ಬೈಂದೂರು ಡಿಗ್ರಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ. ವಿದ್ಯಾರ್ಥಿಗಳ ಪ್ರತಿಭಟನೆ

Call us

Call us

Call us

ಬೈಂದೂರು: ನಮ್ಮ ಕಾಲೇಜಿನ 20 ಅತಿಥಿ ಉಪನ್ಯಾಸಕರು ವಿವಿಧ ಕಾರಣಗಳಿಂದ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಖಾಯಂ ಉಪನ್ಯಾಸಕರು ಇರುವುದು ಕೇವಲ ಮೂರು ಜನ ಮಾತ್ರ. ಅಂತಿಮ ಪರೀಕ್ಷೆಗಳು ಹತ್ತಿರ ಬರುತ್ತಿದೆ. ಇದಕ್ಕೆ ತಯಾರಿ ನಡೆಸಬೇಕಾಗಿದೆ. ಆದರೆ ಯಾವ ಪಾಠವೂ ಸರಿಯಾಗಿ ಬೋಧಿಸಲಿಲ್ಲ. ಮಾಡಬೇಕಾಗಿರುವ ಪಾಠಗಳು ಬಹಳ ಬಾಕಿಯಿದೆ. ಪರಿಸ್ಥಿತಿ ಹೀಗಾದರೆ ನಮ್ಮ ಮುಂದಿನ ಭವಿಷ್ಯವೇನು? -ಇದು ಬೈಂದೂರು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಒಕ್ಕೊರಲಿನ ಕೂಗು.

Call us

Click Here

ಸುಮಾರು 900 ವಿದ್ಯಾರ್ಥಿಗಳಿರುವ ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಒಂದು ತಿಂಗಳಿಂದ 20 ಜನ ಅತಿಥಿ ಉಪನ್ಯಾಸಕರು ಪಾಠ ಮಾಡದೇ ತರಗತಿಗಳಿಗೆ ಗೈರಾಗುತ್ತಿರುವುದು ವಿದ್ಯಾರ್ಥಿಗಳನ್ನು ಕೆರಳಿಸಿದೆ. ಈ ಕುರಿತು ಗುರುವಾರ ಎಲ್ಲಾ ವಿದ್ಯಾರ್ಥಿಗಳು ಒಂದಾಗಿ ಇದ್ದಕಿದ್ದಂತೆ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ವಿಶೇಷ ತಹಶೀಲ್ದಾರರ ಕಚೇರಿಗೆ ತೆರಳಿ ಸಹಾಯಕ ತಹಶೀಲ್ದಾರ್ ಶಂಕರ್ ಶೆಟ್ಟಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮುಷ್ಕರ ಅಂತ್ಯಗೊಳಿಸಿದರು. ನಮಗೆ ಉಪನ್ಯಾಸಕರನ್ನು ತಕ್ಷಣ ನೇಮಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

Leave a Reply