ಬೈಂದೂರು: ಲಯನ್ಸ್ ಕ್ಲಬ್ ವತಿಯಿಂದ ಹನುಮಂತಪ್ಪ ಕೊಪ್ಪದ ಕುಟುಂಬಕ್ಕೆ ಪರಿಹಾರ

Call us

Call us

Call us

ಬೈಂದೂರು: ವಿಶ್ವದ ಅತಿ ಎತ್ತರದ ಸಮರ ಕಣ ಸಿಯಾಚಿನ್ ನೀರ್ಗಲ್ಲ ಪ್ರದೇಶದ ಹಿಮಸಾಗರದಡಿ ಸಿಲುಕಿ ಆರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಫೆ. ೧೧ ರಂದು ಹುತಾತ್ಮರಾದ ಧಾರವಾಢ ಜಿಲ್ಲೆಯ ಕುಂದುಗೋಡು ತಾಲೂಕಿನ ಬೆಟಂದೂರು ಗ್ರಾಮದ ವೀರ ಯೋಧ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ್ ಅವರ ಧರ್ಮಪತ್ನಿ ಮಾದೇವಿ ಕೊಪ್ಪದ ಅವರಿಗೆ ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ವತಿಯಿಂದ 25ಸಾವಿರದ ಪರಿಹಾರದ ಚೆಕ್ ವಿತರಿಸಲಾಯಿತು.

Call us

Click Here

ಪರಿಹಾರದ ಚೆಕ್ ವಿತರಿಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ಗೋಕುಲ್ ಶೆಟ್ಟಿ ಮಾತನಾಡಿ, ಯೋಧ ಹನುಮಂತಪ್ಪ ಸಿಯಾಚಿನ್ ಹಿಮದ ರಾಶಿಯ ೩೫ ಅಡಿ ಆಳದಲ್ಲಿ ಸಿಲುಕಿ, ಆರು ದಿನಗಳ ಕಾಲ ಆಹಾರವಿಲ್ಲದೇ ಜೀವ ಹಿಡಿದಿಟ್ಟುಕೊಂಡಿರುವುದು ಸೋಜಿಗವೇ ಸರಿ, ಆದರೆ ಅವರ ಆರೋಗ್ಯ ಸುಧಾರಿಸಲೆಂದು ದೇಶದ ಕೋಟ್ಯಾಂತರ ಜನರ ಪ್ರಾರ್ಥಿಸಿದರು, ಅವರನ್ನು ಉಳಿಸಿಕೊಳ್ಳಲು ಸಾಧವಾಗದಿರುವುದು ವಿಷಾದನೀಯ ಸಂಗತಿ. ದೇಶ ವೀರ ಯೋಧನೊಬ್ಬನನ್ನು ಕಳೆದುಕೊಂಡಿದೆ. ಸರ್ಕಾರ ಅವರ ಕಟುಂಬಕ್ಕೆ ಪರಿಹಾರದ ಮೊತ್ತ ನಿಡಿದರೂ, ಅವರ ಪತ್ನಿಗೆ ಶೀಘ್ರ ಉದ್ಯೋಗದ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪರಿಹಾರದ ಚೆಕ್ ಸ್ವೀಕರಿಸಿ ಮಾದೇವಿ ಹೆಚ್. ಕೊಪ್ಪದ ಮಾತನಾಡಿ, ದೇಶದ ಗಡಿ ಕಾಯಲು ತೆರಳಿದ ಪತಿ ಹುತಾತ್ಮರಾದ ಸಂಗತಿ ಮನಸ್ಸಿಗೆ ನೋವಾಗಿದ್ದರು, ದೇಶದ ಜನರ ಹರಕೆ ಹಾರೈಕೆ ಸದಾ ನಮ್ಮ ಕುಟುಂಬವನ್ನು ಕಾಪಾಡಲಿದೆ, ಏಳೇಳು ಜನ್ಮವಿದ್ದರೂ ನಾನು ಯೋಧನ ಪತ್ನಿಯಾಗಿ ಬದುಕಬೇಕೆಂಬ ಬಯಕೆಯಿದೆ ಎಂದರು. ಬೈಂದೂರು -ಉಪ್ಪುಂದ ಲಯನ್ಸ್ ಕ್ಲಬ್ ಕಾರ್ಯದರ್ಶಿ ಫಯಾಜ್ ಆಲಿ, ಹಾಗೂ ಸದಸ್ಯರು ಹಾಜರಿದ್ದರು.

Leave a Reply