ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ತಾರಿಕಟ್ಟೆ ಕ್ರಾಸ್ ಹತ್ತಿರ ನಡೆದಿದೆ. ಮೃತರನ್ನು ಕುಯಿರ ನಾಯ್ಕ (61) ಎಂದು ಗುರುತಿಸಲಾಗಿದೆ
ಬೈಕೊಂದು ಬೆಳ್ವೆ ಕಡೆಯಿಂದ ಗೊಳಿಯಂಗಡಿ ಕಡೆಗೆ ಹೋಗುತ್ತಿದ್ದ ಬೈಕ್, ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಮನೆ ಕಡೆಗೆ ಹೋಗುತಿದ್ದ ಕುಯಿರ ನಾಯ್ಕಗೆ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಕುಯಿರ ನಾಯ್ಕ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅ.21ರಂದು ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಅಪಘಾತದಿಂದ ಬೈಕ್ ಸವಾರ ಕೃಷ್ಣ ಎಂಬವರು ಕೂಡ ಗಾಯಗೊಂಡರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















