ಗಂಗೊಳ್ಳಿ : ಸ್ವಾಮಿ ವಿವೇಕಾನಂದರು ದೇಶದ ಯುವ ಶಕ್ತಿಗೆ ಪ್ರೇರಣೆ. ಹಿಂದೆ ವಿದೇಶಿಯರ ದೃಷ್ಟಿಯಲ್ಲಿ ಭಾರತವೆಂದರೆ ಅನಾಗರಿಕರು ಎಂಬ ಕಲ್ಪನೆ ಇದ್ದಿತು. ಆದರೆ ಆ ಕಲ್ಪನೆಯನ್ನು ತೊಡೆದು ಹಾಕಿ ಭಾರತವೆಂದರೆ ಹಿಂದು ಸಂಸ್ಕೃತಿ ಎಂದು ಜಗತ್ತಿಗೆ ತೋರಿಸಿಕೊಟ್ಟವರು ಸ್ವಾಮಿ ವಿವೇಕಾನಂದರು ಎಂದು ಹಿಂದು ಜಾಗರಣ ವೇದಿಕೆಯ ಮಂಗಳೂರು ವಿಭಾಗದ ಸಂಘಟನಾ ಕಾರ್ಯನಿರ್ವಾಹಕ ಪ್ರಕಾಶ ಕುಕ್ಕೆಹಳ್ಳಿ ಹೇಳಿದರು.
ಅವರು ಗಂಗೊಳ್ಳಿಯ ದಾಕುಹಿತ್ಲುವಿನ ಶ್ರೀ ರಾಮ ದೇವಸ್ಥಾನದ ವಠಾರದಲ್ಲಿ ಸ್ವಾಮಿ ವಿವೇಕಾನಂದರ ದೇಶ ಪ್ರೇಮಿಗಳ ಬಳಗ ದಾಕುಹಿತ್ಲು ಗಂಗೊಳ್ಳಿ ಇವರ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 153ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿ ಮಾತನಾಡಿದರು. ಹಿಂದು ಜಾಗರಣ ವೇದಿಕೆ ಬೈಂದೂರು ತಾಲೂಕು ಸಂಚಾಲಕ ವಾಸು ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಾಕುಹಿತ್ಲು ಶ್ರೀ ರಾಮ ದೇವಸ್ಥಾನದ ಅಧ್ಯಕ್ಷ ಜಿ.ಪಿ.ನಾಗೇಶ ಖಾರ್ವಿ, ಕರಾವಳಿ ಯುತ್ ಕ್ಲಬ್ ಅಧ್ಯಕ್ಷ ಸಂತೋಷ ಖಾರ್ವಿ, ಸ್ವಾಮಿ ವಿವೇಕಾನಂದರ ದೇಶ ಪ್ರೇಮಿಗಳ ಬಳಗದ ಅಧ್ಯಕ್ಷ ರಾಜೇಶ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ರಘು ಖಾರ್ವಿ ಸ್ವಾಗತಿಸಿದರು. ಸುಧಾಕರ ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಸುಧೀರ ಖಾರ್ವಿ ವಂದಿಸಿದರು.