ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು, ಇಲ್ಲಿನ ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದಪ್ರೊ.ಗಿರೀಶ್ ಮನಶಾಸ್ತ್ರಜ್ಞರು ಕುಂದಾಪುರ ಇವರು ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗೆ ಮತ್ತು ಮನಸ್ಸನ್ನು ಕೇಂದ್ರಿಕರಿಸುವ ಬಗೆ ಹೇಗೆ ಎನ್ನುವ ಕುರಿತು ತಿಳಿಸುತ್ತಾ, ಯಾವುದೇ ವಿಷಯವಾಗಲಿ ನಕರಾತ್ಮಕ ಯೋಜನೆ ನಮ್ಮದಾಗಿರಬೇಕು. ಬದಲಾವಣೆ ಎನ್ನುವುದು ಬದುಕಿನ ನಿಯಮ , ಎಂತಹ ಸವಾಲುಗಳು ಬಂದರೂ ಅದನ್ನು ಎದುರಿಸುವ ಛಲಗಾರಿಕೆ ನಮ್ಮದಾಗಿರಬೇಕು ಎಂದು ತಿಳಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ.ಬಿ.ಎ. ಮೇಳಿ ಉಪಸ್ಥಿತರಿದ್ದರು . ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಡಾ. ಉಮೇಶ್ ಮಯ್ಯ ಕಾರ‍್ಯಕ್ರಮ ಸಂಯೋಜಿಸಿದರು.