ಬೈಂದೂರು: ದೂರು ಪ್ರಾಧಿಕಾರದ ಕುರಿತು ಮಾಹಿತಿ ಶಿಬಿರ

Call us

Call us

Call us

ಬೈಂದೂರು: ಗ್ರಾಮೀಣ ಭಾಗದಲ್ಲಿ ಕಾನೂನು ಶಿಬಿರಗಳ ಮೂಲಕ ನಮ್ಮ ಕರ್ತವ್ಯ, ಹಕ್ಕು ಮತ್ತು ರಕ್ಷಣೆಯ ಕುರಿತು ಮಾಹಿತಿ ಪಡೆಯುವುದು ಅವಶ್ಯಕ. ಕಾನೂನಿನ ಬಗ್ಗೆ ಪ್ರತಿಯೊಬ್ಬರಿಗೂ ಸಾಮಾನ್ಯ ಜ್ಞಾನವಿರಬೇಕು ಎಂದು ಎರಡನೇ ಹೆಚ್ಚುವರಿ ಕಿರಿಯ ವಿಭಾಗದ ಸಿವಿಲ್ ಮತ್ತು ನ್ಯಾಯಿಕ ದಂಡಾಧಿಕಾರಿ ಜೈಬುನ್ನಿಸಾ ಹೇಳಿದರು.

Call us

Click Here

ಯಡ್ತರೆ ಗ್ರಾಪಂ ಸಭಾಂಗಣದಲ್ಲಿ ಬೈಂದೂರು ವೃತ್ತ ವ್ಯಾಪ್ತಿಯಲ್ಲಿ ನ್ಯಾಯಾಂಗ ಹಾಗೂ ಪೋಲಿಸ್ ಇಲಾಖೆ ಸಹಕಾರದಲ್ಲಿ ನಡೆದ ದೂರು ಪ್ರಾಧಿಕಾರದ ಕುರಿತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೆ ಸಮಾನ ನ್ಯಾಯ ನೀಡಬೇಕಾದುದು ನ್ಯಾಯಾಂಗದ ಹೊಣೆ. ಅದಕ್ಕಾಗಿ ಹಲವು ಕಾಯಿದೆಗಳಿವೆ. ಸರಕಾರಗಳು ಮಾಡಿದ ಕಾನೂನುಗಳು ಪುಸ್ತಕದಲ್ಲಿದ್ದರೆ ಸಾಲದು. ಅಗತ್ಯವಿರುವಾಗ ಅನುಷ್ಠಾನಗೊಳ್ಳಬೇಕು. ಅಲ್ಲದೇ ಜನಸಾಮಾನ್ಯರು ಇದನ್ನು ತಿಳಿದುಕೊಳ್ಳಬೇಕು. ಹಾಗಾಗಬೇಕಾದರೆ ಎಲ್ಲರಿಗೆ ಕಾನೂನಿನ ಸಾಮಾನ್ಯ ಜ್ಞಾನ ಅಗತ್ಯ. ಕಾನೂನಿನ ಅರಿವಿಲ್ಲದೇ ಸಮಾಜದಲ್ಲಿ ಕೆಲವರು ತಪ್ಪುಗಳನ್ನು ಮಾಡುತ್ತಾರೆ. ಇದರ ಬಗ್ಗೆ ಇಂತಹ ಶಿಬಿರಗಳ ಮೂಲಕ ಕಾನೂನು ಕ್ರಮಗಳು, ಅಪರಾಧಗಳಿಗೆ ನೀಡುವ ಶಿಕ್ಷೆಯ ಕುರಿತಾದ ತಿಳುವಳಿಕೆ ನೀಡಬೇಕು ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಮಾಹಿತಿ ಇರಬೇಕೆಂಬ ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಇತ್ತೀಚಿಗೆ ಕಾನೂನು ದೂರು ಪ್ರಾಧಿಕಾರ ರಚನೆ ಮಾಡಿದೆ. ತಾಲೂಕು ಮಟ್ಟದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಇನ್ನುಳಿದ ಸಂತ್ರಸ್ಥರಿಗೆ ದೂರು ಪ್ರಾಧಿಕಾರದ ವಿವರಗಳನ್ನು ತಲುಪಿಸುವ ಕೆಲಸವಾಗಬೇಕು. ಆರ್ಥಿಕ ದುರ್ಬಲತೆ ಇರುವವರಿಗೆ ಪ್ರಾಧಿಕಾರದಿಂದ ಉಚಿತ ಅರಿವು-ನೆರವು ನೀಡಲಾಗುತ್ತದೆ. ಪೋಲಿಸರು ದೂರು ದಾಖಲಿಸಿಕೊಳ್ಳಲು ಹಿಂಜರಿದರೆ ನೇರವಾಗಿ ದೂರು ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದರು. ಬೈಂದೂರು ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ವಂದಿಸಿದರು.

Leave a Reply