ಕುಂದಾಪುರ: ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ಆಶ್ರಯದಲ್ಲಿ ಕಾರವಾರದ ಕೋಡಿಭಾಗನ ಸಾಗರ ದರ್ಶನ ಸಭಾಭವನದಲ್ಲಿ ಇತ್ತೀಚಿಗೆ ಜರಗಿದ 56ನೇ ಮಹಾಸಭೆಯಲ್ಲಿ ಅಪೂರ್ವ ಪ್ರಾಚ್ಯ ವಸ್ತು ಸಂಗ್ರಾಹಕ, ವ್ಯಂಗ್ಯಚಿತ್ರಗಾರ, ಚುಟುಕು ಕವಿ ಹಾಗೂ ಜಿ.ಬಿ.ಕಲೈಕಾರ್ ಗಂಗೊಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ಕೆ.ಬಿ.ಖಾರ್ವಿ ಅವರು ಜಿ.ಬಿ.ಕಲೈಕಾರ್ ಅವರನ್ನು ಸನ್ಮಾನಿಸಿ ಮಾತನಾಡಿ ಬಹುಮುಖ ಪ್ರತಿಭೆಯಾಗಿರುವ ಕಲೈಕಾರ್ ಅವರು ವಿಶಿಷ್ಟ ಸಾಧನೆ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಇವರ ಸಾಧನೆಗೆ ಕರ್ನಾಟಕ ಸರಕಾರದ ಸ್ವಾತಂತ್ರ್ಯೋತ್ಸವ ಪ್ರಶಸ್ತಿ, ಎಸ್.ಎಮ್.ಎಸ್. ಕಲಾ ವೈಭವ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೊಂಕಣಿ ನಕ್ಷತ್ರ ಬಿರುದು ಪುರಸ್ಕೃತರಾಗಿದ್ದಾರೆ ಎಂದರು.
ಮಹಾಜನ ಸಭಾದ ಹಿರಿಯ ಉಪಾಧ್ಯಕ್ಷ ಮೋಹನ ಬಾನವಾಳಿಕರ್, ಉಪಾಧ್ಯಕ್ಷರುಗಳಾದ ರವಿ ಟಿ.ನಾಯ್ಕ್ ಮುಂಬೈ, ದೇವಪ್ಪ ತಾಂಡೇಲ ಗೋವಾ, ತಿಮ್ಮಪ್ಪ ಎಂ.ಖಾರ್ವಿ ಭಟ್ಕಳ, ಸೂರ್ಯಕಾಂತ ಖಾರ್ವಿ ಹೊನ್ನಾವರ, ಗಣಪತಿ ಎಂ.ಬಾನವಾಳಿಕರ್ ಬೇಲಿಕೇರಿ, ಬಿ.ಎ.ಖಾರ್ವಿ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಉಮಾನಾಥ ಗಂಗೊಳ್ಳಿ, ಕೋಶಾಧಿಕಾರಿ ಜಿ.ಪುರುಷೋತ್ತಮ ಆರ್ಕಾಟಿ, ದೇಶದ ಭದ್ರತಾ ಯೋಧ ಬಸ್ರೂರು ಗಣಪತಿ ಖಾರ್ವಿ, ಸಲಹೆಗಾರ ವಸಂತ ಕೆ.ಖಾರ್ವಿ ಭಟ್ಕಳ, ಎನ್.ಡಿ.ಖಾರ್ವಿ ಭಟ್ಕಳ ಮತ್ತು ಸಂಘಟನಾ ಕಾರ್ಯದರ್ಶಿ ಪುಷ್ಪಾಕರ ಖಾರ್ವಿ ಉಡುಪಿ ಮೊದಲಾವರು ಉಪಸ್ಥಿತರಿದ್ದರು.