ಗಂಗೊಳ್ಳಿ : ದೇವರ ಪ್ರೀತಿಗೆ ಪಾತ್ರರಾಗ ಬೇಕಾದರೆ ನಿಸ್ವಾರ್ಥ ಮನೋಧರ್ಮದಿಂದ ಸೇವೆಯಲ್ಲಿ ತೊಡಗುವುದು ಅಗತ್ಯ ಎಂದು ಗಂಗೊಳ್ಳಿಯ ಸಮಾಜ ಸೇವಕಿ ಅನಿತಾ ಶೇಟ್ ಹೇಳಿದರು.
ಅವರು ಗಂಗೊಳ್ಳಿ ಗ್ರಾಮದ ಬಾವಿಕಟ್ಟೆಯ ಮೇಲ್ ಗಂಗೊಳ್ಳಿ ಬಸವೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಓಂ ಶ್ರೀ ಮಾತೃ ಮಂಡಳಿಯ ಆಶ್ರಯದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಹಿರಿಯ ಚೇತನ ಮಾತೃಶ್ರೀ ದಿ. ರತ್ನಮ ಹೆಗ್ಗಡೆಯವರ ಪುಣ್ಯಸ್ಮೃತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ, ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಇಂದು ಗ್ರಾಮೀಣ ಮಹಿಳೆಯರ ಪಾಲಿಗೆ ವರದಾನವಾಗಿದೆ. ಜಿನೈಕರಾದ ದಿ. ರತ್ನಮ್ಮ ಹೆಗ್ಗಡಯವರ ದೂರದೃಷ್ಟಿತ್ವವೇ ಅದಕ್ಕೆ ಕಾರಣ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಚೆಂದು, ಸುಶೀಲ, ಮಾತೃ ಮಂಡಳಿಯ ಅಧ್ಯಕ್ಷೆ ಭೂದೇವಿ, ಪದ್ಮಾವತಿ ಮಾತನಾಡಿದರು. ಶಾಂತಾ, ಸುಶೀಲ ಮೊದಲಾದವರು ಉಪಸ್ಥಿತರಿದ್ದರು. ಸರಸ್ವತಿ ಸ್ವಾಗತಿಸಿದರು, ಸುನೀತಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.