ಸರಸ್ವತಿ ವಿದ್ಯಾಲಯದಲ್ಲಿ ಆರ್.ಎನ್.ರೇವಣ್‌ಕರ್ ಬೀಳ್ಕೊಡುಗೆ

Call us

Call us

Call us

ಗಂಗೊಳ್ಳಿ : ಕೆಲಸದ ಮೇಲೆ ಇರುವ ಆಸಕ್ತಿ ಮತ್ತು ಶ್ರದ್ಧೆ ಎರಡೂ ಕೂಡ ವ್ಯಕ್ತಿಯನ್ನು ಸಮಾಜದಲ್ಲಿ ಎಲ್ಲರಿಂದಲೂ ಗೌರವಿಸಲ್ಪಡುವಂತೆ ಮಾಡುತ್ತದೆ.ಒಳ್ಳೆಯತನ ಸಾವಿರಾರು ಸ್ನೇಹಿತರನ್ನು ಸೃಷ್ಟಿಸಬಲ್ಲುದು. ವ್ಯಕ್ತಿಯ ಶ್ರೇಷ್ಠ ಮೌಲ್ಯದಿಂದ ಸಂಸ್ಥೆಯ ಗೌರವ ಘನತೆಗಳು ಹೆಚ್ಚುತ್ತವೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಬಿ. ನಾಯಕ್ ಅಭಿಪ್ರಾಯಪಟ್ಟರು.

Call us

Click Here

ಅವರು ಇಲ್ಲಿಯ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಸತತ ಮೂವತ್ತೆಂಟು ವರುಷಗಳ ಕಾಲ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾಗಿ, ಕಳೆದ ಎರಡು ವರುಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಸೇವಾನಿವೃತ್ತರಾದ ರಮಾಕಾಂತ್ ಎನ್ ರೇವಣ್ ಕರ್ ಅವರನ್ನು ಬೀಳ್ಗೊಡುವ ಸಮಾರಂಭದಲಿ ಅವರನ್ನು ಅಭಿನಂದಿಸಿ ಮಾತನಾಡಿದರು.

ಜಿ.ಎಸ್ ವಿ.ಎಸ್ ಅಸೋಶಿಯೇಶನ್ನಿನ ಕಾರ್ಯದರ್ಶಿ ಹೆಚ್ ಗಣೇಶ್ ಕಾಮತ್, ಸರಸ್ವತಿ ವಿದ್ಯಾಲಯದ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್, ಜಿ.ಎಸ್ ವಿ.ಎಸ್ ಅಸೋಶಿಯೇಶನ್ನಿನ ಅಧ್ಯಕ್ಷರಾದ ಡಾ.ಕಾಶೀನಾಥ ಪೈ , ಕಛೇರಿ ಸಿಬ್ಬಂದಿ ವರ್ಗದವರು ಉಪನ್ಯಾಸಕ ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

ಸಾಹಿತಿ ಕೋ. ಶಿವಾನಂದ ಕಾರಂತ, ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ , ಸ.ವಿ.ಫ್ರೌಢ ಶಾಲೆಯ ಉಪ ಪ್ರಾಂಶುಪಾಲ ವಾಮನದಾಸ ಭಟ್, ದೈಹಿಕ ಶಿಕ್ಷಕ ಸದಾನಂದ ವೈದ್ಯ, ರೋಟರಿ ದಕ್ಷಿಣ ಕುಂದಾಪುರದ ಮಾಜಿ ಅಧ್ಯಕ್ಷ ಕೆ.ಪಿ.ಭಟ್, ಕಛೇರಿಯ ನಿಕಟವರ್ತಿ ಸದಾಶಿವ ಗಾಣಿಗ, ಉಪನ್ಯಾಸಕ ಪಿ ಎ ಥಾಮಸ್, ನರೇಂದ್ರ ಎಸ್ ಗಂಗೊಳ್ಳಿ, ರೇವಣ್‌ಕರ್ ಅವರನ್ನು ಅಭಿನಂದಿಸಿ ಮಾತನಾಡಿದರು. ಈ ಸಂಧರ್ಭದಲ್ಲಿ ಸಮಸ್ತ ಕಾಲೇಜಿನ ಬಳಗದ ಪರವಾಗಿ ಆರ್.ಎನ್.ರೇವಣ್‌ಕರ್‌ರನ್ನು ಸನ್ಮಾನಿಸಲಾಯಿತು.
ಸಂಸ್ಕೃತ ಅಧ್ಯಾಪಕ ಶಂಕರನಾರಾಯಣ ಭಟ್ ಪ್ರಾರ್ಥಿಸಿದರು.ಉಪನ್ಯಾಸಕ ಹೆಚ್ ಭಾಸ್ಕರ ಶೆಟ್ಟಿ ಕಾರ‍್ಯಕ್ರಮ ನಿರ್ವಹಿಸಿದರು. ಆಂಗ್ಲ ಮಾಧ್ಯಮ ಫ್ರೌಢಶಾಲೆಯ ಮುಖ್ಯೋಪಧ್ಯಾಯ ರಾಘವೇಂದ್ರ ಶೇರುಗಾರ್ ವಂದಿಸಿದರು.
ವರದಿ ; ನರೇಂದ್ರ ಎಸ್ ಗಂಗೊಳ್ಳಿ.

Leave a Reply