ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಬೈಂದೂರು ಸಿಟಿ ಘಟಕವು 2026ನೇ ಸಾಲಿನಲ್ಲಿ ಬರೋಬ್ಬರಿ ಹತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಗಮನಾರ್ಹ ಸಾಧನೆ ಮಾಡಿದೆ.
ಮಂಗಳೂರಿನ ಅಡ್ಯಾರ್ ಗಾರ್ಡನ್ ಅಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ಜೆಸಿಐ ಬೈಂದೂರು ಸಿಟಿಯ ಅಧ್ಯಕ್ಷರಾದ ಜೆಎಫ್ಎಂ ಚೈತ್ರ ಸತೀಶ್ ಅವರ ನೇತೃತ್ವದ ತಂಡವು ಜೆಸಿಐ ವಲಯಾಧ್ಯಕ್ಷರಾದ ಜೆಎಪ್ಎಸ್ ಸಂತೋಷ್ ಶೆಟ್ಟಿ ಅವರಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದರು.


ಸಂಸ್ಥೆಯ ಸಮಾಜಮುಖಿ ಸೇವೆ, ಜನಪರ ಕಾಳಜಿ ಹಾಗೂ ಸಂಘಟನಾ ಸಾಮರ್ಥ್ಯಕ್ಕೆ ಈ ಪ್ರತಿಷ್ಠಿತ ಗೌರವ ಸಂದಿದೆ. ವಲಯದ ಅತ್ಯುತ್ತಮ ಸ್ಥಳೀಯ ಸಮುದಾಯ ಪರಿಣಾಮಕಾರಿ ಯೋಜನೆಯಲ್ಲಿ ಪ್ರಥಮ ವಿಜೇತ ಘಟಕವಾಗಿ ಮತ್ತು ವಲಯ ಮಟ್ಟದ ಅತ್ಯುತ್ತಮ ಸ್ಥಳೀಯ ಸಂಸ್ಥೆಯ ಪದಾಧಿಕಾರಿ – ರನ್ನರ್ ಪ್ರಶಸ್ತಿಯನ್ನು ನಿಕಟ ಪೂರ್ವ ಕಾರ್ಯದರ್ಶಿ ರಾಘವೇಂದ್ರ ಸೂರ್ಕುಂದ ಅವರು ಪಡೆದು ಕೊಳ್ಳುವ ಮೂಲಕ ವಲಯದ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮತ್ತು ಜೆಸಿಐ ವೀಕ್ ಪ್ರಥಮ ದಿನದ ಟಾಪ್ ಒನ್ ಪ್ರಶಸ್ತಿ, ವಲಯ ಅಧ್ಯಕ್ಷರ ಭೇಟಿಯ ಶಾಶ್ವತ ಯೋಜನೆಯ ವಿನ್ನರ್ ಪ್ರಶಸ್ತಿಯೊಂದಿಗೆ ಜೆಸಿಐ ಬೈಂದೂರು ಸಿಟಿ ಘಟಕ ಹತ್ತು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಉತ್ತಮ ಘಟಕವಾಗಿ ಹೊರಹೊಮ್ಮಿತು .


ಸಾರ್ವಜನಿಕ ಸುರಕ್ಷತೆಯ ಜಾಗೃತಿ ಅಭಿಯಾನಗಳು ಪ್ಲಾಸ್ಟಿಕ್ ಬದಲಿಗೆ ಥರ್ಮಸ್ ಬಾಟಲಿಗಳ ವಿತರಣೆ, ಸರ್ಕಾರಿ ಶಾಲೆಗಳಿಗೆ ಟಿವಿ ಕೊಡುಗೆ, ಪುಸ್ತಕ ಕೊಡುಗೆ, ಅಗತ್ಯವಿರುವವರಿಗೆ ನೆರವಿನ ಕಿಟ್ಗಳ ಕೊಡುಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ತರಬೇತಿ ಕಾರ್ಯಕ್ರಮಗಳ ಆಯೋಜನೆ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಈ ಸಂದರ್ಭದಲ್ಲಿ ವಲಯ ಜೆ ಸಿ ಬೈಂದೂರು ಘಟಕದ ಸ್ಥಾಪಕ ಅಧ್ಯಕ್ಷರಾದ ಮಣಿಕಂಠ ಎಸ್ ದೇವಾಡಿಗ, ನಿಕಟ ಪೂರ್ವ ಅಧ್ಯಕ್ಷರಾದ ರಾಜು ಎಸ್. ಮೊಗವೀರ, ರಾಘವೇಂದ್ರ ಸೂರ್ಕುಂದ , ಸುನಂದ ಹಾಗೂ ಗಣ್ಯರು ಉಪಸ್ಥಿತರಿದ್ದರು.

















