ಮಕ್ಕಳನ್ನು ವಿದ್ಯಾವಂತರನ್ನಾಗಿ, ರಾಷ್ಟ್ರಪ್ರೇಮವನ್ನೂ ಬೆಳೆಸಿ: ಪ್ರೇಮಾನಂದ ಶೆಟ್ಟಿ ಕಟ್ಗೇರಿ

Call us

Call us

Call us

ಬೈಂದೂರು: ಸೃಷ್ಠಿಯ ದೃಷ್ಠಿಯಲ್ಲಿ ನಾವೆಲ್ಲರೂ ಪ್ರಕೃತಿಯ ಮಕ್ಕಳು. ಹಾಗೆಯೇ ಸಸ್ಯ ಸಂಕುಲಗಳು ಆಯಾಯ ಪ್ರಾಂತ್ಯ, ಪ್ರದೇಶಗಳಲ್ಲಿ ಬೆಳೆಯುತ್ತಿದ್ದರೂ ಅವುಗಳು ಸಿಹಿಯನ್ನು ನೀಡುತ್ತವೆ. ಆದರೆ ಇಂದು ಸಮಾಜದಲ್ಲಿ ಹಿರಿಯರು ವಿಕೃತ ವಿಚಾರಗಳು ಹೆಚ್ಚು ಪ್ರಕಟಮಾಡುತ್ತಿರುವ ಹಿನ್ನೆಲೆಯಲ್ಲಿ ಬಾಲ್ಯದಲ್ಲಿಯೇ ಮಗುವಿನ ಮಗ್ಧ ಮನಸುಗಳು ಇಂತಹ ಕೃತ್ಯಗಳಿಂದ ಆಕರ್ಷಿತರಾಗಿ ಮುಂದೆ ತಪ್ಪುದಾರಿಯಲ್ಲಿ ಸಾಗುವುದರ ಮೂಲಕ ರಾಷ್ಟ್ರವಿರೋಧಿಯಾಗಿ ಬಿಂಬಿಸಲ್ಪಡುತ್ತಾನೆ ಎಂದು ನಂದಗೋಕುಲ ಶಿಶುಮಂದಿರದ ವ್ಯವಸ್ಥಾಪಕ ಪ್ರೇಮಾನಂದ ಶೆಟ್ಟಿ ಕಟ್ಗೇರಿ ಹೇಳಿದರು.

Call us

Click Here

ಅರಮಕೋಡಿ ಶ್ರೀ ಈಶ್ವರ ಸೇವಾ ಸಮಿತಿ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿದ ಉಪ್ಪುಂದೋತ್ಸವದಲ್ಲಿ ಮಗು ಮತ್ತು ಸಂಸ್ಕಾರಯುಕ್ತ ಶಿಕ್ಷಣ ಹಾಗೂ ರಾಷ್ಟ್ರ ದೇವೋಭವದ ಕುರಿತು ಉಪನ್ಯಾಸ ನೀಡಿದರು. ಸಂಸ್ಕಾರದ ಶಿಕ್ಷಣ ಮನೆಯಿಂದಲೇ ಪ್ರಾರಂಭವಾಗುವುದರಿಂದ ಮೊದಲು ತಾಯಂದಿರಿಗೆ ತಯಾರು ಮಾಡಬೇಕು. ಬಾಲ್ಯದಲ್ಲಿ ಮಕ್ಕಳ ಮನಸ್ಸಿನೊಳಗೆ ಪ್ರಜ್ಞೆ ಮೂಡಿಸುವ ವಿವೇಕವನ್ನು ತುಂಬುವುದನ್ನು ಬಿಟ್ಟು, ಸ್ವಾಭಾವಿಕ ಕಲಿಕೆಯ ಅವಕಾಶ ಕೊಡದೇ ಅವರ ಭಾವನೆಗಳಗೆ ವಿರೋಧವಾಗಿ ಬೆಳೆಸುವುದರಿಂದ ರಾಷ್ಟ್ರದ್ರೋಹಿಯಾಗಲು ಪರೋಕ್ಷವಾಗಿ ಆಸ್ಪದ ನೀಡಿದಂತಾಗುತ್ತದೆ. ಜಾತಿ, ಧರ್ಮದ ವಿಷಬೀಜ ಬಿತ್ತಿ ಮುಗ್ಧ ಮನಸುಗಳನ್ನು ಕದಡುವ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದರು.

