ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಕ್ಷೇತ್ರದಿಂದ ಬಡಗುತಿಟ್ಟಿನ ಹೊಸ ಮೇಳವೊಂದು ತಿರುಗಾಟಕ್ಕೆ ಸಿದ್ಧವಾಗಿದ್ದು, ನ.26ರಂದು ಪ್ರಥಮ ಶ್ರೀ ದೇವರ ಸೇವೆಯಾಟ ಕ್ಷೇತ್ರದ ಆವರಣದಲ್ಲಿ ಜರುಗಲಿದೆ.
ತಿರುಗಾಟದ ಮೂಲಕ ಯಕ್ಷಗಾನ ನೂತನವಾಗಿ ತಿರುಗಾಟ ಆರಂಭಿ ಸಲಿರುವ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ಪ್ರೋತ್ಸಾಹಿಸುವಂತೆ ಶ್ರೀ ದೇಗುಲದ ವ್ಯವಸ್ಥಾಪನ ಸಮಿತಿಯಗೌರವಾಧ್ಯಕ್ಷ ರಾಜು ಪೂಜಾರಿ, ಅಧ್ಯಕ್ಷ ನಾಗರಾಜ ಶೆಟ್ಟಿ ಕಾರ್ಯದರ್ಶಿ ಶಿವರಾಮ ಪೂಜಾರಿ, ಅರ್ಚಕರಾದ ಕೃಷ್ಣಮೂರ್ತಿ ನಾವಡ, ಪಾತ್ರಿಗಳಾದ ಅಣ್ಣಪ್ಪ ಪೂಜಾರಿ, ಮೇಳದ ವ್ಯವಸ್ಥಾಪಕ ಗುಂಡುಕಾಂಚನ್, ಸಂಚಾಲಕ ಕಿರಣ್ ಆಚಾರ್ಯ ತಿಳಿಸಿದ್ದಾರೆ.











