ಸಿದ್ದಾಪುರ: ಇಲ್ಲಿನ ಪೇಟೆಯ ಹತ್ತು ಸಮಸ್ಥರು ಮತ್ತು ಶಿಷ್ಯವೃಂದದವರು ಭಕ್ತಿಪೂರ್ವಕ ಕುಸುಮಾಂಜಲಿಯನ್ನು ಶ್ರೀಗಳ ಚರಣ ಕಮಲಕ್ಕೆ ಅರ್ಪಿಸಿದರು. ಕಡ್ರಿ ವಿಶ್ವನಾಥ ಶೆಣೈ ಅವರು ಗುಣಗಾನದಲ್ಲಿ ಪಂಡರಪುರದಲ್ಲಿ
ಸ್ವಾಮೀಜಿಯವರು ಪಾಂಡುರಂಗನಿಗೆ ಆರತಿ ಮಾಡುವಾಗ ಗಂಧದ ತಿಲಕ ಪ್ರಸಾದ ರೂಪವಾಗಿ ದೇವರ ಹಣೆಯಿಂದ ಉದುರಿದ್ದು ಎಲ್ಲರನ್ನು ಭಾವ ಪುಳಕಿತವಾಗಿಸಿತು ಎಂದು ತಿಳಿಸಿದರು. ಟಿ.ಜಿ. ಪಾಂಡುರಂಗ ಪೈ ಮಾತನಾಡಿದರು. ಗೋಪಾಲಕೃಷ್ಣ ಕಾಮತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಂತರ ಸ್ವಾಮೀಜಿಯವರ ಭಾವಚಿತ್ರಕ್ಕೆ ಆರತಿ ಮಾಡಿ ಪ್ರಸಾದ ವಿತರಣೆ ಮಾಡಲಾಯಿತು.