ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಬೆಂಬಲಿಗರು, ಹಿತೈಷಿಗಳ ಮತ್ತು ಸಮಾನ ಮನಸ್ಕರಿಂದ ಮೌಲ್ಯಯುತ ರಾಜಕಾರಣ ಎತ್ತಿ ಹಿಡಿಯುವ ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ’ಜನಪರ, ಪ್ರಗತಿಪರ’ ಎಂಬ ಸಂಘಟನೆ ಹುಟ್ಟುಹಾಕಲಾಯಿತು.
ಕುಂದಾಪುರ ಹಿರಿಯ ರಾಜಕಾರಣಿ ಮಾಣಿಗೋಪಾಲ್ ನಿವಾಸ ದ್ವಾರಕದಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ಸಂಘಟನೆಗೆ ತಾತ್ಕಾಲಿಕ ಸಂಚಾಲನ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದ್ದು, ಮಾಣಿ ಗೋಪಾಲ ಮುಖ್ಯ ಸಂಚಾಲಕರಾಗಿಯೂ, ವಿ. ಚಂದ್ರಶೇಖರ ಹೆಗ್ಡೆ ದಬ್ಬೆಕಟ್ಟೆ, ಕಾಳಪ್ಪ ಪೂಜಾರಿ, ರಾಮಕೃಷ್ಣ ಹೇರ್ಳೆ, ಗಿರೀಶ್ ಜಿ.ಕೆ, ಶೈಲೇಶ್ ಕುಂದಾಪುರ ಮತ್ತು ಕಾಳಾವರ ಶ್ರೀಧರ್ ಆಚಾರ್ಯ ಅವರನ್ನು ಸಹಸಂಚಾಲಕರಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂತೋಷ್ ದೇವಾಡಿಗ ಕೆ.ಎನ್, ಸ್ಟೀವನ್ ಡಿ.ಕೋಸ್ತ, ವಿಜಯ ಡಿಸೋಜ, ನಾಗರಾಜ ಪುತ್ರನ್, ರಂಜಿತ್ ಕುಮಾರ್ ಶೆಟ್ಟಿ, ದೀಪಕ್ ನಾವುಂದ, ಸುಖ್‌ಪಾಲ್, ಚಂದ್ರಶೇಖರ ಶೆಟ್ಟಿ, ಸತೀಶ್ ಹೆಗ್ಡೆ, ಕೋಡಿ ಸುನಿಲ್ ಪೂಜಾರಿ ಉಪಸ್ಥಿತರಿದ್ದರು. ಮಾರ್ಚ್ ತಿಂಗಳ ಕೊನೆ ವಾರದಲ್ಲಿ ಸಂಘಟನೆಯ ವಿದ್ಯುಕ್ತ ಉದ್ಘಾಟನೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯದ ಪ್ರಮುಖ ಚಿಂತಕರು ಭಾಗವಹಿಸಲಿದ್ದಾರೆ ಎಂದು ಸಂಘಟನೆ ಪ್ರಮುಖರು ತಿಳಿಸಿದ್ದಾರೆ.