ಯಾವ ಶಕ್ತಿಗೂ ಹಿಂದೂಗಳನ್ನು ಹಿಮ್ಮೆಟ್ಟಿಸಲಾಗದು. ಹಿಂದೂ ಸಮಾಜ ಸಂಘಟಿತವಾಗಿದೆ: ಗೋಪಾಲಜಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಜಗತ್ತಿಗೆ ಸಂಸ್ಕೃತಿ, ಶಾಂತಿ-ಸೌಹಾರ್ದತೆಯ ನೀತಿ ಅರುಹಿದ ಹಿಂದೂಗಳ ಮೇಲೆ ನಿರಂತರವಾಗಿ ಆಕ್ರಮಣವಾಗುತ್ತಲೇ ಬಂದಿದೆ. ಇಲ್ಲಿಯವರೆಗೂ ಸಹನಶೀಲರೇ ಆಗಿದ್ದ ಹಿಂದೂಗಳು ಇನ್ನು ಸಮಾಜದ ಮೇಲಿನ ದುಷ್ಕೃತ್ಯವನ್ನು ಸಹಿಸೋಲ್ಲ. ಗ್ರಾಮ ಗ್ರಾಮಗಳಲ್ಲಿಯೂ ಹಿಂದೂ ಯುವಕರು ಜಾಗೃತರಾಗಿದ್ದಾರೆ. ಹಿಂದೂ ಯುವಕರನ್ನು ಕೆಣಕಿದವರನ್ನು ಮನೆಗೆ ಕಳುಹಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲಜಿ ಹೇಳಿದರು.

Call us

Click Here

ಭಾನುವಾರ ಮಧ್ಯಾಹ್ನ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ತೆಕ್ಕಟ್ಟೆ ಘಟಕದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿರಾಟ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣದಲ್ಲಿ ಅವರ ವಾಕ್ಸಮರಕ್ಕಿಳಿದರು. ಇಸ್ಲಾಂ ಧರ್ಮದ ಮತಾಂಧ ಶಕ್ತಿಗಳು ಇಂದಿಗೂ ಗೋಹತ್ಯೆ, ಲವ್ ಜಿಹಾದ್ ನಂತಹ ಸಮಾಜ ಘಾತುಕ ಶಕ್ತಿಗಳನ್ನು ನಿರಾತಂಕವಾಗಿ ಮುಂದವರಿಸಿಕೊಂಡು ಬರುತ್ತಿವೆ. ಬುದ್ದಿವಂತರನ್ನು ವಿಚಾರವಾದಿಗಳನ್ನಾಗಿ ತಯಾರಿಸಿ ಹಿಂದೂ ಧರ್ಮಕ್ಕೆ ಅಪಮಾನವೆಸಗುವ ಕೆಲಸವನ್ನು ನಿರಾತಂಕವಾಗಿ ಮಾಡುತ್ತಲೇ ಬರುತ್ತಿದ್ದಾರೆ. ಇದಕ್ಕೆ ದೇಶದ ಕೆಲವು ಮಾಧ್ಯಮಗಳು ಸಾಥ್ ನೀಡುತ್ತಿರುವುದು ದುರದೃಷ್ಟಕರ ಎಂದರು. ಕುಂದಾಪ್ರ ಡಾಟ್ ಕಾಂ ವರದಿ

