ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು: ಉಡುಪಿ ಜಿಲ್ಲೆಯ ನೈಸರ್ಗಿಕ ಸೊಬಗಿನ ತವರೂರಾದ ಬೈಂದೂರು ತನ್ನದೇ ಆದ ಕಾರಣಗಳಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಥಾನ ಪಡೆದಿದೆ. ಶಿಕ್ಷಣ, ಕಲೆ, ಸಾಹಿತ್ಯ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡ ಹೆಗ್ಗಳಿಕೆ ಇಲ್ಲಿನದ್ದು. ಬಿಂದುಋಷಿ ಎಂಬ ಮುನಿಯು ತಪಸ್ಸನ್ನಾಚರಿಸಿದ ಕಾರಣದಿಂದಾಗಿ ಬಿಂದುಪುರ ಎಂಬ ಹೆಸರು ಬಂದಿತು. ಕ್ರಮೇಣ ಅದು ಬೈದೂರು ಆಗಿ ನಂತರ ಬೈಂದೂರು ಎಂದು ಕರೆಯಲ್ಪಟ್ಟಿತು ಎಂಬುದು ಐತಿಹ್ಯ. ಊರಿನ ಹಿಂದಿನ ಐತಿಹ್ಯ.
ಪಶ್ಚಿಮದ ಅರಬ್ಬಿ ಸಮುದ್ರ, ಪೂರ್ವದ ಪಶ್ಚಿಮ ಘಟ್ಟಗಳ ಸಾಲು ಬೈಂದೂರಿನ ನೈಸರ್ಗಿಕ ಸೌಂದರ್ಯವನ್ನು ಇಮ್ಮುಡಿಗೊಳಿಸಿದ್ದರೇ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಬೈಂದೂರು ಶ್ರೀ ಸೇನೇಶ್ವರ ಸೇರಿದಂತೆ ಹತ್ತಾರು ದೇವಾಲಯಗಳು, ಜಾಮೀಯಾ ಮಸೀದಿ, ಹೋಲಿ ಕ್ರಾಸ್ ಚಚ್ ಇವೇ ಮುಂತಾದವುಗಳು ಬೈಂದೂರಿನ ಧಾರ್ಮಿಕ ಶಕ್ತಿಕೇಂದ್ರಗಳಾಗಿ ಭಕ್ತರನ್ನು ಕರುಣಿಸಿವೆ. ಬೈಂದೂರು ನಗರವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು; ಮೂಕಾಂಬಿಕಾ ರೋಡ್ ಬೈಂದೂರು, ಶಿರೂರು, ಬಿಜೂರು ರೈಲ್ವೇ ನಿಲ್ದಾಣಗಳು; ಕೊಡೇರಿ, ಅಳ್ವೆಕೋಡಿ ಕಿರುಬಂದರು ನಗರಕ್ಕೆ ರಾಷ್ಟ್ರವ್ಯಾಪಿ ಸದೃಢ ಸಂಪರ್ಕವನ್ನು ಕಲ್ಪಿಸಿದ್ದರೇ, ಲಾವಣ್ಯ, ಸುರಭಿ, ಯುನೆಸ್ಕೊ, ರೋಟರಿ ಬೈಂದೂರು, ಜೆಸಿಐ, ಮುಂತಾದವುಗಳು ಇಲ್ಲಿನ ಕಲಾ ಸಾಂಸ್ಕೃತಿಕ ಸಿರಿವಂತಿಕೆಯನ್ನು ಎತ್ತಿ ಹಿಡಿದಿವೆ. ಕುಂದಾಪ್ರ ಡಾಟ್ ಕಾಂ ವರದಿ ಒತ್ತಿನಣೆ ಪ್ರದೇಶದಲ್ಲಿರುವ ಮ್ಯಾಂಗನೀಸ್ ನಿಕ್ಷೇಪಗಳು ರಾಷ್ಟ್ರೀಯ ಸಂಪತ್ತಿನ ಸೂಚಕವಾದರೆ, ಮರವಂತೆ, ಉಪ್ಪುಂದ, ಸೋಮೇಶ್ವರ, ಅಳ್ವೆಗದ್ದೆ ಕಡಲತೀರ, ಒತ್ತಿನಣೆ ಕ್ಷೀತಿಜ ನೇಸರಧಾಮ, ಕೂಸಳ್ಳಿ ಜಲಪಾತ, ಆನೆಝರಿ ಸೇರಿದಂತೆ ಬೈಂದೂರು ಸುತ್ತಲಿನ ಹತ್ತು ಹಲವು ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
