ಕುಂದಾಪುರ: ಕೋಟೇಶ್ವರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ಜಿಎಸ್‌ಬಿ ಸಮಾಜ ಭಾಂದವರಿಗೆ ನಡೆದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಕೋಟಾ ಜಿಎಸ್‌ಬಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.ದ್ವಿತೀಯ ಸ್ಥಾನವನ್ನು ಕೊಪ್ಪದ ನಾಯಕ್ ಬ್ರದರ್ಸ್ ತಂಡ ತಮ್ಮದಾಗಿಸಿಕೊಂಡರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸುರೇಂದ್ರ ಪೈ, ಉತ್ತಮ ದಾಂಡಿಗನಾಗಿ ರವೀಂದ್ರ,ಉತ್ತಮ ಎಸೆತಗಾನಾಗಿ ಗಿರೀಶ ಕೋಟಾ ಅವರು ಪಡೆದುಕೊಂಡರು.
ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀಧರ ಕಾಮತ್, ಆಡಳಿತ ಮೊಕ್ತೇಸರರು, ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನ, ಮಾತನಾಡುತ್ತಾ ಈ ತರಹದ ಪಂದ್ಯಾಟಗಳಿಂದ ಸಮಾಜ ಭಾಂದವರು ಒಟ್ಟಾಗಲು ಸಾಧ್ಯ. ಇದರಿಂದ ಪರಸ್ಪರ ಭಾಂದವ್ಯ ಹೆಚ್ಚುತ್ತದೆ.ಯುವಕರು ಸೇರಿ ನಡೆಸುವ ಈ ಪಂದ್ಯಾಟ ಮುಂದೆಯು ಕ್ರಿಕೆಟ್ ಅಲ್ಲದೇ ಬೇರೆ ರೀತಿಯ ಕ್ರೀಡೆಗಳು ಜರಗಲಿ ಎಂದು ಶುಭ ಹಾರೈಸಿದರು.
ಹಿರಿಯ ಉದ್ಯಮಿಗಳಾದ ದಿನೇಶ ಕಾಮತ್, ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನ ಮೊಕ್ತೇಸರರಾದ ವಿಠ್ಠಲದಾಸ ಭಟ್, ಗಣೇಶ ಕಿಣಿ, ಉದ್ಯಮಿಗಳು ಬೆಳ್ವೆ, ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷ ಶಂಕರ ಕಾಮತ್, ಕೋಟೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಉದಯ ನಾಯಕ್, ಶ್ರೀ ಮಹಾದೇವಿ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಮೇಶ ಪೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಜೇಶ ಪ್ರಭು ಮತ್ತು ವಿಘ್ನೇಶ ಭಟ್ ನಿರೂಪಿಸಿದರು. ಸತೀಶ ಕಾಮತ್ ವಂದಿಸಿದರು