ಗೋಭಕ್ಷನಿಗೆ ರಕ್ಷಣೆ ನೀಡುತ್ತಿರುವ ಕರ್ನಾಟಕದ ಸರಕಾರ ರಕ್ಷಕನನ್ನು ಗುಂಡಾಗಳನ್ನಾಗಿ ಕಾಣುತ್ತಿದೆ. ರಾಜ್ಯದಲ್ಲಿ ಸಮಾಜದ ವಿರೋಧದ ನಡುವೆಯೂ ಒಂದು ವರ್ಗವನ್ನು ಓಲೈಸಲು ಟಿಪ್ಪು ಜಯಂತಿ ಆಚರಿಸಲು ಹೊರಟ ರಾಜ್ಯ ಸರಕಾರಕ್ಕೆ ಪಂಚಾಯತ್ ಚುನಾವಣೆಯಲ್ಲಿ ಉಡುಪಿ, ಕೊಡಗು ಜಿಲ್ಲೆಯ ಜನ ತಕ್ಕ ಉತ್ತರ ನೀಡಿದ್ದಾರೆ. ದೇಶದಲ್ಲಿ ದೇಶದ್ರೋಹಿಗಳಿಗೆ ಬೆಂಬಲ ನೀಡುವ ಕೀಳು ರಾಜಕೀಯ ಆರಂಭಗೊಂಡಿದ್ದು ಅವರನ್ನು ಸಮಾಜ ದೇಶದ್ರೋಹಿಗಳು ಎಂದೇ ಕಾಣದೆ ಬೇರೆ ದಾರಿಯಿಂದ ಎಂದವರು ಗುಡುಗಿದರು. ಕುಂದಾಪ್ರ ಡಾಟ್ ಕಾಂ ವರದಿ

ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರ ಆನಂದ ಸ್ವಾಮೀಜಿ ಮಾತನಾಡಿ ಹಿಂದೂಗಳನ್ನು ಜಾತಿ ಆಧಾರದಲ್ಲಿ ಒಡೆಯುವ ಷಡ್ಯಂತ್ರ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಸಂತ್ಯಾತರಿಗಿರುವ ಬೆಲೆ ಬಹುಸಂಖ್ಯಾತರಿಗಿಲ್ಲದಿರುವುದು ನಮ್ಮ ದುರ್ದೈವ. ಎಲ್ಲೆಡೆಯೂ ಹಿಂದೂ ಧರ್ಮವನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ. ಧರ್ಮದ ಮೇಲೆ ಆಗುವ ಅನಾಚಾರನವನ್ನು ನಿಲ್ಲಸಲು ಹಿಂದೂಗಳ ಒಗ್ಗಟ್ಟಾಗಬೇಕಿದೆ ಎಂದರು.

ಭಾಗವಾನ್, ಅಮೀನ ಮಟ್ಟು ಕಲಿತಿದ್ದೇವೆ ಎಂಬ ಕಾರಣಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕನ್ಹಯ್ಯ ಕುಮಾರ್‌ನಂತಹ ದೇಶದ್ರೂಹಿಯನ್ನು ಬೆಂಬಲಿಸುವ ಕೆಲಸ ಮಾಡಲಾಗುತ್ತಿದೆ. ಅನಂತಕುಮಾರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವವರು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಗೋಮಾಂಸ ತಿನ್ನುವ ಹೇಳಿಕೆ ನೀಡಿದದರ ವಿರುದ್ದ ವಿರೋಧ ವ್ಯಕ್ತಪಡಿಸದೇ ಬಂಧನ ಮಾಡುವ ಒತ್ತಾಯೇ ಹೇರಿಲ್ಲವೇಕೆ ಎಂದವರು ಪ್ರಶ್ನಿಸಿದರು. ಕುಂದಾಪ್ರ ಡಾಟ್ ಕಾಂ ವರದಿ

Click here

Click here

Click here

Click Here

Call us

Call us

ಬಜರಂಗದಳದ ರಾಜ್ಯ ಸಹಸಂಚಾಲಕ ಶರಣ್ ಪಂಪ್‌ವೆಲ್ ಮಾತನಾಡಿ ದೇಶದಲ್ಲಿ ಅರವತ್ತು ಸಾವಿರಕ್ಕೂ ಹೆಚ್ಚು ವಿಹಿಂಪ ಘಟಕಗಳು ಧರ್ಮ ಜಾಗೃತಿ, ಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡಿದೆ. ಸಂಘಟನೆಯನ್ನು ಹತ್ತಿಕ್ಕುವ ಷಡ್ಯಂತ್ರ ನಡೆದರು ನಮ್ಮ ಬಲ ಕುಗ್ಗಿಲ್ಲ. ಹಿಂದೂ ಸಮಾಜದ ರಕ್ಷಣೆಗಾಗಿ ಜೈಲಿಗೆ ಹೋಗಲೂ ಸಿದ್ದ, ಪೆಟ್ಟು ತಿನ್ನಲೂ ಸಿದ್ಧ ಎಂದರು.

ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ರತ್ನಾಕರ ಅಮೀನ್, ಜಿಲ್ಲಾ ಸಂಚಾಲಕರುಗಳಾದ ಸುನಿಲ್, ಕೆ, ದಿನೇಶ್ ಮೆನನ್, ಗಿರೀಶ್ ಮೆಂಡನ್, ಜಿಲ್ಲಾ ಗೋರಕ್ಷಕ ಪ್ರಮುಖ ವಿಜಯಕುಮಾರ್ ಶೆಟ್ಟಿ, ಥಾಣಾ ವಿಹಿಪಂ ಜಿಲ್ಲಾಧ್ಯಕ್ಷ ಉಮೇಶ್ ಶೆಟ್ಟಿ ಪೊಲ್ಯ, ಬಜರಂಗದಳ ಜಿಲ್ಲಾ ಸಹಸಂಚಾಲಕ ಗಿರೀಶ್ ಕುಂದಾಪುರ, ತಾಲೂಕು ಸಂಚಾಲಕ ಸಂತೋಷ್ ಕುಂದಾಪುರ, ಮೋಹನದಾಸ್ ಶೆಟ್ಟಿ ಉಳ್ತೂರು, ಬಜರಂಗದಳ ಸಂಚಾಲಕ ಶ್ರೀನಾಥ ಶೆಟ್ಟಿ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ವರದಿ

ಸಮಾವೇಶಕ್ಕೂ ಮುನ್ನ ತೆಕ್ಕಟ್ಟೆ ಪೇಟೆಯಿಂದ ಕುಂಭಾಶಿಯ ಆನೆಗುಡ್ಡೆ ದೇವಸ್ಥಾನದ ಮುಖಮಂಟಪದ ತನಕ ಬೃಹತ್ ಶೋಭಾಯಾತ್ರೆ ಜರುಗಿತು. ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಮಾವೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋವಸ್ತ್ ವ್ಯವಸ್ಥೆ ಮಾಡಲಾಗಿತ್ತು. ತೆಕ್ಕಟ್ಟೆ ವಿಹಿಪಂ ಅಧ್ಯಕ್ಷ ರಜತ್ ಸ್ವಾಗತಿಸಿದರು. ವಿಹಿಂಪ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಶಾಂತ ಶೆಟ್ಟಿ ನಿರೂಪಿದರು.

Virat Hindu Samajotsava - VHP and Bajaranga dal Thekkatte (2) Virat Hindu Samajotsava - VHP and Bajaranga dal Thekkatte (3) Virat Hindu Samajotsava - VHP and Bajaranga dal Thekkatte (4) Virat Hindu Samajotsava - VHP and Bajaranga dal Thekkatte (5) Virat Hindu Samajotsava - VHP and Bajaranga dal Thekkatte (6)

Virat Hindu Samajotsava - VHP and Bajaranga dal Thekkatte (11) Virat Hindu Samajotsava - VHP and Bajaranga dal Thekkatte (7) Virat Hindu Samajotsava - VHP and Bajaranga dal Thekkatte (8) Virat Hindu Samajotsava - VHP and Bajaranga dal Thekkatte (9)

 

Kundapra.com

Virat Hindu Samajotsava - VHP and Bajaranga dal Thekkatte (12) Virat Hindu Samajotsava - VHP and Bajaranga dal Thekkatte (13) Virat Hindu Samajotsava - VHP and Bajaranga dal Thekkatte (14) Virat Hindu Samajotsava - VHP and Bajaranga dal Thekkatte (15) Virat Hindu Samajotsava - VHP and Bajaranga dal Thekkatte (16)

Virat Hindu Samajotsava - VHP and Bajaranga dal Thekkatte (21) Virat Hindu Samajotsava - VHP and Bajaranga dal Thekkatte (17) Virat Hindu Samajotsava - VHP and Bajaranga dal Thekkatte (18) Virat Hindu Samajotsava - VHP and Bajaranga dal Thekkatte (19) Virat Hindu Samajotsava - VHP and Bajaranga dal Thekkatte (20)

Leave a Reply