ಕೋಟ: ಶಿಕ್ಷಣ, ಆರೋಗ್ಯ, ರಕ್ತದಾನದಂತಹ ಕಾರ‍್ಯಕ್ರಮಗಳಿಂದ ಮೊಗವೀರ ಸಂಘಟನೆ ಸಮಾಜಕ್ಕೆ ಮಾದರಿಯಾಗಿದೆ, ರಕ್ತದಾನ ಕಾರ‍್ಯಕ್ರಮಗಳಿಂದ ಉಡುಪಿ ಜಿಲ್ಲೆ ರಕ್ತದಾನಿಗಳ ಜಿಲ್ಲೆ ಎಂದು ನಾಮಕರಣಗೊಂಡಿದೆ. ಸಂಘಟನೆಗಳು ಯಾವುದೇ ಕಾರ‍್ಯಕ್ರಮಗಳನ್ನು ಆಯೋಜಿಸಿದರು, ಅದರಿಂದ ಸಮಾಜಕ್ಕೆ ಒಂದಿಷ್ಟು ಕೊಡುಗೆಗಳು ಸಿಗುವಂತಾಗಬೇಕು ಎಂದು ಗೀತಾನಂದ ಪೌಂಡೇಶನ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು.
ಅವರು ಸಂಜೆ ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿ ಮೊಗವೀರ ಯುವ ಸಂಘಟನೆ ಮತ್ತು ಮಹಿಳಾ ಘಟಕ ಸಾಲಿಗ್ರಾಮದ ದಶಮಾನೋತ್ಸವದ ಅಂಗವಾಗಿ ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಅಂಬಲಪಾಡಿ ಉಡುಪಿ, ಕರಾವಳಿ ಮಹಾಜನ ಸಂಘ (ರಿ.) ಕೋಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಹೊಂಗನಸು 2016 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ಸತೀಶ್ ಮರಕಾಲ ವಹಿಸಿದ್ದರು. ಈ ಹಿಂದೆ ಸಂಘಟನೆಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶೇಖರ್ ಮರಕಾಲ, ಸುರೇಶ ಮರಕಾಲ, ಕೃಷ್ಣಮೂರ್ತಿ ಮರಕಾಲ, ಮಹಾಬಲ ಕಾಂಚನ್, ಶ್ರೀನಿವಾಸ ಅಮೀನ್ ಮತ್ತು ಮಹಿಳಾ ಘಟಕದ ಗಿರಿಜಾ, ಜಯಲಕ್ಷ್ಮಿ ಅವರನ್ನು ಗೌರವಿಸಲಾಯಿತು. ಇದೇ ಕಾರ‍್ಯಕ್ರಮದಲ್ಲಿ ಅನಾರೋಗ್ಯ ಪೀಡಿತರಿಗೆ ಸಹಾಯ ಧನ ವಿತರಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಆನಂದ ಸಿ.ಕುಂದರ್ ಅವರನ್ನು ಸಂಘಟನೆಯ ಮತ್ತು ಸಮಾಜ ಭಾಂಧವರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಸುಧಾಕರ ಕಾಂಚನ್, ಬಿ ಸುಧಾಕರ ಬಂಗೇರ, ಆನಂದ್ ಎಮ್. ಮರಕಾಲ, ಮೊಗವೀರ ಮಹಾಜನ ಸಂಘದ ಕೇಶವ ಕುಂದರ್, ಉದ್ಯಮಿ ರವೀಂದ್ರ ನಾಯಕ್, ಗುಣಕರ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪಿ. ಸಾಧು, ಸದಸ್ಯ ಶ್ರೀನಿವಾಸ ಅಮೀನ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಪಾದ್, ಜಿಲ್ಲಾ ಘಟಕದ ಅಧ್ಯಕ್ಷ ಸದಾನಂದ ಬಳ್ಕೂರು, ಜಿಲ್ಲಾ ಘಟಕದ ಕಾರ್ಯದರ್ಶಿ ಗಣೇಶ್ ಕಾಂಚನ್, ನಿಕಟಪೂರ್ವ ಅಧ್ಯಕ್ಷ ಜಯ ಸಿ ಕೋಟ್ಯಾನ್, ಪರಿವರ್ತನಾ ಪುನರ್ವಸತಿ ಕೇಂದ್ರ ಕೋಟದ ನಿರ್ದೇಶಕ ಡಾ. ಪ್ರಕಾಶ್ ತೋಳಾರ್, ರತ್ನಾ ಜೆ. ರಾಜ್, ಮಹಿಳಾ ಘಟಕದ ಅಧ್ಯಕ್ಷೆ ರೇವತಿರಾಜ್ ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷ ಶೇಖರ್ ಮರಕಾಲ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ‍್ಯಕ್ರಮದ ಬಳಿಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ಮೂಡುಬಿದಿರೆ ಅವರಿಂದ ಸಾಂಸ್ಕ್ರತಿಕ ವೈಭವ ಜರಗಿತು.