಿಸಿ ಪಡೆದುಕೊಂಡರು.
ಆಟೋ ಚಾಲಕರಾದ ಫಝಲು ರೆಹಮಾನ್ ಅವರ ಪ್ರಾಮಾಣಿಕತೆಗೆ ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯಕ್ ಅಭಿನಂದಿಸಿದ್ದಾರೆ.












