Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮಕ್ಕಳ ಆತ್ಮವಿಶ್ವಾಸ, ಸೃಜನಶೀಲತೆಗೆ ವೇದಿಕೆಯಾದ ‘ರಾಕೆಟ್ಸ್ ಆನ್ ದಿ ರನ್‌ವೇ’
    ಊರ್ಮನೆ ಸಮಾಚಾರ

    ಮಕ್ಕಳ ಆತ್ಮವಿಶ್ವಾಸ, ಸೃಜನಶೀಲತೆಗೆ ವೇದಿಕೆಯಾದ ‘ರಾಕೆಟ್ಸ್ ಆನ್ ದಿ ರನ್‌ವೇ’

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಮಕ್ಕಳ ಪ್ರತಿಭೆ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಲಿಟಲ್ ರಾಕೆಟ್ಸ್ ವತಿಯಿಂದ ‘ರಾಕೆಟ್ಸ್ ಆನ್ ದಿ ರನ್‌ವೇʼ ಎಂಬ ವಿಶಿಷ್ಟ ಮಕ್ಕಳ ಫ್ಯಾಷನ್ ಶೋ ಕಾರ್ಯಕ್ರಮ ಇತ್ತೀಚಿಗೆ ಉಡುಪಿಯ ಒಸಿಯನ್ ಪಲ್೯ ನಲ್ಲಿ ಆಯೋಜಿಸಲಾಯಿತು.

    Call us

    Click Here

    ಮೂರು ತಾಯಂದಿರಾದ  ಬಬಿತಾ ಮಸ್ಕರೇನ್ಹಸ್,  ವೈಷ್ಣವಿ ರಕ್ಷಿತ್ ಕುಂದರ್ ಹಾಗೂ ಡಾ. ಮೇಘಾ ಅಶ್ವತ್ ಶೆಟ್ಟಿ ಅವರ ಕನಸಿನ ಕೂಸಾಗಿ ರೂಪುಗೊಂಡಿರುವ ‘ಲಿಟಲ್ ರಾಕೆಟ್ಸ್’ ಮಕ್ಕಳ ಉಡುಪು ಬ್ರ್ಯಾಂಡ್, ಪ್ರತಿಯೊಂದು ಮಗುವಿಗೂ ಆರಾಮದಾಯಕ, ಆಕರ್ಷಕ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವ ಉಡುಪುಗಳ ಹೊಂದಿರುವ ಮಳಿಗೆ ಲೋಕಾರ್ಪಣೆಗೊಂಡಿತು.

    ಕಾರ್ಯಕ್ರಮದಲ್ಲಿ ಪುಟಾಣಿಗಳು ವಿವಿಧ ಆಕರ್ಷಕ ಉಡುಪುಗಳನ್ನು ಧರಿಸಿ ರ್ಯಾಂಪ್‌ ಮೇಲೆ ಹೆಜ್ಜೆ ಹಾಕುವ ಮೂಲಕ ತಮ್ಮ ಪ್ರತಿಭೆ, ವ್ಯಕ್ತಿತ್ವ ಹಾಗೂ ಆತ್ಮವಿಶ್ವಾಸವನ್ನು ಅನಾವರಣಗೊಳಿಸಿದರು.

    ಮಳಿಗೆಯನ್ನು ಉದ್ಘಾಟಿಸಿದ ಗೀತಾನಂದ ಫೌಂಡೇಶನ್ ಟ್ರಸ್ಟಿ ಗೀತಾ ಎ ಕುಂದರ್ ಮಾತನಾಡಿ, ಕೇವಲ ಗೆಲುವು ಅಥವಾ ಸ್ಪರ್ಧೆಗೆ ಸೀಮಿತವಾಗದೆ, ಮಕ್ಕಳು ಧೈರ್ಯದಿಂದ ವೇದಿಕೆ ಏರುವುದು, ಸಂತೋಷದಿಂದ ತಮ್ಮನ್ನು ತಾವು ಅಭಿವ್ಯಕ್ತಪಡಿಸುವುದು ಹಾಗೂ ಪ್ರತಿಯೊಬ್ಬ ಮಗುವಿನಲ್ಲಿರುವ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದೇ  ಮುಖ್ಯ ಆಶಯವಾಗಲಿ ಪ್ರಸ್ತುತ ಯುಗದಲ್ಲಿ ಲಿಟಲ್ ರಾಕೆಟ್ಸ್’ ಮಕ್ಕಳ ಉಡುಪು ಬ್ರ್ಯಾಂಡ್  ಹೊಸ ಆಯಾಮ ನೀಡಲಿ ಎಂದು ಶುಭಹಾರೈಸಿದರು.

