ಕುಂದಾಪುರ: ಚಿಕ್ಕ ಬಳ್ಳಾಪುರದ ಸಿ.ವಿ.ವಿ ಕ್ರೀಡಾಂಗಣದಲ್ಲಿ 17 ವರ್ಷ ಒಳಗಿನ ಬಾಲಕಿಯರ ರಾಜ್ಯ ಮಟ್ಟದ ವಿಶೇಷ ಮಕ್ಕಳ ಕ್ರೀಡಾ ಕೂಟದಲ್ಲಿ ಬೈಂದೂರು ವಲಯದ ಹೆಮ್ಮಾಡಿ ಜನತಾ ಪ್ರೌಢ ಶಾಲಾ 10 ನೇ ತರಗತಿ ವಿದ್ಯಾರ್ಥಿನಿ ರಮ್ಯಾಗುಂಡು ಎಸೆತ ಪ್ರಥಮ, ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ, ಈಕೆ ತಂಡ ಪ್ರಶಸ್ತಿ ಮತ್ತು ಸಮಗ್ರ ಪ್ರಶಸ್ತಿಗೆ ಬಾಜನರಾಗಿ, ರಾಜ್ಯ ಮಟ್ಟದಲ್ಲಿ ಒಟ್ಟು 3 ಚಿನ್ನ ಪಡೆದು ಶಾಲೆಯ ಘನತೆ, ಗೌರವ ಹೆಚ್ಚಿಸಿದಕ್ಕೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ, ಬೈಂದೂರು ಕ್ಷೇತ್ರದ ಶಾಸಕ ಶ್ರೀ ಕೆ. ಗೋಪಾಲ ಪೂಜಾರಿ ಈಕೆಯ ಸಾಧನೆಗೆ ಅಭಿನಂದಿಸಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯ ಬಿ.ಮೋಹನದಾಸ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ದೇವೇಂದ್ರ ನಾಯ್ಕ್, ತಂಡದ ವ್ಯವಸ್ಥಾಪಕ ಜಗದೀಶ ಶೆಟ್ಟಿ ಇದ್ದರು.