ಕುಂದಾಪ್ರ ಡಾಟ್ ಕಾಂ.
ಕುಂದಾಪುರ: ರಾಜ್ಯ ಚುನಾವಣಾ ಆಯೋಗ ಸ್ಥಳೀಯಾಡಳಿತ ಚುನಾವಣೆ ವೇಳಾ ಪಟ್ಟಿ ಪ್ರಕಸಿದ್ದು, ಕುಂದಾಪುರದಲ್ಲಿ ಫೆ.20 ಶನಿವಾರ ಬೆಳಗ್ಗೆ 7 ರಿಂದ ಸಂಜೆ 5ರ ತನಕ ಮತದಾನ ನಡೆಯಲಿದೆ ಎಂದು ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್ ತಿಳಿಸಿದ್ದಾರೆ.
ರಜಾದಿನ ಹೊರತುಪಡಿಸಿ ಫೆ.1 ರಿಂದ ಫೆ.8 ವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ನಾಮಪತ್ರ ಸ್ವೀಕರಿಸಲಾಗುತ್ತದೆ. ಫೆ.9 ನಾಮಪತ್ರ್ರ ಪರಿಶೀಲನೆ ಮಾಡಲಾಗುತ್ತದೆ. ಫೆ.11 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ನಾಮ ಪತ್ರ ಹಿಂದಕ್ಕೆ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. 23 ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಜಿ.ಪಂ ಚುನಾವಣಾಧಿಕಾರಿ ಕಚೇರಿ ವಿವರ:
ಶಿರೂರು, ಬೈಂದೂರು, ಕಂಬದಕೋಣೆ, ತ್ರಾಸಿ, ವಂಡ್ಸೆ, ಕಾವ್ರಾಡಿ, ಕೋಟೇಶ್ವರ, ಬೀಜಾಡಿ, ಸಿದ್ದಾಪುರ ಮತ್ತು ಹಾಲಾಡಿ ಜಿಪಂ ಕ್ಷೇತ್ರಕ್ಕೆ ಸಹಾಯಕ ಆಯುಕ್ತರು ಚುನಾವಣಾಧಿಕಾರಿಯಾಗಿದ್ದು, ಮಿನ ವಿಧಾನ ಸೌಧ ಕಚೇರಿಯಲ್ಲಿ ಕಾರ‍್ಯ ನಿರ್ವಹಿಸಲಿದ್ದಾರೆ.
ತಾ.ಪಂ ಚುನಾವಣಾಧಿಕಾರಿ ಕಚೇರಿ ವಿವರ:
ಶಿರೂರು_1, ಶಿರೂರ_2, ಪಡುವರಿ, ಯಡ್ತರೆ, ಬೈಂದೂರು, ಉಪ್ಪುಂದ, ಬಿಜೂರು, ಕೊಲ್ಲೂರು, ಕಾಲ್ತೋಡು, ಕಂಬದಕೋಣೆ, ಕಿರಿಮಂಜೇಶ್ವರ, ಮರವಂತೆ,ನಾಡಾ ಕ್ಷೇತ್ರಕ್ಕೆ ತಹಸೀಲ್ದಾರ್ ಚುನಾವಣಾ ಅದಿಕಾರಿಯಾಗಿದ್ದು, ಮಿನಿ ವಿಧಾನ ಸೌಧ ತಹಸೀಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಆಲೂರು, ತ್ರಾಸಿ, ಗಂಗೊಳ್ಳಿ, ವಂಡ್ಸೆ, ಕರ್ಕುಂಜೆ, ಹಳ್ಳಿಹೋಳೆ, ಸಿದ್ದಾಪುರ, ಆಜ್ರಿ, ಕಾವ್ರಾಡಿ, ಹೆಮ್ಮಾಡಿ, ತಲ್ಲೂರು, ಶಂಕರನಾರಾಯಣ ಕ್ಷೇತ್ರಕ್ಕೆ ಬೈಂದೂರು ವಿಶೇಷ ತಹಸೀಲ್ದಾರ್ ಚುನಾವಣಾ ಅಧಿಕಾರಿಯಾಗಿದ್ದು, ಮಿನಿ ವಿಧಾನ ಸೌಧ ಕೋರ್ಟ್ ಹಾಲ್ನಲ್ಲ ಕರ್ತವ್ಯ ನಿರ್ವಹಿಸಲಿದ್ದಾರೆ.
ಬಸ್ರೂರು, ಕೋಣಿ, ಕೋಟೇಶ್ವರ, ಹಂಗಳೂರು, ಬೀಜಾಡಿ, ಕುಂಭಾಶಿ, ಬೇಳೂರು, ಕಾಳಾವಾರ, ಮೊಳಹಳ್ಳಿ, ಹಾರ್ದಳ್ಳಿ ಮಂಡಳ್ಳಿ, ಅಮವಾಸೆಬೈಲು, ಬೆಳ್ವೆ ಕ್ಷೇತ್ರಕ್ಕೆ ಸಹಾಯಕ ಕೃಷಿ ನಿರ್ದೇಶಕರು ಚುನಾವಣಾ ಅಧಿಕಾರಿಯಾಗಿದ್ದು, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕುಂದಾಪುರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.