ಬೈಂದೂರು: ಗೋವಾ ರಾಜ್ಯದ ಪಿಲಾರ್‌ನ ಫಾ. ಅಗ್ನೆಲ್ ಕಾಲೇಜಿನಲ್ಲಿ ಫೆ ೧೧ರಂದು ನಡೆಯುವ ’ಸಾಂಪ್ರದಾಯಿಕ ಮನೆಮದ್ದು ಮತ್ತು ಆಧುನಿಕ ವೈದ್ಯಕೀಯ ಉಪಕ್ರಮಗಳು’ ಕುರಿತಾದ ಒಂದು ದಿನದ ವಿಚಾರ ಗೋಷ್ಠಿಯಲ್ಲಿ ವಿಚಾರ ಮಂಡಿಸಲು ಡಾ. ರೂಪಶ್ರೀ ಮರವಂತೆ ಆಮಂತ್ರಿತರಾಗಿದ್ದಾರೆ. ಗೋಷ್ಠಿಯಲ್ಲಿ ಅವರು ’ಗೃಹೋಪಯೋಗಿ ಸಸ್ಯಗಳಿಂದ ಆಯುರ್ವೇದ ಔಷಧಿ ತಯಾರಿ’ ಕುರಿತಾದ ಪೋಪ್ ದ್ವಿತೀಯ ಜಾನ್ ಪಾಲ್ ಸ್ಮಾರಕ ಉಪನ್ಯಾಸ ನೀಡುವರು ಮತ್ತು ’ಆಧುನಿಕ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಅರಿವಿನ ಸುಲಭ, ಸರಳ ಸಮೂಹ ಸಂವಹನ ವಿಧಾನ’ ಕುರಿತಾದ ಗುಂಪು ಚರ್ಚೆಯಲ್ಲಿ ಭಾಗವಹಿಸುವರು.
ಆಯುರ್ವೇದ ಪದವೀಧರೆಯಾಗಿರುವ ಡಾ. ರೂಪಶ್ರೀ ಈ ಹಿಂದೆ ಹಾಸನದ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದು, ಈಗ ಮರವಂತೆಯಲ್ಲಿ ಆಯುರ್ವೇದ ಚಿಕಿತ್ಸಾಲಯ ನಡೆಸುತ್ತಿದ್ದಾರೆ.