ರಬ್ಬರ್ ಬೆಳೆಗಾರರ ಸಂಘದಿಂದ ಯಡಿಯೂರಪ್ಪ ಅವರಿಗೆ ಮನವಿ

Call us

Call us

Call us

ಕುಂದಾಪುರ: ರಬ್ಬರ್‌ಗೆ ಆಮದು ಸುಂಕ ಏರಿಕೆ ಮಾಡಿ ಬೆಂಬಲ ಬೆಳೆ ನಿಗದಿಪಡಿಸುವಂತೆ ಒತ್ತಾಯಿಸಿ ತಾಲೂಕು ರಬ್ಬರ್ ಬೆಳೆಗಾರರ ಸಂಘ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.

Call us

Click Here

ಕೋಟೇಶ್ವರದ ಯುವ ಮೆರಿಡಿಯನ್ ವಠಾರದಲ್ಲಿ ಬಿ ಎಸ್ ವೈ ಅವರನ್ನು ಭೇಟಿ ಮಾಡಿದ ತಾಲೂಕು ರಬ್ಬರ್ ಬೆಳೆಗಾರರ ನಿಯೋಗ ಮನವಿ ಸಲ್ಲಿಸಿತ್ತು. ಈ ಸಂದರ್ಭ ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಕಳೆದ ೨ ವರ್ಷದ ಹಿಂದಿದ್ದ ಕಿಲೋಗೆ ರೂ.240ರಷ್ಟಿದ್ದ ಧಾರಣೆ ಕುಸಿದಿದ್ದು ರೂ. ೧೦೦ ಕ್ಕಿಂತಲೂ ಕಡಿಮೆ ಆಗಿದೆ. ಇದರಿಂದ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ತಾಲೂಕಿನಲ್ಲಿ 6 ಸಾವಿರ ಬೆಳೆಗಾರರಿದ್ದು ಕಳೆದ 7-8 ವರ್ಷದಿಂದ ರಬ್ಬರ್ ಬೆಳೆ ಧಾರಣೆ ಕುಸಿತದಿಂದಾಗಿ ಬದುಕು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ರಬ್ಬರ್ ಮರಗಳಿಗೆ ರೋಗಭಾದೆ ಒಕ್ಕರಿಸುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರು ಪ್ರತಿ ಎಕರೆಗೆ ರೂ 2.50ಲಕ್ಷ ಸಾಲ ಮಾಡಿ ರಬ್ಬರ್ ಬೆಳೆಸಿದ್ದು ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ರಬ್ಬರ್ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿರುವ ಕೇರಳ ಸರಕಾರ ರೂ. 150 ಬೆಂಬಲ ಬೆಂಬಲ ಬೆಳೆ ನಿಗದಿಪಡಿಸಿದೆ. ಅಲ್ಲದೆ ರಬ್ಬರ್ ಬೆಳೆಗಾರರಿಗೆ ಬಜೆಟ್‌ನಲ್ಲಿ 300 ಕೋಟಿ ಅನುದಾನ ಮೀಸಲಿಟ್ಟಿದೆ. ಕರ್ನಾಟಕದಲ್ಲಿಯೂ ಇದೆ ಮಾದರಿ ಜಾರಿಗೆ ಬರಬೇಕು. ರಬ್ಬರ್ ಆಮದು ನಿಷೇಧಿಸಬೇಕು. ತಪ್ಪಿದ್ದಲ್ಲಿ ಶೇ. 25ರಷ್ಟಿರುವ ಆಮದು ಸುಂಕವನ್ನು ಶೇ. 70ಕ್ಕೆ ಏರಿಕೆ ಮಾಡಬೇಕು. ರಬ್ಬರಿನ ಉತ್ಪಾದನ ವೆಚ್ಚ ಪರಿಗಣಿಸಿ ಕೇಂದ್ರ ಸರಕಾರ ಕನಿಷ್ಠ ಧಾರಣೆ ನಿಗದಿಪಡಿಸಬೇಕು. ಕೃಷಿಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು . ಈ ಹಿಂದೆ ರಬ್ಬರ್ ಬೆಳೆಗಾರರಿಗೆ ಸಂಕಷ್ಟಕ್ಕೆ ಸ್ಪಂಧಿಸಿರುವ ತಾವು ಕೇಂದ್ರ ಹಾಗೂ ರಾಜ್ಯ ಸರಕಾರದ ಗಮನ ಸೆಳೆದು ರಬ್ಬರ್ ಬೆಳೆಗಾರರ ಹಿತಾಸಕ್ತಿ ಕಾಯಬೇಕು ಎಂದು ಅವರು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಸಂಸದ ಬಿ.ಎಸ್ ಯಡಿಯೂರಪ್ಪ ರಬ್ಬರ್ ಬೆಳೆಗಾರರ ಹಿತಕಾಯುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ನಡೆಸಲಾಗುವುದು. ಸಂಬಂಧಿತ ರಬ್ಬರ್ ಬೋರ್ಡ್ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು. ರಬ್ಬರ್ ಬೆಳೆಗಾರ ಸಂಘದ ಪ್ರಮುಖರಾದ ಕೆ.ಬಿ.ಶೆಟ್ಟಿ, ನಾರಾಯಣ ನಾಯಕ್, ಅಲೆಗ್ಸಾಂಡರ್, ಜೈಸನ್, ಮನೋಜ್ ಕುಮಾರ್ , ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Leave a Reply