ಕುಂದಾಪುರ: ವಾದ್ಯ ಕಲಾವಿದರ ಸಂಘದ ತ್ಯಾಗರಾಜರ ಆರಾಧನಾ ಕಾರ್ಯಕ್ರಮ, ಸನ್ಮಾನ

Call us

Call us

Call us

ಕುಂದಾಪುರ: ತಾಲೂಕು ವಾದ್ಯ ಕಲಾವಿದರ ಸಂಘ (ರಿ.) ಕೋಟೇಶ್ವರ ಇವರ 3ನೇ ವರ್ಷದ ತ್ಯಾಗರಾಜರ ಆರಾಧನಾ ಕಾರ್ಯಕ್ರಮ ಪ್ರತ್ಯೇಕ ವಾದ್ಯ ಸಂಗೀತ ಸೇವೆ ನೀಡುವುದರ ಮೂಲಕವೇ ಜರಗಿತು.

Call us

Click Here

ಪಂಚಗಂಗಾವಳಿಯ ರೈತ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಇದರ ಅಧ್ಯಕ್ಷ ರಾಜು ದೇವಾಡಿಗ ತ್ರಾಸಿ ಉದ್ಘಾಟಿಸಿದರು. ಸಭಾ ಕಾರ್ಯಕ್ರದ ಅಧ್ಯಕ್ಷತೆಯನ್ನು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಧಾನದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಧಾನದ ಆಡಳಿತ ಮೋಕ್ತೆಸರ ಪ್ರಭಾಕರ ಶೆಟ್ಟೆ, ಸಪ್ತಸ್ವರ ವಿವಿದೋದ್ಧೇಶ ಸಹಕಾರಿ ಸಂಘ ತಲ್ಲೂರು ಇದರ ಅಧ್ಯಕ್ಷ ಎಂ.ಸಂಜೀವ ದೇವಾಡಿಗ ತಲ್ಲೂರು, ಸಂಗೀತ ಭಾರತಿ ಟ್ರಸ್ಟ್ ಕುಂದಾಪುರದ ಕಾರ್ಯದರ್ಶಿ ನಾರಾಯಣ ದೇವಾಡಿಗ, ಗಂಗಾ ಪ್ರೋಡೆಕ್ಟ್ ಉದ್ಯಮಿಯಾದ ಚಂದ್ರ ಶೇಖರ ದೇವಾಡಿಗ, ಸುಪ್ರೀಮ್ ಮೋಟಾರ್ಸ್ ಕುಂದಾಪುರದ ರಮೇಶ ದೇವಾಡಿಗ ಕೋಟೇಶ್ವರ ಮತ್ತು ಸಂಘದ ಅಧ್ಯಕ್ಷ ಭಾಸ್ಕರ ದೇವಾಡಿಗ ಕೋಟೇಶ್ವರ ಮೊದಲಾದವರು ಉಪಸ್ಧಿತರಿದ್ದರು.

ಸಂಘದ ಕಾರ್ಯದರ್ಶಿ ರಾಜೇಶ ದೇವಾಡಿಗ ತ್ರಾಸಿ ಲೆಕ್ಕ ಪತ್ರ ಮಂಡಿನೆ ಮಾಡಿದರು. ಸಭೆಯಲ್ಲಿ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ಯುವ ಸಾಹಿತಿ, ರಾಷ್ಟ್ರ ಕವಿ ಕುವೆಂಪು ಕಾವ್ಯ ಪುರಸ್ಕ್ರತರು ಹಾಗೂ ವಿಶ್ವಮಾನ್ಯ ಕನ್ನಡ ಪ್ರಶಸ್ತಿ ವಿಜೇತರಾದ ಜ್ಯೋತಿ ಎಸ್ ದೇವಾಡಿಗ (ಶೆಯದೇವಿಸುತೆ) ಮರವಂತೆ ,ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತೆ ಕುಮಾರಿ ಮೇಘನಾ ಸಾಲಿಗ್ರಾಮ, ವಾದ್ಯ ರಂಗ ಪ್ರಥಮ ಭಾರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ವಿಜೇತ ಎಸ್.ಎಂ.ಗೋಪಾಲ ದೇವಾಡಿಗ ಸೌಕೂರು, ಸ್ಯಾಕ್ಸೋಪೋನ್ ವಾದಕರಾದ ಅಣ್ಣಯ್ಯ ದೇವಾಡಿಗ ನೀಲಾವರ ಮತ್ತು ಶೇಖರ ದೇವಾಡಿಗ ಸಾಲಿಗ್ರಾಮ ಮತ್ತು ವಾದ್ಯ ಕಲಾವಿದರಾದ ಸುಬ್ಬಯ್ಯ ದೇವಾಡಿಗ ಮಾಣಿಕೊಳಲು ಮತ್ತು ಗಣಪ ದೇವಾಡಿಗ ಬ್ರೆಹ್ಮೇರಿ ಅವರನ್ನು ಗುರುತಿಸಿ ಅಭಿನಂದಿಸಲಾಯಿತು.

ಪ್ರಶಸ್ತಿ ಪತ್ರವನ್ನು ವಿಜಯ ದೇವಾಡಿಗ ಕಮಲಶಿಲೆ, ಸಿಶ್ಟಿಲಾ ದೇವಾಡಿಗ, ಮತ್ತು ಮೋನಿಶಾ ದೇವಾಡಿಗ ವಾಚಿಸಿದರು. ಸಂಘದ ಸದಸ್ಯರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ರವಿ ದೇವಾಡಿಗ ಉಪ್ಪಿನಕುದ್ರು ನಿರೂಪಿಸಿ,ಚಂದ್ರಶೇಖರ್ ದೇವಾಡಿಗ ಬಸ್ರೂರು ವಂದಿಸಿದ್ದರು.

Leave a Reply