ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತಾಲೂಕಿನಲ್ಲಿ ಒಟ್ಟು 10 ಜಿಪಂ ಹಾಗೂ 37 ತಾಪಂ ಕ್ಷೇತ್ರಗಳಿಗೆ ೩೫೬ ಮತಗಟ್ಟೆಗಳಲ್ಲಿ ನಡೆದ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ, ಮತಯಂತ್ರದ ಕೆಟ್ಟದ್ದು ಹಾಗೂ ಸಣ್ಣಪುಟ್ಟ ಸಂಘರ್ಷಗಳನ್ನು ಹೊರತುಪಡಿಸಿದರೇ ಮತ್ತೆಲ್ಲೆಡೆ ಸಸೂತ್ರವಾದ ಮತದಾನ ನಡೆದಿದೆ.
ಜಡ್ಡಿನಗದ್ದೆಯಲ್ಲಿ ಚುನಾವಣೆ ಬಹಿಷ್ಕಾರ ಬ್ಯಾನರ್ ತೆಗೆದಿದ್ದ ರಿಂದ ಉದ್ವಿಘ್ನ ಸ್ಥಿತಿ, ನಕ್ಸಲ್ ಏರಿಯದಾಲ್ಲಿ ಚುರುಕು ಮತದಾನ, ಅತೀ ಸೂಕ್ಷ್ಮ ಮತ ಕೇಂದ್ರಗಳಲ್ಲಿ ಸರ್ಪಗಾವಲನಲ್ಲಿ ನಡೆದ ಮತದಾನ, ಕುಂದಾಪುರ ಹಂಗಳೂರು ಮತಘಟ್ಟೆ ಬಳಿ ಸಂಜೆ ಹೊತ್ತಿಗೆ ಮಾತಿನ ಚಕಮಕಿ ಲಾಠಿ ಚಾರ್ಜ್, ಉಪ್ಪುಂದದಲ್ಲಿ ಮಾತಿನ ಚಕಮಕಿ ನಡೆದಿದೆ. ಸ್ಥಳಕ್ಕೆ ಡಿಎಸ್ಪಿ ಮಂಜುನಾಥ ಶೆಟ್ಟಿ ಭೇಟಿ ನೀಡಿ ವಾತಾವರಣ ತಿಳಿ ಮಾಡಿದ್ದು, ಸ್ಥಳಕ್ಕೆ ರಿಸರ್ವ್ ಪೊಲೀಸ್ ಪಡೆ ಕರೆಸಲಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ
ಬೆಳಗ್ಗೆ ಗ್ರಾಮೀಣ ಭಾಗದಲ್ಲಿ ಮತದಾನ ಚುರುಕಾಗಿದ್ದರೆ, ನಗರ ಪಟ್ಟಣ ಬಳಿ ಮತದಾನ ನೀರಸವಾಗಿ ಆರಂಭವಾಯಿತು. ಹಕ್ಲಾಡಿ ಗ್ರಾಪಂನಲ್ಲಿ ಬೆಳಗ್ಗೆ ಸರತಿ ಸಾಲು ಕಂಡುಬಂದರೆ, ವಯೋವೃದ್ಧರೊಬ್ಬರು ಸಂಬಂಧಿಗಳ ಸಹಕಾರದಲ್ಲಿ ಮತದಾನ ಮಾಡುವುದು ಕಂಡುಬಂತು. ಮತಘಟ್ಟೆ ಕೇಂದ್ರದ ಬಳಿ ಸರತಿ ಸಾಲಿಲ್ಲಿದಿದ್ದರೂ, ಮತ ಕೇಂದ್ರದ ಎದುರು ಕೌಂಟರ್‌ನಲ್ಲಿ ಜನ ದಟ್ಟಣೆಯಿತ್ತು. ಕೆಲವು ಕಡೆ ಎರಡೂ ಪಕ್ಷದವರೂ ಶಾಂತ ಚಿತ್ತದಿಂದ ಹರಟೆಯಲ್ಲಿ ಮಗ್ನವಾದ ದೃಶ್ಯವೂ ಕಂಡು ಬಂತು. ಕುಂದಾಪ್ರ ಡಾಟ್ ಕಾಂ ಸುದ್ದಿ
ನಕ್ಸಲೈಟ್ ಪ್ರದೇಶದಲ್ಲಿ ಜನ ನಿರ್ಭೀತಿಯಿಂದ ಮತದಾನ ಮಾಡಿದ್ದು, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಕೇಂದ್ರದಲ್ಲಿ ಚುರುಕಿನ ಮತದಾನ ನಡೆಯಿತು. ಒಟ್ಟಾರೆ ಸಣ್ಣ ಪುಟ್ಟ ಅಹಿತಕರ ಘಟನೆ ಬಿಟ್ಟರೆ ಕುಂದಾಪುರದಲ್ಲಿ ಶಾಂತ ಮತದಾನ ನಡೆದಿದೆ