[quote font_size=”16″ bgcolor=”#ffffff” bcolor=”#dd9933″ arrow=”yes” align=”right”]
ಕುತೂಹಲದ ಕ್ಷೇತ್ರ:
ಬೈಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ರಾಜು ಪೂಜಾರಿ ಸ್ವರ್ಧಿಸುತ್ತಿದ್ದರೇ, ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಶಂಕರ ಪೂಜಾರಿ ಕಣದಲ್ಲಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿರುವ ರಾಜು ಪೂಜಾರಿ ಅವರಿಗೆ ಈ ಹಿಂದೆ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಪರಾವಭಗೊಂಡಿದ್ದ ಶಂಕರ ಪೂಜಾರಿ ಅವರು ಪ್ರಬಲ ಸ್ವರ್ಧೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಿನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಕ್ಷೇತ್ರದಲ್ಲಿ ಅದೃಷ್ಟ ಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂದು ಕಾದು ನೋಡಬೇಕಿದೆ. [/quote]
ಯಡ್ತರೆ ಮಂಜಯ್ಯ ಶೆಟ್ಟಿಯಂತಹ ಧೀಮಂತ ರಾಜಕಾರಣಿ ಮೊದಲ ಬಾರಿಗೆ ವಿಧಾನ ಸಭೆಯನ್ನು, ಮಹಾಬಲ ಶೆಟ್ಟಿಯಂತಹ ರಾಜಕಾರಣಿ ಬೈಂದೂರು ಪುರಸಭೆಯನ್ನು ಪ್ರವೇಶಿಸಿ ಇಲ್ಲಿನ ಭಾಗದ ಜನರ ರಾಜಕೀಯ ಪ್ರತಿನಿಧಿಯಾಗಿ ಹೆಸರು ಮಾಡಿದ್ದರೇ, ಕವಿ ಅಡಿಗರು, ಅವರ ಸಾಲಿನಲ್ಲಿ ಹತ್ತಾರು ಹಿರಿಕಿರಿಯ ಸಾಹಿತಿಗಳು, ಚಿತ್ರನಟರು, ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಕಲಾವಿದರು, ಸಂಘಟಕರು, ವ್ಯಾಪಾರಿಗಳು ಬೈಂದೂರಿನ ಕೀರ್ತಿಯನ್ನು ಜಗದಗಲ ಪಸರಿಸುವಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ
