ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ ಬೈಂದೂರು – ಶಿರೂರು ಘಟಕ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ ಉಡುಪಿ ಹಾಗೂ ಹೆಲ್ತ್ ಕೇರ್ ಮಂಗಳೂರು ಇವರ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಬಂಟರ ಸಭಾಭವನ ಯಡ್ತರೆಯಲ್ಲಿ ನಡೆಯಿತು.

ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ ಎಸ್. ಕೊರವಡಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ಸಾಧಕರಿದ್ದಾರೆ. ಸಾಧಿಸುವ ಸಮಯದಲ್ಲಿ ಉತ್ತಮ ಪ್ರೋತ್ಸಾಹ ದೊರೆತಾಗ ಇನ್ನಷ್ಟುಸಾಧನೆ ಸಾಧ್ಯ.ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಸಂಘಟನೆ ಜಿಲ್ಲೆಯಲ್ಲಿಯೇ ಉತ್ತಮ ಹೆಸರು ಹಾಗೂ ಗೌರವ ಉಳಿಸಿಕೊಂಡಿರುವುದು ಸಂಘದ ಸಮಾಜಮುಖಿ ಸಾಧನೆಯ ಹಿರಿಮೆಯಾಗಿದೆ ಎಂದರು.
ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಘಟಕದ ಅಧ್ಯಕ್ಷ ಹರೀಶ ಎಂ. ಮಯ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕ ರಾಮ ಮೊಗವೀರ ಕಳವಾಡಿ, ಮೊಗವೀರ ಯುವ ಸಂಘಟನೆ ನಿಕಟಪೂರ್ವ ಅಧ್ಯಕ್ಷ ಸೋಮಶೇಖರ ಜಿ. ಕಸ್ಟಮ್, ಬೈಂದೂರು ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್ ಮಾಲಕ ದಿನೇಶ ಎಂ. ಕುಂದರ್, ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಕೃಷ್ಣ ಅಳ್ವೆಗದ್ದೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಾಲಪ್ರತಿಭೆ ದೀಪಾ ದಿನೇಶ ಕುಂದರ್, ಮಿಸ್ಟರ್ ಕರ್ನಾಟಕ ಐಕಾನ್ ಪ್ರಶಸ್ತಿ ಪುರಸ್ಕ್ರತ ಮನೋಜ್ ಕುಮಾರ್ ಹಾಗೂ ಅಂತರ್ ರಾಜ್ಯಮಟ್ಟದ ಕರಾಟೆ ವಿಜೇತ ದಿಶಾನ್ ಉಮೇಶ ಮೊಗವೀರ ಅವರನ್ನು ಸಮ್ಮಾನಿಸಲಾಯಿತು ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿಭಾಗದಲ್ಲಿ ಸಾಧನೆಗೈದ ಮೊಗವೀರ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯದರ್ಶಿ ನಾಗರಾಜ ಕೆ. ಪಡುವರಿ ಸ್ವಾಗತಿಸಿ, ಸ್ಥಾಪಕಾಧ್ಯಕ್ಷ ಪಾಂಡುರಂಗ ಮೊಗವೀರ ತಗ್ಗರ್ಸೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

















