ಪ್ರೇರಣಾ ತೃತೀಯ ವಾರ್ಷಿಕ ಸಡಗರ ಸಂಪನ್ನ

Call us

Call us

Call us

ಕುಂದಾಪುರ: ದೇಶದ ಭವಿಷ್ಯ ಯುವಶಕ್ತಿಯನ್ನು ಅವಲಂಬಿಸಿದೆ. ಇಂದಿನ ಯುವಶಕ್ತಿ ಆ ನಿಟ್ಟಿನಲ್ಲಿ ಒಂದಾಗಬೇಕಿದೆ. ಇಂಥಹ ಅಗತ್ಯತೆಯಲ್ಲಿ ಯುವಕರೆಲ್ಲರನ್ನು ಒಂದುಗೂಡಿಸಿದ ಪ್ರೇರಣಾ ಯುವ ವೇದಿಕೆ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿದೆ ಎಂದು ಭಾರತ ಸರ್ಕಾರ ಅಂಕಿ ಅಂಶ ಇಲಾಖೆಯ ಸಾಂಖ್ಯಕ ಅಧಿಕಾರಿ ತಾರಾನಾಥ ಹೊಳ್ಳ ಹೇಳಿದರು.

Call us

Click Here

ಪ್ರೇರಣಾ ಯುವ ವೇದಿಕೆಯ ತೃತೀಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಲ್ಲೂರು ಮಾಜಿ ಧರ್ಮದರ್ಶಿ ಬಿ.ಎಮ್.ಸುಕುಮಾರ್ ಶೆಟ್ಟಿ ಮಾತನಾಡಿ ಆಡಂಬರರಹಿತ ,ದುಂದುವೆಚ್ಚಲ್ಲಿದೆ, ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುವ ಪ್ರೇರಣಾ ವೇದಿಕೆಯ ಶ್ಲಾಘನೀಯ ಎಂದರು. ತದನಂತರ ಗ್ರಾಮೀಣ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ನೀಡಲಾಯಿತು, ಹಿರಿಯ ಕೃಷಿಕರಾದ ರಾಮಯ್ಯ ಶೆಟ್ಟಿ ನೈಕಂಬ್ಳಿ, ಹಿರಿಯ ಯಕ್ಷಗಾನ ಕಲಾವಿದರಾದ ನಾರಾಯಣ ದೇವಾಡಿಗ ಮಾರಣಕಟ್ಟೆ, ರಾಜ್ಯಮಟ್ಟದ ಸ್ಥಳೀಯ ಕ್ರೀಡಾಪಟು ಚೇತನಾ ಎಂ ಇವರಿಗೆ ಪ್ರೇರಣಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರೇರಣಾ ಯುವ ವೇದಿಕೆಯ ಅಧ್ಯಕ್ಷ ಚಂದ್ರ ಶೆಟ್ಟಿ ನೈಕಂಬ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಡಿ.ವೈ.ಎಸ್.ಪಿ ಮಂಜುನಾಥ ಶೆಟ್ಟಿ, ಉಡುಪಿಯ ಯುವ ಚಿಂತಕ ಶ್ರೀಕಾಂತ ಶೆಟ್ಟಿ, ಹೊಸೂರು ಮೂಕಾಂಬಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಂದ್ರ ಶೆಟ್ಟಿ, ಗಣೇಶೋತ್ಸವ ಸಮಿತಿ ಮಾರಣಕಟ್ಟೆ ಚಿತ್ತೂರು ಅಧ್ಯಕ್ಷ ರವಿರಾಜ್ ಶೆಟ್ಟಿ, ವೇದಿಕೆಯ ಗೌರವಾಧ್ಯಕ್ಷರಾದ ರಾಮಚಂದ್ರ ಮಂಜರು, ವೇದಿಕೆಯ ಕಾನೂನು ಸಲಹೆಗಾರರಾದ ಕುಸುಮಾಕರ ಶೆಟ್ಟಿ ಕೆರೆಕೊಡ್ಲು, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ ಮಡಿವಾಳ ನೈಕಂಬ್ಳಿ ಯ ಸಿ.ರಾಜೀವ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಪ್ರಾಸ್ತಾವಿಕ ಮಾತುಗಳಾಡಿದ್ದು, ಸಂಘಟನಾ ಕಾರ್ಯದರ್ಶಿ ದಿನೇಶ ಶೆಟ್ಟಿ ಸ್ವಾಗತಿಸಿದರು. ಉಪಾದ್ಯಕ್ಷರಾದ ನಾಗೇಂದ್ರ ಆಚಾರ್ಯ ಧನ್ಯವಾದಗೈದರು, ಉದಯ ಆಚಾರ್ಯ ನೈಕಂಬ್ಳಿ ನಿರೂಪಿಸಿದರು.

Leave a Reply