    ಕಾರ್ಯಕ್ರಮದಲ್ಲಿ ಲಕ್ಷ್ಮೀ ಶೆಣೈ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ತೀರ್ಪುಗಾರರಾಗಿ ವ್ಯೋಮ್ ಡ್ಯಾನ್ಸ್ ಅಕಾಡೆಮಿಯ ಅವಿನಾಶ್, ಮಾಡೆಲ್ ಹಾಗೂ ಇನ್‌ಫ್ಲುಯೆನ್ಸರ್ ಭೂಮಿಕಾ, ಶಿಕ್ಷಕಿ ಹಾಗೂ ಇನ್‌ಫ್ಲುಯೆನ್ಸರ್ ಸಂಧ್ಯಾ ಕಾಮತ್ ಮತ್ತು ಮೇಕಪ್ ಆರ್ಟಿಸ್ಟ್ ಹಾಗೂ ಇನ್‌ಫ್ಲುಯೆನ್ಸರ್ ಶ್ರುತಿ ಸುದೀಪ್ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಜೆನಿಶಾ ನಿರೂಪಿಸಿದರು.

    Click here

    Click here

    Call us

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಪ್ರಜಾ ಸೇವಾ ಕಾರ್ಯಕ್ರಮ ಆರಂಭಗೊಂಡು 2 ತಿಂಗಳಾದರೂ ಸಮಸ್ಯೆ ಬಗೆಹರಿದಿಲ್ಲ: ಶಾಸಕ ಕಿರಣ್ ಕೊಡ್ಗಿ ಅಸಮಾಧಾನ

    23/11/2026

    ಕುಸ್ತಿ ಸ್ಪರ್ಧೆಯಲ್ಲಿ ಕೋಟ ವಿವೇಕ ಪ.ಪೂ. ಕಾಲೇಜಿನ ವಿದ್ಯಾರ್ಥಿ ದೃಶ್ಯ ಆರ್‌ಗೆ ದ್ವಿತೀಯ ಸ್ಥಾನ

    23/11/2026

    ಪಂಚವರ್ಣ ಸಂಘಟನೆಯಿಂದ 325ನೇ ಪರಿಸರಸ್ನೇಹಿ ಅಭಿಯಾನ

    23/11/2026
    Leave A Reply Cancel Reply

    seven − four =

    Call us

    Click Here

    Call us

    Call us

    Call us
    Highest Viewed Recently
    • ಮಕ್ಕಳ ಆತ್ಮವಿಶ್ವಾಸ, ಸೃಜನಶೀಲತೆಗೆ ವೇದಿಕೆಯಾದ ‘ರಾಕೆಟ್ಸ್ ಆನ್ ದಿ ರನ್‌ವೇ’
    • ಪ್ರಜಾ ಸೇವಾ ಕಾರ್ಯಕ್ರಮ ಆರಂಭಗೊಂಡು 2 ತಿಂಗಳಾದರೂ ಸಮಸ್ಯೆ ಬಗೆಹರಿದಿಲ್ಲ: ಶಾಸಕ ಕಿರಣ್ ಕೊಡ್ಗಿ ಅಸಮಾಧಾನ
    • ಕುಸ್ತಿ ಸ್ಪರ್ಧೆಯಲ್ಲಿ ಕೋಟ ವಿವೇಕ ಪ.ಪೂ. ಕಾಲೇಜಿನ ವಿದ್ಯಾರ್ಥಿ ದೃಶ್ಯ ಆರ್‌ಗೆ ದ್ವಿತೀಯ ಸ್ಥಾನ
    • ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ
    • ಪಂಚವರ್ಣ ಸಂಘಟನೆಯಿಂದ 325ನೇ ಪರಿಸರಸ್ನೇಹಿ ಅಭಿಯಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.