ಪುಸ್ತಕದ ಬದನೆಕಾಯಿ ಮಸ್ತಕದೊಳಗೆ ತುಂಬಿಸುವ ಧಾವಂತದಲ್ಲಿ ತಮ್ಮ ವಂಶವಾಹಿನಿ ಗುಣಗಳನ್ನು ಜೀವನದ ಸಿದ್ದಾಂತಗಳನ್ನು ಹೆತ್ತವರು ಕಳೆದುಕೊಳ್ಳುತ್ತಿದ್ದಾರೆ. ಇದು ತಮ್ಮ ಮಕ್ಕಳು ದೊಡ್ಡ ಹುದ್ದೆಯಲ್ಲಿದ್ದು ನೋಟಿನಕಟ್ಟುಗಳನ್ನು ಮನೆಯ ಬೀರುವಿನಲ್ಲಿಡುವ ಆಲೋಚನೆಯೇ ಹೊರತು ಬೇರೆನೂ ಅಲ್ಲ. ಇದನ್ನು ಹೊರತುಪಡಿಸಿದ ಶಿಕ್ಷಣದ ಅರಿವು ಮಕ್ಕಳಿಗೆ ನೀಡುವುದರ ಮೂಲಕ ರಾಷ್ಟ್ರಕ್ಕೆ ಪೂರಕವಾಗಿ ಬೆಳೆಯುವಂತಾಗಲು ತಾಯಂದಿರು ಯೋಚಿಸಬೇಕು. ಪ್ರೇರಣೆಯಿಂದ ಮತಾಂತರ ಹೆಚ್ಚಾಗಿ ಆಂತರಿಕ ಜಗಳ ಹೆಚ್ಚುತ್ತಿರುವ ಬಗ್ಗೆಯೂ ಕೂಡಾ ಪ್ರಾರಂಭದಲ್ಲಿ ಜಾಗೃತೆವಹಿಸಬೇಕು. ಮಕ್ಕಳನ್ನು ಸಮರ್ಥಿಸುವ ಮೊದಲು ನಮ್ಮ ಆತ್ಮಸಾಕ್ಷಿ ಹಾಗೂ ಪ್ರಕೃತಿಗೆ ಅನುಗುಣವಾಗಿ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂದರು.

ನಾಗೂರು ಸಂದೀಪನ್ ಆಂಗ್ಲಮಾಧ್ಯ ಶಾಲೆಯ ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ನಿತ್ಯಾನಂದ ಗಾಂವಕರ್ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಹಂಜ, ನ್ಯಾಯವಾದಿ ವಿಶ್ವನಾಥ ಶೆಟ್ಟಿ, ಮತ್ಸ್ಯೋದ್ಯಮಿ ಲಿಂಗಯ್ಯ, ಮಡಿಕಲ್ ಸಹಿಪ್ರಾ ಶಾಲಾ ಮುಖ್ಯಶಿಕ್ಷಕ ಕುಷ್ಟು ಬಿಲ್ಲವ, ಸಮಿತಿಯ ಅಧ್ಯಕ್ಷ ಮುರಳಿಧರ ಎಂ. ಉಪಸ್ಥಿತರಿದ್ದರು. ಎಂಐಟಿ ಉಪನ್ಯಾಸಕ ಗೋಪಾಲ ಸ್ವಾಗತಿಸಿ, ಗ್ರಾಪಂ ಮಾಜಿ ಅಧ್ಯಕ್ಷ ಜಗನ್ನಾಥ ಎಂ. ವಂದಿಸಿದರು. ಪ್ರಸನ್ನಕುಮಾರ್ ಖಾರ್ವಿ ನಿರೂಪಿಸಿದರು.

Leave a Reply