ಗಂಗೊಳ್ಳಿ: ವಿದ್ಯಾರ್ಥಿ ವೈಭವ-2016 ಉದ್ಘಾಟನೆ

Call us

Call us

Call us

ಗಂಗೊಳ್ಳಿ: ಬಾಲ್ಯದಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ. ನಾವು ಮಾಡುವ ಕಾರ್ಯದಲ್ಲಿ ನಿಸ್ವಾರ್ಥ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸನ್ಮಾನಕ್ಕಾಗಿ ನಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಸಮಾಜಕ್ಕಾಗಿ ಕೆಲಸ ಮಾಡಬೇಕು. ಶಾಲೆಗಳಲ್ಲಿ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳು ನಡೆಯುತ್ತಿದ್ದರೂ ತಾಲೂಕು ಮಟ್ಟದಲ್ಲಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ವಿದ್ಯಾರ್ಥಿ ವೈಭವ ಕಾರ್ಯಕ್ರಮ ಸ್ತುತ್ಯಾರ್ಹವಾದುದು ಎಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಆನಂದ ಸಿ.ಕುಂದರ್ ಹೇಳಿದರು.

Call us

Click Here

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಶ್ರೀ ಸಿಗಂಧೂರೇಶ್ವರಿ ಡಾನ್ಸ್ ಅಕಾಡೆಮಿ ಗಂಗೊಳ್ಳಿ ಹಾಗೂ ರೋಟರಿ ಕ್ಲಬ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ’ವಿದ್ಯಾರ್ಥಿ ವೈಭವ-2016’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿದ್ಯಾರ್ಥಿ ಶ್ರಾವಣ ಜಿ.ಪಿ. ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಉದ್ಯಮಿ ಡಾ.ವಿಜಯಕೃಷ್ಣ ಪಡುಕೋಣೆ ಶುಭ ಹಾರೈಸಿದರು. ಸಿಡಬ್ಲ್ಯುಸಿ ನಮ್ಮ ಭೂಮಿಯ ಕಾರ್ಯಕಾರಿ ನಿರ್ದೇಶಕ ಬಿ.ದಾಮೋದ ಆಚಾರ್ಯ, ಉದ್ಯಮಿಗಳಾದ ನಳಿನ ಕುಮಾರ್ ಶೆಟ್ಟಿ ನಾಗೂರು, ಅಬ್ದುಲ್ ಸತ್ತಾರ್ ಗಂಗೊಳ್ಳಿ, ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಚೀಫ್ ಲೈಬ್ರೇರಿಯನ್ ವನಜಾ ಸುರೇಶ್, ಗುರುಕುಲ ಶಾಲೆಯ ಶಿಕ್ಷಕಿ ಸುಲಕ್ಷಣ ಬಿ., ಕುಂದಾಪುರ ರೋಟರಿ ಕ್ಲಬ್‌ನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಕಾರ್ಯದರ್ಶಿ ಸಂತೋಷ ಕೋಣಿ, ಶ್ರೀ ಸಿಂಗಧೂರೇಶ್ವರಿ ಡಾನ್ಸ್ ಅಕಾಡೆಮಿ ಅಧ್ಯಕ್ಷ ಬಿ.ಗಣೇಶ ಪಡಿಯಾರ್, ಸಂಚಾಲಕ ಗೋಪಾಲ ಚಂದನ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಸತೀಶ ಜಿ. ಸ್ವಾಗತಿಸಿದರು. ಸಲಹೆಗಾರರಾದ ಡಾ.ವೀಣಾ ಕಾರಂತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃಷ್ಣ ಪೂಜಾರಿ ಸನ್ಮಾನಿತರನ್ನು ಪರಿಚಯಿಸಿದರು. ಚಂದನ್ ಉಡುಪಿ ಸನ್ಮಾನ ಪತ್ರ ವಾಚಿಸಿದರು. ನರೇಶ ಭಟ್ ಕೋಟೇಶ್ವರ ಕಾರ್ಯಕ್ರಮ ನಿರೂಪಿಸಿದರು.

Leave a Reply