ಬೈಂದೂರು ವತ್ತಿನಕಟ್ಟೆ: ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ

Call us

Call us

Call us

ಬೈಂದೂರು: ಕಲಿಯುಗದ ಪ್ರತ್ಯಕ್ಷ ದೇವರಾಗಿರುವ ನಾಗನ ಆರಾಧನೆ ಶ್ರೇಷ್ಠವಾಗಿದ್ದು, ವಿಶಿಷ್ಠ ಪೂಜಾ ಕೈಂಕರ್ಯಗಳನ್ನು ಮೂಲಕ ಆರಾಧನೆ ಮಾಡಲಾಗುವುದು. ಲೋಕ ಕಲ್ಯಾಣಾರ್ಥವಾಗಿ ಮಾಡುವ ನಾಗಮಂಡಲೋತ್ಸವವನ್ನು ಗ್ರಾಮದ ಎಲ್ಲಾ ಜನರು ಸಂಘಟಿತರಾಗಿ, ಸಧ್ಭಕ್ತಿಯಿಂದ ಆಚರಿಸಿದಾಗ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಲಾಷ ಸೋಮಯಾಜಿ ಹೇಳಿದರು.

Call us

Click Here

ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಸನ್ನಿಧಾನದಲ್ಲಿ ಫೆ. 9ರಿಂದ 13 ರ ತನಕ ನಡೆಯುವ ಸಾರ್ವಜನಿಕ ಲಕ್ಷಮೋದಕ ಗಣಪತಿಯಾಗ ಹಾಗೂ ಚತುಃ ಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಗುರುವಾರ ಚಪ್ಪರ ಮುಹೂರ್ತ ನೆರವೇರಿಸಿ ಅವರು ಮಾತನಾಡಿದರು.ನಾಗನನ್ನು ಭೂಮಿಯ ಅಧಿಪತಿ ಎಂದು ನಾವು ವೈಜ್ಞಾನಿಕವಾಗಿ ಹಾಗೂ ಪೌರಾಣಿಕವಾಗಿಯೂ ಹೇಳಲಾಗುತ್ತಿದೆ, ಆದಿಶೇಷ ಎಂದರೆ ನಾಗನು ಈ ಭೂಮಿಯನ್ನು ಹೊತ್ತುಕೊಂಡಿದ್ದಾನೆ ಎಂದು ಹೇಳಲಾಗಿದ್ದರೇ, ವಿಜ್ಞಾನಿ ಡಾರ್ವಿನ್ ಎನ್ನುವವರು ಸರಿಸ್ರಪಗಳು ಈ ಭೂಮಿಯಲ್ಲಿ ಮೊದಲ ಹುಟ್ಟಿದ ಜೀವಿ ಎಂದು ತನ್ನ ಸಿದ್ದಾಂತದಲ್ಲಿ ತಿಳಿಸಿದ್ದಾನೆ, ಹೀಗೆ ನಾಗನನ್ನು ಭೂಮಿಯ ಅಧಿಪತಿ ಎಂದು ಹೇಳಲಾಗುತ್ತಿದೆ. ನಾಗನ ಆರಾಧನೆಯನ್ನು ಸಂಘಟಿತರಾಗಿ, ಭಕ್ತಿಯಿಂದ ಆರಾಧನೆ ಮಾಡುವುದರಿಂದ ಇಡೀ ಊರಿಗೆ ವಿಶೇಷ ಶಕ್ತಿ ಲಭಿಸುತ್ತದೆ, ಆದರೆ ಮಾಡುವ ಉಪಾಸನೆ, ನಡಾವಳಿಯಲ್ಲಿ ಲೋಪವಾದರೇ ಕಷ್ಟನಷ್ಟ ಖಚಿತ ಎಂದರು.

ನಾಗಮಂಡಲೋತ್ಸವದಲ್ಲಿ ಏಕ ಪವಿತ್ರ, ಚತುಃ ಪವಿತ್ರ, ಅಷ್ಟ ಪವಿತ್ರ ಹಾಗೂ ಶೋಡಾಸ್ ಪವಿತ್ರ ಎಂಬ ನಾಲ್ಕು ವಿಧಾನಗಳಿವೆ, ಇವುಗಳು ತನ್ನದೇ ಆದ ಪಾವಿತ್ರ್ಯತೆಯನ್ನು ಹೊಂದಿದೆ. ನಾಗಮಂಡಲದಿಂದ ಮಹತ್ವ ಕಲ್ಯಾಣವಾಗಲಿದ್ದು, ಮನುಷ್ಯನ ಭಕ್ತಿಯ ಅನುಗುಣವಾಗಿ ನಾಗನ ಅನುಗ್ರಹ ಲಭಸುತ್ತದೆ ಎಂದರು ವತ್ತಿನಕಟ್ಟೆ ಶ್ರೀ ಮಹಾಸತಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಶೆಟ್ಟಿ, ತಾ.ಪಂ. ಸದಸ್ಯ ರಾಜು ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಪಡುವರಿ ಗ್ರಾ.ಪಂ. ಉಪಾಧ್ಯಕ್ಷ ಸದಾಶಿವ ಪಡುವರಿ, ಬೈಂದೂರು ಗ್ರಾ.ಪಂ. ಉಪಾಧ್ಯಕ್ಷ ವೆಂಕ್ಟ ಪೂಜಾರಿ, ಜಗನ್ನಾಥ ಶೆಟ್ಟಿ, ಅರ್ಚಕ ಕೃಷ್ಣಮೂರ್ತಿ ನಾವುಡ, ಕಾರ್ಯದರ್ಶಿ ಶಿವರಾಮ ಪೂಜಾರಿ ಉಪಸ್ಥಿತರಿದ್ದರು. ಪತ್ರಕರ್ತ ನರಸಿಂಹ ನಾಯಕ್ ನಿರೂಪಿಸಿದರು.

news Nagamandala

news Nagamandala ???????????????????????????????

Click here

Click here

Click here

Click Here

Call us

Call us

Leave a Reply