ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಒಂದು ಕುಟುಂಬದ ಒಂದು ಗಂಡು ಅಥವಾ ಹೆಣ್ಣು ಶಿಕ್ಷಿತನಾದರೆ ಆ ಕುಟುಂಬದ ಏಳ್ಗೆಯಾಗುವುದು. ಮರವಂತೆ ಗ್ರಾಮದ ಕನ್ನಡ ಖಾರ್ವಿ ಸಮುದಾಯದ ಪ್ರತಿಯೊಂದು ಕುಟುಂಬದ ಮಕ್ಕಳು ಶಿಕ್ಷಣ ಪಡೆಯುವಂತಾಗಬೇಕು. ಇದರಿಂದ ಈ ಸಮುದಾಯದ ಕೆಲವು ಮಕ್ಕಳಿಗಾದರೂ ನೆರವಾಗಬೇಕು ಎಂದು ನವೀನಚಂದ್ರ ಮರವಂತೆ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ. ಶಂಕರ ಖಾರ್ವಿ ಹೇಳಿದರು.
ಅವರು ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ನವೀನಚಂದ್ರ ಮರವಂತೆ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಸಹಾಯಕ ಮೀನುಗಾರಿಕಾ ನಿರ್ದೇಶಕ ಸಿ.ಎಸ್. ಖಾರ್ವಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಬೇಕು. ಆ ಗುರಿಯನ್ನು ಸಾಧಿಸುವ ಛಲದೊಂದಿಗೆ ಸಾಧನೆ ಮಾಡಬೇಕು ಎಂದರು.
ಟ್ರಸ್ಟ್ನ ಸಲಹೆಗಾರ ಎಂ. ಶ್ರೀಧರ ಖಾರ್ವಿ ಮತ್ತು ಅಣ್ಣಪ್ಪ ಖಾರ್ವಿ ಉಪಸ್ಥಿತರಿದ್ದರು. ಒಟ್ಟು ಸುಮಾರು 19 ವಿದ್ಯಾರ್ಥಿಗಳಿಗೆ ಸುಮಾರು 1.8 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು. ಅಣ್ಣಪ್ಪ ಖಾರ್ವಿ ವಂದಿಸಿದರು. ಮನೋಹರ ಖಾರ್ವಿ ನಿರೂಪಿಸಿದರು.

















