ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಗೆಳೆಯರ ಬಳಗ ಕಾರ್ಕಡ – ಸಾಲಿಗ್ರಾಮ ಇವರ ನೇತೃತ್ವದಲ್ಲಿ ಹಾಗೂ ಕಾರ್ಕಡ ಗ್ರಾಮಸ್ಥರಿಂದ ಸಂಗ್ರಹಿಸಿದ ಎರಡು ಲೋಡು ಒಣಮೇವುನ್ನು ಆರೂರು ಬೆಳ್ಮಾರಿನಲ್ಲಿರುವ ಪುಣ್ಯಕೋಟಿ ಗೋ ಸೇವಾ ಕೇಂದ್ರಕ್ಕೆ ತೆರಳಿ ಗೋ ಪೂಜೆ ನೆರವೇರಿಸಿ ಗೋಗ್ರಾಸ ನೀಡಿ, ಹಸ್ತಾಂತರಿಸಲಾಯಿತು.
ಇದೇ ವೇಳೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಗೋಶಾಲೆಗೆ ಒಣ ಮೇವು ನೀಡಲಾಯಿತು. ಕೊಡುಗೆಯನ್ನು ಸ್ವೀಕರಿಸಿ, ಕೃತಜ್ಞತೆ ಸಲ್ಲಿಸಿದ ಗೋಶಾಲೆಯ ನಿರ್ದೇಶಕರಾದ ಶ್ರೀನಿವಾಸ ಇವರು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳರ ಸಮಾಜ ಸೇವೆ ಹಾಗೂ ಗೆಳೆಯರ ಬಳಗದ ಸದಸ್ಯರಿಗೆ ಗೋವಿನ ಮೇಲಿರುವ ಪ್ರೀತಿ – ಭಕ್ತಿ ಅವರ ಈ ಸೇವೆಗೆ ಸಾಕ್ಷಿ. ಹುಲ್ಲು ನೀಡಿದ ಹಾಗೂ ಈ ಬಗ್ಗೆ ಕಾರ್ಯಾಚರಿಸಿದ ಗೆಳೆಯರ ಬಳಗದ ಎಲ್ಲ ಸದಸ್ಯರಿಗೂ ಗೋಮಾತೆ ಅನುಗ್ರಹಿಸಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ, ಜತೆ ಕಾರ್ಯದರ್ಶಿ ಕೆ. ಜಗದೀಶ ಆಚಾರ್ಯ, ಕೆ. ಶ್ರೀಪತಿ ಆಚಾರ್ಯ, ಕೆ.ಶೇಖರ, ಕೆ. ಉದಯ ಐತಾಳ ಹಾಗೂ ಕೆ .ರಾಘವೇಂದ್ರ ಇನ್ನಿತರರು ಉಪಸ್ಥಿತರಿದ್ದರು.











