ಕೊಂಕಣ ಖಾರ್ವಿ ಸಮಾಜ: ಹೊನಲು ಬೆಳಕಿನ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾಟ

Call us

Call us

Call us

ಕುಂದಾಪುರ: ಕೊಂಕಣ ಖಾರ್ವಿ ಸಮಾಜ ಶ್ರಮಜೀವಿಗಳಾಗಿದ್ದು, ತಮ್ಮ ಸ್ನೇಹ ಪರ ಗುಣಗಳಿಂದ ಎಲ್ಲರಿಗೂ ಆತ್ಮೀಯರಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ ಎಂದು ಕೈಗಾರಿಕೋದ್ಯಮಿ ಪ್ರಶಾಂತ್ ತೋಳಾರ್ ಹೇಳಿದರು.

Call us

Click Here

ಅವರು ಕೊಂಕಣ ಖಾರ್ವಿ ಪ್ರಗತಿಪರ ಸಂಘ(ರಿ) ಮದ್ದುಗುಡ್ಡೆ ಇದರ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಸಮಾಜ ಬಾಂಧವರಿಗಾಗಿ ಏರ್ಪಡಿಸಿದ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾಟ ಕೆ.ಕೆ.ಪಿ.ಎಸ್ ಮದ್ದುಗುಡ್ಡೆ ಟ್ರೋಫಿ ಉದ್ಘಾಟಿಸಿ ಮಾತನಾಡಿದರು.

ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾನಸ ಇಂಜಿನಿಯರಿಂಗ್ & ವೆಲ್ಡಿಂಗ್ ವರ್ಕ್ಸ್‌ನ ನಿತ್ಯಾನಂದ ಖಾರ್ವಿ, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮಂಜುನಾಥ್, ಕೆ.ಕೆ.ಫಿಶರೀಸ್‌ನ ಸಂದೀಪ್ ಖಾರ್ವಿ, ಮದ್ದುಗುಡ್ಡೆ ನಾಗ ಜಟ್ಟಿಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ವಸಂತ ಮೇಸ್ತ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಸುರೇಂದ್ರ ಖಾರ್ವಿ, ಸಂಸ್ಥೆಯ ಅಧ್ಯಕ್ಷರಾದ ಸಂಜೀವ ಖಾರ್ವಿ, ಉಪಾಧ್ಯಕ್ಷರಾದ ನಾರಾಯಣ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ೧೬ರ ವಯೋಮಿತಿ ಕರ್ನಾಟಕ ತಂಡದ ಕ್ರಿಕೆಟ್ ಆಟಗಾರ ಆದಿತ್ಯ ಆರ್ ಖಾರ್ವಿ ಹಾಗೂ ಯಕ್ಷಗಾನ ಕಲಾವಿದ ನಾಗರಾಜ ಖಾರ್ವಿ ಕಂಚುಕೋಡು ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಅಶೋಕ ಖಾರ್ವಿ ಸ್ವಾಗತಿಸಿದರು, ಮಾಲಿನಿ ಸತೀಶ್ ಕಾರ್ಯಕ್ರಮ ನಿರೂಪಿಸಿ ಭವಾನಿಶಂಕರ ವಂದಿಸಿದರು.

Leave a Reply