ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ಸಾಕಷ್ಟು ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಸ್ವರ್ಣಲೇಪಿತ ಆಂಜನೇಯ ಕವಚ ಸಮರ್ಪಿಸಿದ ಬೆಂಗಳೂರಿನ ಯಜ್ಞನಾರಾಯಣ ಹೇರ್ಳೆ ಹೇಳಿದರು.
ಅವರು ಗುರುವಾರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತಕ್ಕೊಳಪಟ್ಟ ಶ್ರೀ ಆಂಜನೇಯ ದೇವರಿಗೆ ಸರ್ಣಲೇಪಿತ ಕವಚ ಹಸ್ತಾಂತರ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೇಗುಲದ ಅಭಿವೃದ್ಧಿಯಾಗಬೇಕಾದರೆ ಅರ್ಚಕ ಧಾರ್ಮಿಕ ಶ್ರದ್ಧೆ ಅಷ್ಟೆ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತದೆ ಅದೇ ರೀತಿ ಸಾಲಿಗ್ರಾಮ ದೇಗುಲದ ಅರ್ಚಕರ,ಆಡಳಿತ ಮಂಡಳಿಯ ಪಾತ್ರ ಗಣನೀಯವಾದದ್ದು ಎಂದರಲ್ಲದೆ ಯುವ ಜನಾಂಗ ಧಾರ್ಮಿಕ ಸಂಸ್ಕಾರಯುತ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಬಂಟ್ವಾಳ ಪ್ರಕಾಶ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ದೇಗುಲದ ಮಾಜಿ ಅಧ್ಯಕ್ಷರಾದ ಜಗದೀಶ್ ಕಾರಂತ,ಡಾ.ಕೆ.ಎಸ್ ಕಾರಂತ,ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್ ಹಂದೆ,ಅಂಗಸಂಸ್ಥೆಯ ಅಧ್ಯಕ್ಷ ಬಿ.ಸಿ ಹೊಳ್ಳ,ದೇಗುಲದ ಟ್ರಸ್ಟಿಗಳಾದ ಪ್ರಸನ್ನ ತುಂಗ,ಲಕ್ಷ್ಮೀನಾರಾಯಣ ಹೊಳ್ಳ,ತಾರಾನಾಥ ಹೊಳ್ಳ,ಮಾಜಿ ಉಪಾಧ್ಯಕ್ಷ ರಘುನಾಥ್ ಸೋಮಯಾಜಿ ಉಪಸ್ಥಿತರಿದ್ದರು.
ಟ್ರಸ್ಟಿ ಚಂದ್ರಶೇಖರ್ ನಾವಡ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಪರುಶರಾಮ ಭಟ್ ನಿರೂಪಿಸಿ, ವಂದಿಸಿದರು.

















