ಉಪ್ಪುಂದದಲ್ಲಿ ಚಿತ್ರ-ಚಿತ್ತಾರ 2016 – ತರಬೇತಿ ಕಮ್ಮಟ

Call us

Call us

Call us

ಬೈಂದೂರು: ಅವಕಾಶ ವಂಚಿತರಾಗುತ್ತಿರುವ ಗ್ರಾಮೀಣ ಭಾಗದ ಮಕ್ಕಳಲ್ಲಿರುವ ಸುಪ್ತಪ್ರತಿಭೆಗಳನ್ನು ಗುರುತಿಸಿ ವಿದ್ಯಾಸಂಸ್ಥೆಗಳು, ಶಿಕ್ಷಕರು, ಪಾಲಕರು ಹಾಗೂ ಸಂಘ-ಸಂಸ್ಥೆಗಳು ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಉಪ್ಪುಂದ ಸಪಪೂ ಕಾಲೇಜಿನ ಎಸ್‌ಡಿಎಂಸಿ ಉಪಾಧ್ಯಕ್ಷ ಮಂಜುನಾಥ ಖಾರ್ವಿ ಹೇಳಿದರು.

Call us

Click Here

ಉಪ್ಪುಂದ ಸಪಪೂ ಕಾಲೇಜು ಹಾಗೂ ಸ್ಥಳೀಯ ಜೆಸಿಐ ಘಟಕ ಜಂಟಿಯಾಗಿ ವಲಯದ ಆಯ್ದ ಪ್ರಾಥಮಿಕ ಶಾಲಾ ಏಳನೇ ತರಗತಿಯ ವಿದ್ಯಾಥಿಗಳಿಗೆ ಆಯೋಜಿಸಿದ ಚಿತ್ರ-ಚಿತ್ತಾರ 2016 ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು. ಕೇವಲ ಅಂಕಗಳಿಕೆ ವಿದ್ಯಾರ್ಥಿಗಳಿಗೆ ಮಾನದಂಡವಾಗಬಾರದು. ಪಾಠದ ಜೊತೆಗೆ ಪಾಠೇತರ ಶಿಕ್ಷಣವೂ ಅಷ್ಟೇ ಮುಖ್ಯ. ನಾಲ್ಕುಗೋಡೆಗಳ ಮಧ್ಯ ಕಲಿಸುವ ಪಾಠದ ಜೊತೆಗೆ ಪರಿಣತಿ ಹೊಂದಿದ ತರಬೇತುದಾರರಿಂದ ವಿವಿಧ ಕಲೆಗಳ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಪಾಠೇತರ ಶಿಕ್ಷಣದ ಅರಿವು ಮೂಡಿಸಬೇಕು. ಇದರಿಂದ ಮಕ್ಕಳು ಕಲಾತ್ಮಕ ಜೀವನಕ್ಕೆ ಒಗ್ಗಿಕೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳು ಕೂಡಾ ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ಸಾಧನೆಯ ದಾರಿ ಕಂಡುಕೊಳ್ಳಬೇಕು ಎಂದ ಸಲಹೆ ನೀಡಿದರು.

ಕಾಲೇಜಿನ ಉಪಪ್ರಾಂಶುಪಾಲೆ ಜಾನಕಿ ಎಂ. ನಾಯ್ಕ್ ಅಧ್ಯಕ್ಷತೆವಹಿಸಿದ್ದರು. ಪ್ರಾಂಶುಪಾಲ ಯು. ಸೀತಾರಾಮ ಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ಜೆಸಿಐ ಅಧ್ಯಕ್ಷ ನರಸಿಂಹ ಹಳಗೇರಿ, ನಿಕಟಪೂರ್ವಾಧ್ಯಕ್ಷ ಸುಬ್ರಹ್ಮಣ್ಯ ಗಾಣಿಗ ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಸ್ವಾಗತಿಸಿ, ವಿಘ್ನೇಶ್ವರ ಕಾರಂತ್ ವಂದಿಸಿದರು. ಅಣ್ಣಪ್ಪ ಶೇರುಗಾರ್ ನಿರೂಪಿಸಿದರು. ನಂತರ ದಿನವಿಡೀ ನಡೆದ ಕಮ್ಮಟದ ತರಬೇತುದಾರರಾಗಿ ಆಗಮಿಸಿದ ಬ್ರಹ್ಮಾವರ ಸಪಪೂ ಕಾಲೇಜು ಉಪನ್ಯಾಸಕ ಸುರೇಂದ್ರ ಶೆಟ್ಟಿ ತೆಕ್ಕೆಟ್ಟೆ (ರಂಗಕಲೆ), ಜೇಸಿ ವಲಯ ತರಬೇತುದಾರ ಪ್ರಭಾಕರ ಶೆಟ್ಟಿ (ಮಾತಿನ ಮಂಟಪ), ಮರವಂತೆ ಸಹಿಪ್ರಾ ಶಾಲಾ ಮುಖ್ಯಶಿಕ್ಷಕ ಸತ್ಯನಾ ಕೊಡೇರಿ (ಮುಖವಾಡ), ಕೊಕ್ಕರ್ಣೆ ಸರಕಾರಿ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ರಾಘವೇಂದ್ರ ಚಾತ್ರಮಕ್ಕಿ (ಮಣ್ಣಿನಾಟ), ಉಡುಪಿ ಚಿತ್ರಕಲಾ ಮಂದಿರ ಮಹಾವಿದ್ಯಾಲಯದ ಪ್ರಾಂಶುಪಾಲ ರಾಜೇಂದ್ರ ತ್ರಾಸಿ (ವಾರ್ಲಿ), ಉಡುಪಿ ವೃತ್ತಿಪರ ಕಲಾವಿದ ಜನಾರ್ದನ ಹಾವಂಜೆ (ಕಸ-ರಸ), ಶಂಕರನಾರಾಯಣ ಮದರ್ ತೆರೆಸಾ ಶಾಲೆಯ ಚಿತ್ರಕಲಾ ಶಿಕ್ಷಕ ರಾಜೇಂದ್ರ ಹಳ್ಳಿಹೊಳೆ (ಗ್ರೀಟಿಂಗ್ಸ್) ಆಸಕ್ತ ಮಕ್ಕಳಿಗೆ ತರಬೇತಿ ನೀಡಿದರು.

News Chitra-Chittara1 News Chitra-Chittara2

Leave a Reply