ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಠಿಣ ಪರಿಶ್ರಮ ಮತ್ತು ಉದ್ಯಮಶೀಲತೆಯ ದೃಢ ಸಂಕಲ್ಪದ ರೋಚಕ ಕಥೆಗೆ ಸಾಕ್ಷಿಯಾಗಿರುವ ವೀರೇಂದ್ರ ಎಸ್. ಪೂಜಾರಿ ಅವರಿಗೆ ಅಮೆರಿಕದ ಫ್ರಾಂಕ್ಪರ್ಡ್ ಇಂಟರ್ನ್ಯಾಷನಲ್ ಯೂನಿವರ್ಸಿಟಿಯು ‘ಬಿಸಿನೆಸ್ ಡೆವಲಪ್ಮೆಂಟ್’ (ವ್ಯಾಪಾರ ಅಭಿವೃದ್ಧಿ) ವಿಭಾಗದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ನವದೆಹಲಿಯಲ್ಲಿ ನಡೆದಿರುವ ಭವ್ಯ ಸಮಾರಂಭದಲ್ಲಿ ಈ ಪ್ರತಿಷ್ಠಿತ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

ಬೈಂದೂರು ತಾಲೂಕಿನ ಕೋಣ್ಕಿಯ ಅತ್ಯಂತ ಸಾಧಾರಣ ಹಿನ್ನೆಲೆಯಿಂದ ಬಂದ ವೀರೇಂದ್ರ ಪೂಜಾರಿ ಅವರ ನಿರಂತರ ಪರಿಶ್ರಮಕ್ಕೆ ಗೌರವ ಡಾಕ್ಟರೇಟ್ ಸಿಕ್ಕಿದೆ.ವ್ಯವಹಾರ ಅಭಿವೃದ್ಧಿ, ಸುಸ್ಥಿರ ಬೆಳವಣಿಗೆ ಮತ್ತು ಆರ್ಥಿಕ ಸಬಲೀಕರಣದಲ್ಲಿ ಅವರ ನವೀನ ತಂತ್ರಗಳು ಗ್ರಾಮೀಣ ಭಾಗದಲ್ಲಿ ಉದ್ಯೋಗ ಅವಕಾಶವನ್ನು ಸೃಷ್ಟಿಸಿದ್ದಾರೆ.
ಹಾಗೇ ನಾಯಕತ್ವ, ಕಾರ್ಯತಂತ್ರದ ವಿಸ್ತರಣೆ ಮತ್ತು ಸಮುದಾಯ ಆಧಾರಿತ ಉದ್ಯಮ ಅಭಿವೃದ್ಧಿಗೆ ನೀಡಿರುವ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಫ್ರಾಂಕ್ವರ್ಪ್ ಇಂಟರ್ನ್ಯಾಷನಲ್ ಯೂನಿವರ್ಸಿಟಿಯು ಶ್ರೀ ಪೂಜಾರಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಿದೆ. ಸಣ್ಣ ಹಳ್ಳಿಗಳಿಂದಲೂ ನಾಯಕತ್ವವು ಹೊರಹೊಮ್ಮಿ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಪ್ರಭಾವ ಬೀರಬಹುದು ಎಂಬುದಕ್ಕೆ ಅವರ ವೃತ್ತಿಜೀವನವೇ ಅತ್ಯುತ್ತಮ ಉದಾಹರಣೆ ಎಂದು ವಿಶ್ವವಿದ್ಯಾಲಯ ಉಲ್ಲೇಖಿಸಿದೆ.
ಸದ್ಯ ವಿರೇಂದ್ರ ಎಸ್. ಪೂಜಾರಿ ಅವರು,ವಿಶ್ರುತ್ ಅಗ್ರೋ ಇಂಡಸ್ಟ್ರೀಸ್ ರಿ. ನ ಎಂಡಿಯಾಗಿ, ವಿಶ್ರುತ್ ಮಾರ್ಕೆಟಿಂಗ್ ಇಂಡಿಯಾ ಸಿಇಒಯಾಗಿ, ವಿಶ್ರುತ್ ಅಗ್ರಿ ಬಿಸಿನೆಸ್ ಪ್ರೈವೇಟ್ ಲಿಮಿಟೆಡ್ ನ ಡೈರೆಕ್ಟರ್ ಆಗಿ, ಭೂಮಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಸ್ಥಾಪಕರಾಗಿ, ಬೈಂದೂರು ಭೂಮಿ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ನಾಗೂರು ಫೌಂಡರ್ ಅಂಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

