ತನ್ನದೇ ಆದ ವೈಶಿಷ್ಟ್ಯತೆಗಳಿಂದ ಗುರುತಿಸಿಕೊಂಡಿರುವ ಬೈಂದೂರು ಅಭಿವೃದ್ಧಿಯ ದೃಷ್ಟಿಯಲ್ಲಿ ಸಾಕಷ್ಟು ಹಿಂದೆ ಬಿದ್ದಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಕ್ಷೇತ್ರದ ಅಭಿವೃದ್ಧಿಗೆ ವಿಪುಲವಾದ ಅವಕಾಶಗಳಿದ್ದರೂ ಅದು ನಿರೀಕ್ಷಿತ ಮಟ್ಟದಲ್ಲಿ ಸದ್ಬಳಕೆಗೊಂಡಿಲ್ಲ. ಇದನ್ನು ಗಮನದಲ್ಲಿರಿಸಿಕೊಂಡು ರಾಮಕೃಷ್ಣ ಹೆಗಡೆಯವರ ಕಾಲದಿಂದಲೂ ಬೈಂದೂರು ತಾಲೂಕಾಗಬೇಕೆಂಬುದನ್ನು ಅನೇಕ ವರದಿಗಳು ಶಿಫಾರಸ್ಸು ಮಾಡಿದ್ದರೂ, ಹೋರಾಟ ನಡೆಸುತ್ತಿದ್ದರೂ ಅದು ಮೂರು ದಶಕಗಳೇ ಕಳೆದರೂ ಈಡೇರಿಲ್ಲ. ಅಂದಿನಿಂದ ಈ ತನಕ ಬೈಂದೂರು ತಾಲೂಕಾಗಬೇಕೆಂದು ಹೋರಾಟಗಳು ನಡೆಯುತ್ತಲೇ ಇದೆ. ಪ್ರವಾಸೋದ್ಯಮ ದೃಷ್ಠಿಯಿಂದಲೂ ವಿಪುಲವಾದ ಅವಕಾಶ ಹೊಂದಿರುವ ಬೈಂದೂರಿನಲ್ಲಿ ನಿಸರ್ಗದತ್ತವಾಗಿರುವ ರಾಷ್ಟ್ರವ್ಯಾಪಿ ಗುರುತಿಸಬಹುದಾದ ಪ್ರವಾಸಿ ತಾಣಗಳಿವೆಯಾದರೂ, ಅದು ಮೂಲಭೂತ ಸೌಕರ್ಯ ಹಾಗೂ ಮಾಹಿತಿ ಕೊರತೆಯಿಂದ ಹಿಂದುಳಿದಿದೆ. ಕುಂದಾಪ್ರ ಡಾಟ್ ಕಾಂ ವರದಿ
ಸಮಸ್ಯೆ-ಬೇಡಿಕೆ:
* ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ತಲೆದೂರುವುದು ಸಾಮಾನ್ಯವಾಗಿದ್ದು ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲಾಗಲಿಲ್ಲ.
* ಕೆಲವೆಡೆ ರಸ್ತೆ, ಬೀದಿದೀಪ, ಕಿಂಡಿಅಣೆಕಟ್ಟು ಅಭಿವೃಧ್ಧಿಗಳೊಳ್ಳಬೇಕಿದೆ.
* ಹಲವು ವರ್ಷಗಳಿಂದಲೂ ಬೇಡಿಕೆಯಲ್ಲಿರುವ ಬೈಂದೂರು ತಾಲೂಕು ಕನಸು ನನಸಾಗಬೇಕಿದೆ. ಮತ್ತು ಬೈಂದೂರು ಪಟ್ಟಣವೇ ತಾಲೂಕಾಗಬೇಕಿದೆ.
* ಕುಮ್ಕಿ ಭೂಮಿ ಹಕ್ಕು, ಕಸ್ತೂರಿ ರಂಗನ್ ವರದಿಯ ಗೊಂದಲ ನಿವಾರಣೆಯಾಗಬೇಕಿದೆ.
ಚುನಾವಣಾ ಕ್ಷೇತ್ರಗಳು
ಯಡ್ತರೆ,, ಬೈಂದೂರು, ಕೊಲ್ಲೂರು, ಕಾಲ್ತೋಡು, ಗೋಳಿಹೊಳೆ, ಜಡ್ಕಲ್ ಮುದೂರು
ಕಾಂಗ್ರೆಸ್ ಬೆಂಬಲಿತ ಪಂಚಾಯತ್: ಬೈಂದೂರು ಯಡ್ತರೆ, ಕಾಲ್ತೋಡು, ಕೊಲ್ಲೂರು
ಬಿಜೆಪಿ ಬೆಂಬಲಿತ ಪಂಚಾಯತ್: ಗೋಳಿಹೊಳೆ, ಜಡ್ಕಲ್, ಮುದೂರು